ಲೋಕಸಭಾ ಚುನಾವಣೆ: ಶತಾಯುಷಿ ಬುಡ್ಡಮ್ಮ ಹನುಮಂತಪ್ಪ ಮಂತ್ರಿ ಅವರಿಂದ ಮತದಾನ

ಕೊಪ್ಪಳ 26: ಲೋಕಸಭಾ ಸಾರ್ವತ್ರಿಕ  ಚುನಾವಣೆ ನಡೆಯುತ್ತಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ದಿ. 23 ರಂದು ನಡೆದ ಮತದಾನ ವೇಳೆ ಜಿಲ್ಲೆಯ ಗಂಗಾವತಿ ವಿಧಾನಸಭಾ ಕೇತ್ರ ವ್ಯಾಪ್ತಿಯ ಹಾಗೂ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ನಿವಾಸಿ ಬುಡ್ಡಮ್ಮ ಹನುಮಂತಪ್ಪ ಮಂತ್ರಿ ಎಂಬ 105 ವರ್ಷ, ಇವರು ಮತಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.  

ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಸಗಲ್ ಮತದಾನ ಕೇಂದ್ರ ಸಂಖ್ಯೆ 08ರಲ್ಲಿ ಆಗಮಿಸಿದ ಶತಾಯುಷಿ ಬುಡ್ಡಮ್ಮ ಸಂವಿಧಾನಬದ್ಧವಾದ ಮತದಾನದ ಹಕ್ಕನ್ನು ಚಲಾಯಿಸಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. 717 ಇವರ ಮತದಾರ ಕ್ರಮ ಸಂಖ್ಯೆಯಾಗಿರುತ್ತದೆ. 

ರಾಜ್ಯದಲ್ಲಿ ಏಪ್ರಿಲ್. 18 ಹಾಗೂ 23 ರಂದು ಎರಡು ಹಂತದಲ್ಲಿ ಮತದಾನ ನಡೆದಿದ್ದು, ಇದರಲ್ಲಿ ಶತಾಯುಷರು ಮತದಾನ ಮಾಡಿರುವುದು ಬಹಳ ವಿರಳವಾಗಿರುತ್ತದೆ.  ಆದರೆ ಕೊಪ್ಪಳ ಜಿಲ್ಲೆಯ 105 ವರ್ಷದ ಬುಡ್ಡಮ್ಮ ಹನುಮಂತಪ್ಪ ಮಂತ್ರಿ ಎಂಬ ಶತಾಯುಷಿ ಅಜ್ಜಿಯು ಮತದಾನ ಮಾಡಿರುವುದು ಈಡಿ ರಾಜ್ಯದ ಗಮನ ಸೆಳೆದಂತಾಗಿದೆ.  ಈ ಶತಾಯುಷಿಯು ಮತ ಚಲಾಯಿಸಿದ್ದು ಎಲ್ಲರಿಗೂ ಮಾದರಿಯಂತಾಗಿದೆ.