ರಾಜಕಾರಣಕ್ಕಿಂತಲೂ ಮಾಧ್ಯಮವೇ ಹೆಚ್ಚು ಭ್ರಷ್ಟ : ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಮೇ 27 (ಯುಎನ್ಐ) ಭ್ರಷ್ಟಾಚಾರ ಎನ್ನುವುದು ರಾಜಕೀಯ ಕ್ಷೇತ್ರವನ್ನೂ ಮೀರಿ ಮಾಧ್ಯಮ ಕ್ಷೇತ್ರಕ್ಕೂ ಕಾಲಿರಿಸಿದ್ದು, ರಾಜಕಾರಣಿಗಳಿಂತಲೂ ಮಾಧ್ಯಮ ಕ್ಷೇತ್ರದಲ್ಲಿಯೇ ಹೆಚ್ಚು ಶ್ರೀಮಂತರಿದ್ದಾರೆ. ರಾಜಕೀಯ ಪಕ್ಷ ಸೇರಿದಂತೆ ಮಾಧ್ಯಮಗಳಲ್ಲಿಯೂ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಸಭಾಧ್ಯಕ್ಷ ಕೆ.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. 

ಹಿರಿಯ ಪತ್ರಕರ್ತ ಸಿ.ಎಂ. ರಾಮಚಂದ್ರ ಅವರ 'ಕಾಕ್ಪಿಟ್ ಆಫ್ ಇಂಡಿಯಾಸ್ ಪೊಲಿಟಿಕಲ್ ಬ್ಯಾಟಲ್ಸ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಬಳಿಕ ಅವರು ಮಾತನಾಡಿದರು. 

ಒಂದೆಡೆ ಹೊಗಳುಭಟ್ಟರು, ಮತ್ತೊಂದೆಡೆ ಭ್ರಷ್ಟರು, ಹೀಗೆ ಎಲ್ಲರೂ  ನಾಯಕರನ್ನು ಓಲೈಸಿಕೊಳ್ಳಲು  ಮುಂದಾಗಿರುವುದು ಹಾಗೂ ಎಲ್ಲದಕ್ಕೂ ಸೈ ಎನ್ನುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವುದರಿಂದ ಪ್ರಜಾಪ್ರಭುತ್ವಕ್ಕೆ ಸಂಚಕಾರ ಬಂದೊದಗಿದೆ. ಗ್ರಾಮಪಂಚಾಯಿತಿ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿಯವರೆಗಿನ ಎಲ್ಲಾ ಪರವಾನಿಗೆಗಳು ತನಗೇ ಬೇಕು, ತನ್ನವರಿಗೆ ಬೇಕು ಎಂಬ ಮನೋಧರ್ಮದ ರಾಜಕಾರಣಿಗಳೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ಕುಟುಂಬ ರಾಜಕಾರಣ, ಕುಟುಂಬದ ಸದಸ್ಯರಿಗೆ ಚುನಾವಣೆಯಲ್ಲಿ ಟಿಕೆಟ್ ಹಂಚುವುದಾದರೆ ಸಮಾಜದಲ್ಲಿರುವ ಇತರ ವರ್ಗದವರ ಪಾಡೇನು ? ಈ ಬಗ್ಗೆಯೂ ಮಾಧ್ಯಮದವರು ಪ್ರಶ್ನಿಸುವುದನ್ನು ಮರೆತು ಬಿಟ್ಟಿದ್ದಾರೆ ಎಂದು ಮಾಧ್ಯಮದವರ ಜವಾಬ್ದಾರಿ ಕುರಿತು ಅವರು ಪ್ರಶ್ನಿಸಿದರು. 

ಇತ್ತೀಚಿನ ದಿನಗಳಲ್ಲಿ 'ಪ್ಯಾಕೇಟ್ ಟೂ ಪೇಮೆಂಟ್' ವ್ಯವಸ್ಥೆ ಹೆಚ್ಚಾಗುತ್ತಿದೆ. ಹಿಂದೆ ಅಟಲ್ ಬಿಹಾರಿ ವಾಜಪೇಯಿ, ಕೃಷ್ಣಮೆನನ್, ಚಕ್ರವತರ್ಿ ರಾಜಗೋಪಾಲಾಚಾರಿಯಂತಹ ಮೇರು ನಾಯಕರ ಸಾರ್ವಜನಿಕ ಸಭೆಗಳಿಗೆ ಸ್ವಇಚ್ಛೆಯಿಂದ ಬರುವವರು ಹೆಚ್ಚಾಗಿದ್ದರು. ಆದರೀಗ ಸಭೆ ಸಮಾರಂಭಗಳ ಕಾರ್ಯಕ್ರಮಗಳಿಗೆ ಪ್ರಯಾಣ ವೆಚ್ಚ, ಖಚರ್ಿಗೆ ಹಣ ಕೊಟ್ಟು ಕರೆಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ರಮೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದರು. 

ಅಂದಿನ  ಕಾಲದಲ್ಲಿ ತತ್ವ-ಸಿದ್ಧಾಂತಗಳ ಆಧಾರದ ಮೇರೆಗೆ ಪಕ್ಷಗಳು ಒಡೆಯುತ್ತಿದ್ದವು. ಆದರೀಗ  ತತ್ವ-ಸಿದ್ಧಾಂತಗಳೇ ಕಣ್ಮರೆಯಾಗಿವೆ. ಮಾಜಿ ಪ್ರಧಾನಿ ಇಂದಿರಾಗಾಂಧಿ  ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ಹಲವು ಉತ್ತಮ ಯೋಜನೆಗಳನ್ನು ದೇಶಕ್ಕೆ ಕೊಟ್ಟಿದ್ದರೂ ಸಹ ಅವರು ಮಾಡಿದ ಸಣ್ಣ ತಪ್ಪಿನಿಂದಾಗಿ ಅವರು ಪಕ್ಷದಿಂದಲೇ ಉಚ್ಚಾಟನೆಗೊಳ್ಳುವಂತಹ ಸ್ಥಿತಿ ಎದುರಾಯಿತು. ರಾಷ್ಟ್ರಪತಿ ಸ್ಥಾನಕ್ಕೆ ಸ್ಪಧರ್ಿಸಿದ್ದ ಅಧಿಕೃತ ಅಭ್ಯಥರ್ಿ ನೀಲಂ ಸಂಜೀವ ರೆಡ್ಡಿ ಅವರನ್ನು ಬೆಂಬಲಿಸದೇ, ಆತ್ಮಸಾಕ್ಷಿಗೆ ಮತ ನೀಡಿ ಎನ್ನುವ ಮೂಲಕ ಪಕ್ಷೇತರ ಅಭ್ಯಥರ್ಿ ವರಾಹಗಿರಿ ವೆಂಕಟಗಿರಿ ಅವರನ್ನು ಬೆಂಬಲಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಎಸ್.ನಿಜಲಿಂಗಪ್ಪ ಇಂದಿರಾ ಗಾಂಧಿ ಅವರನ್ನು ಉಚ್ಚಾಟಿಸಿದರು ಎಂದು ರಮೇಶ್ ಕುಮಾರ್ ಹಳೆಯ ಘಟನೆಯನ್ನು ಸ್ಮರಿಸಿದರು. 

 ಅಭಿವೃದ್ಧಿಯ ಹರಿಕಾರ ಎಂದು ಕರೆಸಿಕೊಂಡ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ದೊಡ್ಡ ಸ್ವಾಭಿಮಾನಿಯಾಗಿದ್ದರು. ಅವರು ತಮ್ಮ ದೊಡ್ಡ ದೇಹವನ್ನು ಹೆಚ್ಚು ಬಗ್ಗಿಸಲು ಸಾಧ್ಯವಾಗಲೇ ಇಲ್ಲ. ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದ  ಕೆಲವರ ಷಡ್ಯಂತ್ರಕ್ಕೆ ಅವರು ಬಲಿಯಾಗಿ, ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ ಎಂದರು.  

ಬೆಂಗಳೂರಿನಲ್ಲಿ ಅತ್ಯಂತ ಸುಶಿಕ್ಷಿತರು ಹಾಗೂ ಪ್ರಜ್ಞಾವಂತರೂ ಇದ್ದಾರೆ ಎನ್ನುವುದು ನಿಜವಾದರೂ ಮತದಾನದ ಅಂಕಿ-ಅಂಶಗಳನ್ನು ಒಮ್ಮೆ ಅವಲೋಕಿಸಿದಾಗ ಎಷ್ಟು ಪ್ರಜ್ಞಾವಂತರು ಮತಚಲಾಯಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಗ್ರಾಮೀಣ ಪ್ರದೇಶದ ಅನಕ್ಷರಸ್ಥರಲ್ಲಿನ ಕಳಕಳಿ ಮತ್ತು ಕಾಳಜಿ ನಗರದ ಜನರಲ್ಲಿ ಇಲ್ಲ. ಮತದಾನ ಮಾಡದೇ ಅಭಿಪ್ರಾಯ ಪ್ರಕಟಿಸುವ ನೈತಿಕತೆಯಿಲ್ಲ ಇಂತಹವರು ನಿಜವಾಗಲೂ ವಿಶ್ವಾಸ ಘಾತುಕರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ನ್ಯಾಯಾಲಯಗಳು ತೀಪುಗಳನ್ನು ಪ್ರಕಟಿಸುತ್ತಿವೆಯೇ ಹೊರತು ನ್ಯಾಯ ಕೊಡುತ್ತಿಲ್ಲ ಎಂಬ ಅಭಿಪ್ರಾಯಗಳು ಹೊರಹೊಮ್ಮುತ್ತಿವೆ. ನ್ಯಾಯಮೂತರ್ಿ ಹಾಗೂ ನ್ಯಾಯಾಧೀಶರಲ್ಲೇ ಒಳ ಜಗಳಗಳು, ಶಿಕ್ಷಣ ಕ್ಷೇತ್ರದಲ್ಲೇ ಅತ್ಯುನ್ನತ ಸ್ಥಾನ ಎಂದು ಪರಿಗಣಿಸಲ್ಪಡುವ ವಿಶ್ವವಿದ್ಯಾಲಯಗಳ ಕುಲಪತಿಗಳ ಮೇಲೆಯೇ ಸಿಐಡಿ ವಿಚಾರಣೆಗಳು, ಮಾಧ್ಯಮದವರಿಂದಲೇ ಭ್ರಷ್ಟಾಚಾರ ಪರಿಸ್ಥಿತಿ ನಿಮರ್ಾಣವಾಗಿದೆ. ಶಿಕ್ಷಣ ಪಡೆದವರೇ ಹೆಚ್ಚು ಭ್ರಷ್ಟಾಚಾರಿಗಳಾಗುತ್ತಿದ್ದಾರೆ. ಐಎಎಸ್ ಅಧಿಕಾರಿಗಳು ಸಹ ಭ್ರಷ್ಟರಾಗಿದ್ದಾರೆ.  ಸಕರ್ಾರಿ ಕಚೇರಿಗಳಲ್ಲಿ ಮರಣ ಪ್ರಮಾಣ ಪತ್ರ ಪಡೆಯಲು ಲಂಚ ನೀಡಬೇಕಾದ ಅನಿವಾರ್ಯತೆ ಎದುರಾಗಿರುವುದು ಸಮಾಜದಲ್ಲಿ ತಲೆ ತಗ್ಗಿಸುವ ಸಂಗತಿ ಎಂದು ರಮೇಶ್ ಕುಮಾರ್ ತಿಳಿಸಿದರು. 

ಮೋದಿ ವಿದೇಶಕ್ಕೆ ಮೊದಲ ಬಾರಿಗೆ ಹೋಗಿದ್ದರೆ ಅನಿವಾಸಿ ಭಾರತೀರಯನ್ನು ಉದ್ದೇಶಿಸಿ ಭಾಷಣ ಮಾಡಬೇಕಿತ್ತು. ಆದರೆ ಅವರ ಭಾಷಣಕ್ಕೂ ಮೊದಲೇ ಚಪ್ಪಾಳೆ ಹೊಡೆಯುವವರಿಗೆ ಅವರು ಏನು ಹೇಳುತ್ತಾರೆ ಎನ್ನುವುದನ್ನು ಕೇಳುವ ಸೌಜನ್ಯ ಸಹ ಇಲ್ಲ. ವಾಜಪೇಯಿ ಬದುಕಿರುವವರೆಗೂ ಯಾರೂ ಸಹ ಅವರನ್ನು ನೆನಪಿಸಿಕೊಳ್ಳದವರು ಅವರ ಮರಣದ ನಂತರ ಅವರನ್ನು ಸ್ಮರಿಸಲಾರಂಭಿಸಿದ್ದಾರೆ ಎಂದರು. 

 ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಪ್ರಸ್ತಾಪಿಸಿ ಮಾತನಾಡಿದ ರಮೇಶ್ ಕುಮಾರ್, ದೇವರಾಜ ಅರಸು ಅವರ ಕಾಲದಲ್ಲಿ  ಕೆಲವರು ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದರು. ಹೀಗಾಗಿ ಅಂದು 3 ಸ್ಥಾನಗಳು ಪಕ್ಷಕ್ಕೆ ಬಂದಿದ್ದವು. ಆದರೆ ಈ ಬಾರಿ ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಫಲಿತಾಂಶದ ಹಿಂದೆ ಅಪರಾಧಿಕ ಸಂಚು ಇದೆ ಎನ್ನುವ ಮೂಲಕ ಕಾಂಗ್ರೆಸ್ ಹೀನಾಯ ಸೋಲಿಗೆ ಪಕ್ಷದ ನಾಯಕರೇ ಕಾರಣ ಎಂದು ಅವರು ಪರೋಕ್ಷವಾಗಿ ಅಭಿಪ್ರಾಯಪಟ್ಟರು. 

ಈ ಸಂದರ್ಭದಲ್ಲಿ ಲೇಖಕ ಸಿ.ಎಂ ರಾಮಚಂದ್ರ, ಹಿರಿಯ ಪತ್ರಕರ್ತರಾದ ಎಸ್ ಕೆ ಶೇಷಚಂದ್ರಿಕ, ಅರಕೆರೆ ಜಯರಾಂ, ಟಿ ಎಸ್ ರಂಗಣ್ಣ, ವಿಧಾನಸೌಧ ಮಾರ್ಗದಶರ್ಿ ಜ್ಞಾನಶೇಖರ್ ಉಪಸ್ಥಿತರಿದ್ದರು.