ಗದಗ 08: ಮಳೆ ನೀರಿನ ಸಂಗ್ರಹಣೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸಕರ್ಾರ ಜಲಶಕ್ತಿ ಅಭಿಯಾನ ಆರಂಭಿಸಿದ್ದು ಜಿಲ್ಲೆಯ ಗದಗ ಹಾಗೂ ರೋಣ ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿಯಾಗಿರುವ ಕೇಂದ್ರ ವಾಣಿಜ್ಯ ಇಲಾಖೆ ಹೆಚ್ಚುವರಿ ಕಾರ್ಯದಶರ್ಿ ಸುನೀಲ ಕುಮಾರ ಅವರು ಶನಿವಾರ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ಜರುಗಿಸಿ ಸಲಹೆ ಸೂಚನೆ ನೀಡಿದರು.
ರವಿವಾರ ಅವರು ರೋಣ ತಾಲೂಕಿನ ನರೇಗಲ್ ಮುದೇನಗುಡಿ, ಕುರಹಟ್ಟಿ, ಕೊತಬಾಳ, ಅಬ್ಬಿಗೇರಿಗಳಿಗೆ ಭೇಟಿ ನೀಡಿ ಜಲಸಂವರ್ಧನೆ, ಜಲ ಸಂರಕ್ಷಣೆ , ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದರು. ಒಟ್ಟಾರೆ ಮಳೆಯ ನೀರನ್ನು ಹಿಡಿದಿಟ್ಟು ಅದನ್ನು ಬಳಸಲು ಅನುಕೂಲವಾಗುವಂತೆ ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸಲಾದ ಕಾಮಗಾರಿಗಳನ್ನು ವೀಕ್ಷಿಸಿ ಅವುಗಳ ಸಾಮರ್ಥ್ಯ ಹೆಚ್ಚಿಸಲು ಸುನೀಲ ಕುಮಾರ ಸಲಹೆ ಮಾಡಿದರು.
ಕೃಷಿ ಜಂಟಿ ನಿರ್ದೇಶಕ ಬಾಲರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗಶೆಟ್ಟಿ, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಎಂ.ವಿ. ಚಳಗೇರಿ, ಸಹಾಯಕ ಕೃಷಿ ನಿರ್ದೇಶಕ ಸಿದ್ಧೇಶ ಕೋಡಿಹಳ್ಳಿ , ನರೇಗಲ್ ಪ.ಪಂ. ಮುಖ್ಯಾಧಿಕಾರಿ ಎಸ್.ಎಸ್. ಹುಲ್ಲಮ್ಮನವರ ಇದ್ದರು.