ಹೆಣ್ಣು ಮರಿ ಬಿಟ್ಟು, ಗಂಡು ಮರಿ ಒಯ್ಯಿತು ತಾಯಿ ಚಿರತೆ: ಪ್ರಾಣಿಗಳಲ್ಲೂ ಇದೆಯೇ ಲಿಂಗ ತಾರತಮ್ಯ

Mother leopard leaves female cub, male cub is carried away: Gender discrimination exists in animals

ಹೆಣ್ಣು ಮರಿ ಬಿಟ್ಟು, ಗಂಡು ಮರಿ ಒಯ್ಯಿತು ತಾಯಿ ಚಿರತೆ:  ಪ್ರಾಣಿಗಳಲ್ಲೂ ಇದೆಯೇ ಲಿಂಗ ತಾರತಮ್ಯ

ಹಾವೇರಿ  11: ಜಿಲ್ಲಾಕೇಂದ್ರ ಸ್ಥಳವಾದ ಹಾವೇರಿ ನಗರಕ್ಕೆ ಸಮೀಪದ ಕುಳೆನೂರುಗ್ರಾಮದ ಕಬ್ಬಿನ ಹೊಲದಲ್ಲಿ ಡಿ.07-2024 ರಂದು ಪತ್ತೆಯಾಗಿದ್ದ ಎರಡು ಚಿರತೆಮರಿಗಳನ್ನು ಅರಣ್ಯ ಇಲಾಖೆಯವರು ತಾಯಿ ಚಿರತೆಯ ಬಳಿ ಸೇರಿಸಲು ಸತತ ಎರಡು ದಿನ ನಡೆಸಿದ ಕಾರ್ಯಾಚರಣೆಗೆ ಪೂರ್ಣ ಪ್ರಮಾಣದಲ್ಲಿ ಫಲ ದೊರೆಯಲಿಲ್ಲ. ಡಿ.8 ಭಾನುವಾರ ಹಾಗೂ ಡಿ.9ರ ಸೋಮವಾರ ಅರಣ್ಯ ಇಲಾಖೆಯ ಅಧಿಕಾರಿಗಳು  ಎರಡು ಚಿರತೆಮರಿಗಳನ್ನು ಕಬ್ಬಿನ ಹೊಲದ ಬಳಿ ಇಟ್ಟು ದೂರದಲ್ಲಿ ನಿಂತು ತಾಯಿ ಚಿರತೆಯ ಬಳಿ ಸೇರಿಸುವ ಪ್ರಯತ್ನ ನಡೆಸಿದರು.ಸೋಮವಾರ ತಡರಾತ್ರಿ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ  ಮರಿಗಳ ಬಳಿ ಬಂದು ಮರಿಗಳನ್ನು ಮುದ್ದಾಡಿದೆ. "ಸುತ್ತ-ಮುತ್ತ ಓಡಾಡಿದ ತಾಯಿ ಚಿರತೆ ಗಂಡುಮರಿಯನ್ನು ಮಾತ್ರ ಬಾಯಲ್ಲಿ ಹಿಡಿದು ಕೊಂಡು ಹೋಗಿದೆ". ಇನ್ನೊಂದು ಚಿರತೆಮರಿಯನ್ನು ತಗೆದುಕೊಂಡು ಹೋಗಲು ಬರಬಹುದು ಎನ್ನುವ ನೀರೀಕ್ಷೆಯಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಂಟೆ ಗಟ್ಟಲೇ ಕಾದರೂ ಸಹ ತಾಯಿ ಚಿರತೆ ಮರಿಯನ್ನು ತಗೆದುಕೊಂಡು ಹೋಗಲು ಬರಲಿಲ್ಲ!. "ತಾಯಿ ಚಿರತೆ ಬರುವುದಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡ ಅರಣ್ಯ ಇಲಾಖೆಯ ಆರ್‌.ಎಫ್‌.ಓ ಗಜೇಂದ್ರ ಅವರ ತಂಡವು ಚಿರತೆಯಮರಿಯನ್ನು ಪರೀಕ್ಷಿಸಿದಾಗ ಅದು ಹೆಣ್ಣು ಎನ್ನುವುದು ಖಚಿತ ಪಟ್ಟಿದೆ".ಡಿ.9ರ ಸೋಮವಾರ "ಅಧಿಕಾರಿಗಳು ಚಿರತೆಮರಿಯನ್ನು ಹಾವೇರಿಯ ಪಶು ಆಸ್ಪತ್ರೆಯಲ್ಲಿರುವ ಪಾಲಿ ಕ್ಲೀನಿಕ್‌ಗೆ ತಂದು ಚಿಕಿತ್ಸೆ ಕೊಡಿಸಿ, ಅದಕ್ಕೆ ಹಾಲುಣಿಸುವ ಪ್ರಯತ್ನ ಮಾಡಿದ್ದಾರೆ". ಈ ಬಗ್ಗೆ ಮಾಹಿತಿ ನೀಡಿದ ಪಾಲಿ ಕ್ಲೀನಿಕ್ ವೈದ್ಯ ಡಾ.ಎಸ್‌.ಎಸ್‌.ಸಣ್ಣಪುಟ್ಟಕ್ಕನವರ, "15 ರಿಂದ 20 ದಿನಗಳ ಚಿರತೆಮರಿ ಆರೋಗ್ಯವಾಗಿದ್ದು, ಇದು ಹೆಣ್ಣು ಚಿರತೆಮರಿಯಾಗಿದೆ. ಇದನ್ನು ಉಪಚರಿಸಿ ಅರಣ್ಯ ಇಲಾಖೆಯ ಅವರ ವಶಕ್ಕೆ ಒಪ್ಪಿಸಲಾಗಿದೆ ಎಂದರು.ಈ ಬಗ್ಗೆ ಮಾಹಿತಿ ನೀಡಿದ ಆರ್‌.ಎಫ್‌.ಓ. ಗಜೇಂದ್ರ ಅವರು "ಚಿರತೆಮರಿಯ ಸಂರಕ್ಷಣೆಗಾಗಿ ಗದಗ ಬಳಿಯ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ  ಕಳಿಸಲಾಗಿದೆ. ಅಲ್ಲಿ ಚಿರತೆಮರಿಗಳನ್ನು ಉಪಚರಿಸುವ ವ್ಯವಸ್ಥೆ ಇದ್ದು, ಹೀಗಾಗಿ ಅಲ್ಲಿಗೆ ಕಳಿಸಲಾಗಿದೆ. ಕಬ್ಬಿನ ಗದ್ದೆಯಲ್ಲಿ ದೊರೆತ ಎರಡು ಚಿರತೆಮರಿಗಳಲ್ಲಿ ಒಂದು ಹೆಣ್ಣು, ಇನ್ನೊಂದು ಗಂಡು ಮರಿಯಾಗಿದ್ದು, ಎರಡು ತಾಯಿ ಚಿರತೆಯ ಬಳಿ ಸೇರಿಸಲು ಸಾಕಷ್ಟು ಸಮಯ ವ್ಯಯ ಮಾಡಿದರೂ ಸಹ ತಾಯಿ ಚಿರತೆ ಒಂದು ಮರಿಯನ್ನು ಮಾತ್ರ ತನ್ನೊಂದಿಗೆ ತಗೆದುಕೊಂಡು ಹೋಗಿದ್ದು, ಇನ್ನೊಂದನ್ನು ಬಿಟ್ಟು ಹೋಗಿದೆ. ನಮ್ಮ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆಮರಿಯನ್ನು ಉಪಚರಿಸಿ ಗದಗಿನ ಪ್ರಾಣಿ ಸಂಗ್ರಹಾಲಯಕ್ಕೆ ಬಿಟ್ಟು ಬರಲಾಗಿದೆ ಎಂದರು".  ಕಾಡುಮೃಗಗಳಲ್ಲೂ ಇದೆಯೇ ಲಿಂಗ ತಾರತಮ್ಯ?: "ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಎರಡು ಪುಟ್ಟ ಚಿರತೆಮರಿಗಳು ಕಬ್ಬು ಕಟಾವು ಕಾರ್ಮಿಕರ ಕಣ್ಣಿಗೆ ಡಿ.8 ರಂದು ಕಂಡಿದ್ದವು.    

 ಹೊಲದ ಮಾಲೀಕ ಕುಳೇನೂರುಗ್ರಾಮದ ಜಗದೀಶ್ ಮತ್ತಿಹಳ್ಳಿ  ಹಾವೇರಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎರಡು ಚಿರತೆಮರಿಗಳನ್ನು ಒಪ್ಪಿಸಿದ್ದರು". "ಚಿರತೆಮರಿಗಳು ಜನಿಸಿ 15 ದಿನಗಳಾಗಿರುವ ಹಿನ್ನಲೆಯಲ್ಲಿ ತಾಯಿಯ ಆರೈಕೆಯಲ್ಲಿ ಅವು ಬೆಳೆಯಬೇಕೆನ್ನುವ ಕಾರಣಕ್ಕೆ ಕಬ್ಬಿನ ಹೊಲಕ್ಕೆ ಭೇಟಿ ನೀಡಿದ  ಅರಣ್ಯಾಧಿಕಾರಿಗಳಾದ ಮಾಹಾಂತೇಶ ನ್ಯಾಮತಿ ಮತ್ತು ಗಜೇಂದ್ರ ಅವರು ಚಿರತೆಮರಿಗಳನ್ನು ಪಡೆದು ತಾಯಿಚಿರತೆ ಬಂದು ಮರಿಗಳನ್ನು ತಗೆದುಕೊಂಡಹೋಗುತ್ತದೆ ಎಂದು ದೂರದಲ್ಲಿ ನಿಂತು ತಮ್ಮ ಸಿಬ್ಬಂದಿ ಜೊತೆಗೆ ಕಾಯ್ದು ನಿಂತರು. ಆದರೆ ಡಿ.9ರಂದು ಬೆಳಿಗ್ಗೆ ಬಂದ ತಾಯಿ ಚಿರತೆ ಗಂಡು ಮರಿಯನ್ನು ಮಾತ್ರ ತೆಗೆದುಕೊಂಡು ಹೋಗಿರುವುದು ಪ್ರಾಣಿಗಳಲ್ಲಿಯೂ ಸಹ  ಇದೆಯೇ ಲಿಂಗ ತಾರತಮ್ಯ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.ಹೌದು, ಚಿರತೆ ಹೇಳಿ ಕೇಳಿ ಕಾಡುಮೃಗವಾಗಿದ್ದು, ಪ್ರಾಣಿಗಳನ್ನ ಬೇಟೆಯಾಡಿ ಮೌಂಸ ಭಕ್ಷಿಸುತ್ತವೆ.  "ಹೆಣ್ಣು ಚಿರತೆ ಗರ್ಭಿಣಿಯಾದ ಸಂದರ್ಭದಲ್ಲಿ ಮರಿಗಳನ್ನು ಹೆರುವು ಸಂದರ್ಭದಲ್ಲಿ ತನ್ನ ಗುಂಪನ್ನು ಅದರಲ್ಲೂ ಗಂಡು ಚಿರತೆಯನ್ನು ಅಗಲಿ ದೂರದ ಸುರಕ್ಷಿತ ಪ್ರದೇಶಕ್ಕೆ ತೆರಳಿತ್ತದೆ". "ಅದು ಕಬ್ಬಿನ ಹೊಲವಾಗಿರಬಹುದು, ಕುರುಚಲು ಕಾಡಾಗಿರಬಹುದು. ಗಂಡು ಚಿರತೆ ಸುಳಿಯದ ಪ್ರದೇಶದಲ್ಲಿ ಹೆಣ್ಣು ಚಿರತೆ ಮರಿಗಳನ್ನು ಹೆತ್ತು ಅವುಗಳನ್ನು ಲಾಲನೆ -ಪಾಲನೆ ಮಾಡಿ ಅವುಗಳು ಸ್ವತಂತ್ರ ಜೀವನ ನಡೆಸುವವರೆಗೆ  ಜೋಪಾನ ಮಾಡುತ್ತವೆಯಂತೆ"!"ಹೆಣ್ಣು ಚಿರತೆ ಮರಿಗಳನ್ನು ಹೆತ್ತ ಸಂದರ್ಭದಲ್ಲಿ ಒಂದು ವೇಳೆ ಈ ಚಿರತೆಯ ಸಂಗಾತಿ ಗಂಡು ಆ ಮರಿಗಳಲ್ಲಿ ಗಂಡು ಚಿರತೆಮರಿ ಕಂಡರೆ ಅದನ್ನು  ಕೊಂದು ಹಾಕುತ್ತದೆ ಎನ್ನುಲಾಗುತ್ತದೆ"!. "ಈ ಕಾರಣಕ್ಕೆ ಮರಿಗಳನ್ನು ಹೆರುವ ಸಂದರ್ಭದಲ್ಲಿ ಚಿರತೆ ಗಂಡನ್ನು ಅಗಲುತ್ತದೆ ಎನ್ನುವ ಕಾರಣಗಳಿದ್ದು, ಗಂಡು ಸಂತಾನದ ಉಳಿವಿಗಾಗಿ ಹೋರಾಟ ನಡೆಸುವ ಹೆಣ್ಣು ಚಿರತೆ ಮರಿಗಳನ್ನು ರಕ್ಷಿಸಲು ಈ ರೀತಿಯ ವಲಸೆ ಪ್ರವೃತ್ತಿ ಕೈಗೊಂಡು ಮರಿಗಳಿಗೆ ಜನ್ಮ ನೀಡಿ ಜೋಪಾನ ಮಾಡಿದ ಅನೇಕ ಉದಾಹರಣೆಗಳಿವೆ.  ಹಾವೇರಿಯ ಬಳಿ ತಾಯಿ ಚಿರತೆ ಹೆಣ್ಣುಮರಿಯನ್ನು ಬಿಟ್ಟು ಗಂಡು ಮರಿಯನ್ನು ಮಾತ್ರ ತಗೆದುಕೊಂಡು ಹೋಗಿರುವ  ಘಟನೆಯನ್ನು ಗಮನಿಸಿದಾಗ ಪ್ರಾಣಿಗಳಲ್ಲಿ ಲಿಂಗ ತಾರತಮ್ಯ ಇರುವುದು ಖಚಿತವಾಗಿದೆ".                                                               ಮಾಲತೇಶ ಅಂಗೂರ,