ಧಾರವಾಡ 30: ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಇಂದು ಬೆಳಿಗ್ಗೆ ಮಹಾತ್ಮಾಗಾಂಧೀಯವರ ಹುತಾತ್ಮ ದಿನಾಚರಣೆ ಅಂಗವಾಗಿ ಅಪರ ಜಿಲ್ಲಾಧಿಕಾರ ಇಬ್ರಾಹಿಂ ಮೈಗೂರ ಅವರು ಗಾಂಧೀಜಿವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ, ಗೌರವ ಸಲ್ಲಿಸಿದರು.
ಕುಷ್ಟರೋಗದ ಅರಿವು ಎಲ್ಲರಿಗೂ ಮೂಡಬೇಕು. ಕುಷ್ಟರೋಗ ಮುಕ್ತ ಭಾರತವನ್ನಾಗಿ ಮಾಡಬೇಕೆಂದು ಗಾಂಧೀಜಿಯವರ ಕನಸಾಗಿತ್ತು. ಗಾಂಧೀಜಿಯವರು ಕುಷ್ಟರೋಗಿಗಳ ಸೇವೆಯನ್ನು ಮಾಡಿದ್ದರು. ನಾವೆಲ್ಲರೂ ನಮ್ಮ ಜಿಲ್ಲೆಯನ್ನು ಕುಷ್ಟರೋಗದಿಂದ ಮುಕ್ತಗೊಳಿಸಲು ಪಣ ತೊಟ್ಟು ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಕುಷ್ಠರೋಗ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ತರಲು ನಾವು ಬದ್ಧರಾಗಿದ್ದೇವೆ.
ವೈಯಕ್ತಿಕ ಹಾಗೂ ನಾಗರಿಕ ವ್ಯಕ್ತಿಭಾವದ ಒಗ್ಗಟ್ಟಿನಿಂದ ಸಾಮಾಜಿಕ ಕಳಂಕ, ಪಿಡುಗುಗಳನ್ನು ಹೋಗಲಾಡಿಸ, ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗೊಳಪಡಿಸಿ ಬಾಪೂಜಿಯವರ ನಂಬಿಕೆ ಮತ್ತು ಸದುದ್ದೇಶಗಳನ್ನು ಸಾಕಾರಗೊಳಿಸಲು ಸನ್ನದ್ಧರಾಗಿದ್ದೇವೆ ಎಂದು ಪ್ರತಿಜ್ಞಾ ವಿಧಿ ಭೋಧಿಸಿದರು.
ಇದೇ ಸಂದರ್ಭದಲ್ಲಿ ಕುಷ್ಠರೋಗ ಅರಿವು ಆಂದೋಲನಕ್ಕೆ ಸಹಿ ಮಾಡುವ ಮೂಲಕ ಅಪರ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಈ ಆಂದೋಲನ ಇಂದಿನಿಂದ 15 ದಿನ ಆಚರಣೆ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ದೊಡ್ಡಮನಿ, ಕುಷ್ಠರೋಗ ಸಲಹೆಗಾತರ್ಿ ಡಾ, ಎ.ಬಿ. ಸಾಲಿ, ಡಿಎಲ್ಓ ಡಾ. ಶಶಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಕೆ. ಚೌಹಾಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಿಮ್ಸ್ ವಿದ್ಯಾಥರ್ಿಗಳು ಗಾಂಧಿವೇಷ ಧರಿಸಿ ಆಕಷರ್ಿಸಿದರು.