ಗಣೇಶ್ ನಗರ ಬಡಾವಣೆಗೆ ನಗರಸಭಾ ಅಧ್ಯಕ್ಷ ಪಟೇಲ್ ಭೇಟಿ: ಪರೀಶೀಲನೆ
ಕೊಪ್ಪಳ 16: ನಗರಸಭೆಯ 26 ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಗಣೇಶ್ ನಗರ ಬಡಾವಣೆಗೆ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಭೇಟಿ ಮಾಡಿ ವಾರ್ಡಿನ ಸಾರ್ವಜನಿಕರಿಂದ ದೂರು, ಕುಂದು ಕೊರತೆಗಳ ಅಹವಾಲು ಸ್ವೀಕರಿಸಿದರು, ಅಲ್ಲಿ ನಡೆಯುತ್ತಿರುವ ಕೆಲಸಗಳನ್ನು ವೀಕ್ಷಣೆ ಮಾಡಿದರು ಚರಂಡಿ ರಸ್ತೆ ಉಪ ರಸ್ತೆಗಳ ದುರಸ್ತಿ, ಕುಡಿಯುವ ನೀರಿನ ಬೋರ್ವೆಲ್ ಪೈಪ್ಲೈನ್ ಇತ್ಯಾದಿ ಕೆಲಸಗಳನ್ನು ಕೂಡಲೇ ಕೈಗೊಂಡು ವಾರ್ಡಿನ ಜನತೆಗೆ ಅನುಕೂಲತೆ ಒದಗಿಸಿಕೊಡುವ ದಾಗಿ ಭರವಸೆ ನೀಡಿದರು, ಕೂಡಲೆ ಜನರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಅಗತ್ಯ ಸೌಕರ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ನಗರಸಭೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಸೂಚನೆ ನೀಡಿದರು ,ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿ ಸಿಬ್ಬಂದಿ ವರ್ಗದವರು, ವಾರ್ಡಿನ ನಾಗರಿಕರು, ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು