ಬೆಳಗಾವಿ: 14 : ರಾಜ್ಯದ 20 ಪ್ರವಾಸಿ ತಾಣಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಾಸ್ಟರ್ಪ್ಲಾನ್ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಶಾಸಕ ಉಮಾನಾಥ್ ಎ.ಕೋಟ್ಯಾನ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೀಘ್ರಗತಿ ನೀಡುವ ಸಲುವಾಗಿ ಪ್ರಪ್ರಥಮ ಬಾರಿಗೆ ಸ್ಮಾರಕಗಳ ಸಂರಕ್ಷಣೆಯೂ ಒಳಗೊಂಡಂತೆ ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯದಲ್ಲಿ 20 ತಾಣಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
1.ಬೀದರ್ ಕೋಟೆ ಹಾಗೂ ಸುತ್ತಮುತ್ತ ಸ್ಮಾರಕಗಳು, 2. ಕಲಬುರಗಿ ಕೋಟೆ, 3. ಮಳಖೇಡ ಕೋಟೆ, 4.ಸನ್ನತಿ, 5.ವಿಜಯಪುರ ಗೋಲಗುಂಬಜ್ ಸುತ್ತಲಿನ ಸ್ಮಾರಕಗಳು, 6. ಬಾದಾಮಿ, 7.ಐಹೊಳೆ, 8. ಪಟ್ಟದಕಲ್ಲು, 9.ಹಂಪಿ, ಆನೆಗುಂದಿ, 10.ನಂದಿಬೆಟ್ಟ, 11.ಶ್ರೀರಂಗಪಟ್ಟಣ ಕೋಟೆ ಸುತ್ತಮುತ್ತಲಿನ ಸ್ಮಾರಕಗಳು, 12. ಮೈಸೂರು ಚಾಮುಂಡಿಬೆಟ್ಟ ಇತರೆ ಪ್ರದೇಶಗಳು, 13. ಮೇಲುಕೋಟೆ, 14. ಶ್ರವಣಬೆಳಗೊಳ, 15. ಬೆಲೂರು ಹಳೆಬೀಡು, 16. ಚೌಡದನಾಪುರ, 17. ದೇವನಹಳ್ಳಿ ಕೋಟೆ, 18. ಮಾಗಡಿ, 19.ಬನವಾಸಿ ಹಾಗೂ 20. ಲಕ್ಕುಂಡಿ ತಾಣಗಳನ್ನು ಸಮಗ್ರ ಅಭಿವೃದ್ಧಿ ಯೋಜನೆಗೆ ಗುರುತಿಸಲಾಗಿದೆ ಎಂದರು.
ಈ ಎಲ್ಲ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಮೆ.ಇಂಟ್ಯಾಕ್ ಹಾಗೂ ಮೆ.ಐಹೆಚ್ಸಿಎನ್ಎಫ್ ಸಂಸ್ಥೆಗಳ ಮೂಲಕ ಮಾಸ್ಟರ್ಪ್ಲಾನ್ ತಯಾರಿಸಲಾಗಿದ್ದು ಈ ಯೋಜನೆಯನ್ನು ಪರಿಶೀಲಿಸಿ ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯಾಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಅವರಿ ತಿಳಿಸಿದರು.
ಕನರ್ಾಟಕ ರಾಜ್ಯವು 320 ಕಿಲೋ ಮೀಟರ್ ಉದ್ದದ ಸುಂದರ ಕಡಲತೀರವನ್ನು ಹೊಂದಿದ್ದು ಕಡಲತೀರದುದ್ದಕ್ಕೂ ಪ್ರವಾಸಿಗರನ್ನು ಆಕಷರ್ಿಸುತ್ತಿವೆ. ಈ ಭಾಗಗಳಲ್ಲಿ ಅಭಿವೃದ್ಧಿ ಕೈಗೊಳ್ಳಲು ಸಿಆರ್ಜಡ್ ನಿಯಮಗಳು ಅಡ್ಡಿಯಾಗಿದ್ದು ಈ ನಿಯಮಗಳನ್ನು ಸಡಲಗೊಳಿಸಲು ಕೇಂದ್ರ ಸಕರ್ಾರಕ್ಕೆ ಪತ್ರ ಬರೆಯಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 22 ಪ್ರಮುಖ ಬೀಚ್ಗಳಲ್ಲಿ ಸಂಪರ್ಕ ರಸ್ತೆ, ಆಸನ ಸೌಲಭ್ಯ, ಶೆಲ್ಟರ್, ವಾಚ್ ಟವರ್, ಪಾಕರ್ಿಂಗ್ ಸೌಲಭ್ಯಗಳು, ಪಾತ್ವೇ, ಐಮಾಸ್ ದೀಪಗಳ ಅಳವಡಿಕೆ ಮುಂತಾದ ಸೌಲಭ್ಯಗಳನ್ನು 50 ಕೋಟಿ ರೂ. ಮೊತ್ತದಲ್ಲಿ ಕಲ್ಪಿಸಲು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು ಮಂಜೂರಾತಿ ನೀಡಿ ಈಗಾಗಲೇ 10 ಕೋಟಿ ರೂ ಬಿಡುಗಡೆಗೊಳಿಸಿದೆ ಎಂದು ಸಚಿವರು ತಿಳಿಸಿದರು.
ಮೊದಲ ಹಂತದಲ್ಲಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 17 ಬೀಚ್ಗಳಲ್ಲಿ ಕೇಂದ್ರದ ಅನುದಾನ ಸೇರಿದಂತೆ ರಾಜ್ಯ ಸಕರ್ಾರ 35.42 ಕೋಟಿ ರೂ. ಅನುದಾನವನ್ನು ಅನುಷ್ಠಾನ ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ. 24.15 ಕೋಟಿ ರೂ. ವೆಚ್ಚದ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಸಚಿವರು ತಿಳಿಸಿದರು.