ಸ್ವಚ್ಛತೆ ಕಾಪಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಬಲರಾಮ್

ಧಾರವಾಡ 22: ಕ್ಷೇತ್ರಜನಸಂಪರ್ಕ ಕಾಯರ್ಾಲಯ, ಧಾರವಾಡ ಮತ್ತು ವಿಜಯಪುರ(ವಾತರ್ಾ ಮತ್ತು ಪ್ರಸಾರ ಸಚಿವಾಯ), ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ತಾಲೂಕ, ಈಜಟಜ ಔಣಣಡಿಜಚಿಛಿ ಃಣಡಿಜಚಿಣ ಆಚಿಡಿಚಿತಿಚಿಜ, ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಮತ್ತುಭಗೀರಥ (ಎನ ಜಿ ಓ) ಇವರುಗಳ ಆಯೋಜನೆಯಲ್ಲಿ ಸ್ವಚ್ಛ ಭಾರತ ಮಿಷನ್ (ನಗರ) ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವು ಧಾರವಾಡದ ನೆಹರು ನಗರ  ಸಮುದಾಯ ಭವನದಲ್ಲಿ ನಡೆಯಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ  ಸದಸ್ಯ ಬಲರಾಮ ಎನ್ಕುಸುಗಲ್, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು ಸ್ವಚ್ಛತೆಯನ್ನು ಕಾಪಾಡುವದು ನಾಗರಿಕರೆಲ್ಲರ ಕರ್ತವ್ಯವಾಗಿದೆ. ಮಹಾನಗರ ಪಾಲಿಕೆಯು ಕಸ ವಿಲೇವಾರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಇದರ ಉಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ತಾಲೂಕಿನ ಯೋಜನಾಧಿಕಾರಿಯವ ಉಲ್ಲಾಸ್ ಮೇಸ್ತರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸ್ವಚ್ಛ ಧಾಮರ್ಿಕ ಕ್ಷೇತ್ರವೆಂದು ಪ್ರಶಸ್ತಿಯು ದೊರೆತಿರುತ್ತದೆ. ಈ ಅಡಿಯಲ್ಲಿ ಧಮರ್ಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಧಾಮರ್ಿಕ ಶ್ರದ್ಧಾ ಕೇಂದ್ರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ಮತ್ತು ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು. ಸ್ವ-ಸಹಾಯ ಸಂಘಗಳ ಸದಸ್ಯರು, ಒಕ್ಕೂಟಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರೆಲ್ಲರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದಾರೆ. ಸಾರ್ವಜನಿಕರು ಸ್ವಚ್ಛತೆಯ ಬಗ್ಗೆ  ಹೆಚ್ಚಿನ ಆದ್ಯತೆ ನೀಡಿ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸೋಣ ಎಂದು ತಿಳಿಸಿದರು.

ಎಂ.ಬಿ ಸಬರದ, ಸಹಾಯಕ ಆಯುಕ್ತರ. ವಲಯ ಕಛೇರಿ ನಂ1. ಹು-ಧಾ ಮ ಪಾಲಿಕೆ. ಸಂತೋಷ ಯರಂಗಳಿ, ಪರಿಸರ ಅಭಿಯಂತರರು ಹು-ಧಾ ಮ ಪಾಲಿಕೆ. ನಿವೇದಿತ ದೀಕ್ಷಿತ್, ಭಗೀರಥ  (ಎನಜಿಓ) ಧಾರವಾಡ, ಡಾ. ಸವಿತಾ ನಾಡಗೌಡರ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ನೆಹರು ನಗರ. ಈ ತುಕಾರಾಮಗೌಡ ಕ್ಷೇತ್ರ ಪ್ರಚಾರ ಅಧಿಕಾರಿಗಳು ಧಾರವಾಡ. ಶಶಿಕಲಾ ಐ ಕುರಿ, ಮುಖ್ಯ ಗುರುಗಳು, ಸಕರ್ಾರಿಕನ್ನಡ ಹಿರಿಯ ಪ್ರಾಥಮಿಕ ಶಾಲೆ ನೆಹರುನಗರ. ಜಿ ಎಲ್ ಶೇಖ್, ಮುಖ್ಯ ಗುರುಗಳು ಸಕರ್ಾರಿಉದರ್ು ಹಿರಿಯ ಪ್ರಾಥಮಿಕ ಶಾಲೆ, ನೆಹರುನಗರ ಜಯಂತಿ ನಾಯ್ಕ್ ಮೇಲ್ವಿಚಾರಕರು ಶ್ರೀ,ಕ್ಷೇ,ಧ,ಗ್ರಾಯೋಜನೆ, ಸೇವಾಪ್ರತಿನಿಧಿಗಳು ಹೇಮಾ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾಗೃತಿ ಅಭಿಯಾನದ ಜಾಥಾ ನೆಹರು ನಗರದ ಎಲ್ಲಾ ದಾರಿಗಳಲ್ಲಿ ನಡೆಸಲಾಯಿತು.