ಮುಬೀನ್ ಮುನವ್ವರ್ಗೆ ಅಕಾಡೆಮಿ ಅಧ್ಯಕ್ಷರಿಗೆ ಸನ್ಮಾನ

ಲೋಕದರ್ಶನ ವರದಿ

ಕೊಪ್ಪಳ   07: ಕನರ್ಾಟಕ ಉದರ್ು ಅಕಾಡೆಮಿ ಅಧ್ಯಕ್ಷರಾದ ಮುಬೀನ್ ಮುನವ್ವರ್ರವರು ದಿ. 5 ರಿಂದ 7ರ ವರೆಗೆ ಕೊಪ್ಪಳ ಜಿಲ್ಲೆ ಪ್ರವಾಸ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಅವರೊಂದಿಗೆ ಸಮಾಲೋಚನೆ ಸಭೆ ಮತ್ತು ವಿಶೇಷ ಸಂದರ್ಶನ ನಡೆಸಿದ ಬಳಿಕ ಅವರನ್ನು ವಿವಿಧ ಸಂಘಟನೆಗಳು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಜಿ.ಎಸ್ ಗೋನಾಳ ನೇತೃತ್ವ ತಂಡದಿಂದ ಅವರಿಗೆ ಚಾಲೂಕ್ಯ ವಿಕ್ರಮಾದಿತ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಹಿರಿಯ ಸದಸ್ಯ ಅಮಜದ್ ಪಟೇಲ್ ಸೇರಿದಂತೆ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಎಂ. ಸಾದಿಕ್ ಅಲಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್ ಎಂ ದೊಡ್ಡಮನಿ, ರಾಜ್ಯ ಸದಸ್ಯ ಹರೀಶ ಹೆಚ್.ಎಸ್ ಪತ್ರಕರ್ತರಾದ ಶಿವರಾಜ್ ನುಗಡೋಣಿ, ಪಕೀರಪ್ಪ ಗೋಟೂರ್ ಸೇರಿದಂತೆ ಉದರ್ು ಹಿರಿಯ ಕವಿಗಳಾ ನಯಿಮ್ ರಾಶೀದ್ ಮತ್ತು ಶಮಿಮ್ ರಾಜ್, ಸರೋಷಿ,  ಅಕಾಡೆಮಿ ಸದಸ್ಯ ಶಾಹಿದ್ ಖಾಜಿ ಮತ್ತು ಅಕಾಡೆಮಿ ಸಿಬ್ಬಂದಿ ಇಫರ್ಾನೂಲ್ಲ ಮತ್ತಿತರರು ಉಪಸ್ಥಿತರಿದ್ದರು