ಗದಗ 22: ಲೋಕಸಭಾ ಚುನಾವಣೆ ಅಂಗವಾಗಿ ಕನಾಟಕ ರಾಜ್ಯ ಕಾರ್ಯನಿರತ ಹಾಗೂ ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗಾಗಿ ಎಪ್ರೀಲ್ 18 ಮತ್ತು 23ರಂದು ರಾಜ್ಯದಲ್ಲಿ ನಡೆದ ಎರಡು ದಿನದ ಮತದಾನದ ಚಟುವಟಿಕೆಗಳ ಕುರಿತು ರಾಜ್ಯ ಮಟ್ಟದ ಛಾಯಾ ಚಿತ್ರ ಸ್ಪರ್ಧೇಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಏರ್ಪಡಿಸಿತ್ತು. ಮತಗಟ್ಟೆ ಸಿದ್ದತೆ, ಮತದಾನದ ವಾತಾವರಣ, ಸಂಭ್ರಮ ಮುಂತಾದ ಇತ್ಯಾದಿ ವಿಷಯಾಧಾರಿತವಾಗಿ ರಾಜ್ಯದ ವಿವಿಧ ಜಿಲ್ಲೆಗಳ 44 ಛಾಯಾಗ್ರಾಹಕರು ಈ ಸ್ಪರ್ಧೇ ತಮ್ಮ ಛಾಯಾಚಿತ್ರಗಳನ್ನು ಸಲ್ಲಿಸಿದ್ದರು.
ಈ ಛಾಯಾಚಿತ್ರಗಳನ್ನು ವೀಕ್ಷಿಸಿ ಬಹುಮಾನಗಳಿಗೆ ಶಿಫಾರಸ್ಸು ಮಾಡಲು ಜಂಟಿ ಮುಖ್ಯ ಚುನಾವಣಾಧಿಕಾರಿಗಳಾದ ಎ.ವಿ.ಸೂರ್ಯಸೇನ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಸ್ವೀಪ್ ಹಿರಿಯ ಸಮಾಲೋಚಕರಾದ ಪಿ.ಎಸ್.ವಸ್ತ್ರದ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿದರ್ೇಶಕರಾದ ಭೃಂಗೇಶ, ಸದಸ್ಯರಾಗಿದ್ದ ಈ ಸಮಿತಿಗೆ ಚುನಾವಣಾ ಮಾಧ್ಯಮ ಸಮನ್ವಯಾಧಿಕಾರಿ ಜಡಿಯಪ್ಪ ಗೆದ್ಲಗಟ್ಟಿ ಸದಸ್ಯಕಾರ್ಯದಶರ್ಿಗಳಾಗಿದ್ದರು.
ಸಮಿತಿಯು ಆಯ್ಕೆ ಮಾಡಿದ ವಿವರ ಇಂತಿದೆ. ಪ್ರಜಾವಾಣಿಯ ಬೆಂಗಳೂರಿನ ರಂಜು ಪಿ. ಮೊದಲ ಬಹುಮಾನ ಪಡೆದರೆ ವಿಶ್ವವಾಣಿಯ ಕೊಪ್ಪಳದ ಪ್ರಕಾಶ ಕಂದಕೂರ ದ್ವಿತೀಯ ಹಾಗೂ ಗದಗ ಜಿಲ್ಲೆಯ ಕನ್ನಡ ಪ್ರಭ ದಿನಪತ್ರಿಕೆಯ ಛಾಯಾಗ್ರಾಹಕ ಶಂಕರ ಗುರಿಕಾರ ಮೂರನೇ ಬಹುಮಾನ ಪಡೆದಿದ್ದಾರೆ. ಇದಲ್ಲದೇ ಬೆಂಗಳೂರಿನ ಹವ್ಯಾಸಿ ಛಾಯಾಗ್ರಾಹಕ ಟಿ.ಕೆ.ಧನಂಜಯ, ಕಂದಾವರ ವೆಂಕಟೇಶ ಪ್ರೋತ್ಸಾಹಕರ ಮತ್ತು ಇಂಡಿಯನ್ ಎಕ್ಸಪ್ರೆಸ್ ಹಿರಿಯ ಛಾಯಾಗ್ರಾಹಕ ಗಡೇಕಲ್ ನಾಗಾರಾಜ್ ವಿಶೇಷ ಬಹುಮಾನ ಪಡೆದಿದ್ದಾರೆ. ಬಹುಮಾನ ವಿತರಣೆ ಕಾರ್ಯಕ್ರಮದ ದಿನವನ್ನು ತಿಳಿಸಲಾಗುವದು ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.