ಚಿಕ್ಕೋಡಿಯಲ್ಲಿ ಸಾಮೂಹಿಕ ವಿವಾಹ: ಉಚಿತ ಬಾಸಿಂಗ ವಿತರಣೆ
ಯಮಕನಮರಡಿ 22: ಸ್ಥಳೀಯ ಬಾಸಿಂಗ ತಯಾರಕರು ಹಾಗೂ ಸಮಾಜ ಸೇವಕರಾದ ಸೋಮಶೇಖರ ಹೊರಕೇರಿ ಅವರು ಚಿಕ್ಕೋಡಿ ಶ್ರೀಸಾಯಿ ಮಂದಿರದಲ್ಲಿ ಜರುಗಲಿರುವ 18ನೇ ವಾರ್ಷಿಕೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹಗಳಿಗೆ ಉಚಿತವಾಗಿ ವಿತರಿಸಲಿದ್ದು, 40 ಬಾಸಿಂಗಗಳನ್ನು ಸ್ಥಳೀಯ ಗ್ರಾಮದೇವತೆ ಲಕ್ಷ್ಮೀ ಮಂದಿರದಲಿ ದಿ. 21ರಂದು ಪೂಜೆ ನೆರವೇರಿಸಿ ಅಕ್ಷತಾರೋಪಣ ಮಾಡಲಾಯಿತು.
ಗ್ರಾಮದ ಮುಖಂಡರು ಹಾಗೂ ಯುವಧುರಿಣರಾದ ರವೀಂದ್ರ ಹಂಜಿ ಅವರು ಬಾಸಿಂಗಗಳಿಗೆ ಪೂಜೆ ಸಲ್ಲಿಸಿದರು. ಭಜರಂಗದಳ ಮುಖಂಡ ವಿಜಯ ಜಿಂಡ್ರಾಳಿ ಸಂತೋಷ ಖೋತ, ಲಕ್ಷ್ಮಣ ಶಿಳ್ಳಿ, ದಾಣಿಗಳಾದ ಸೋಮಶೇಖರ ಹೋರಕೇರಿ ಸುರೇಶ ಬಸಿಗೇರ, ಹೆರಿಗೆಗೆ ಉಚಿತವಾಗಿ ಆಟೋ ಸೇವೆ ಸಲ್ಲಿಸುವ ಶಿವಾನಂದ ಹಿರೇಮಠ, ಶಶಿಕುಮಾರ ಶಿಳ್ಳಿ ಮುಂತಾದವರು ಉಪಸ್ಥಿತರಿದ್ದು ಪೂಜಾ ಸಮಾರಂಭ ನೆರವೇರಿಸಿದರು.