ಲೋಕದರ್ಶನವರದಿ
ಧಾರವಾಡ12: ಭಾರತೀಯ ಶಿಕ್ಷಣ ಪ್ರಸಾರ ಸಮಿತಿಯ ಆದರ್ಶ ಬಾಲಿಕಾ ಪ್ರೌಢಶಾಲೆ ಹಾಗೂ ನಿವೇದಿತಾ ಪ್ರಾಥಮಿಕ ಶಾಲೆ ವತಿಯಿಂದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ಪಿ.ಎಸ್.ಸಜ್ಜನರ ಮಾತನಾಡಿ ದೈಹಿಕ ಶಿಕ್ಷಕರು ಜಂತು ಹುಳು ನಿವಾರಿಸಲು ಅಲ್ಬೆಂಡೆಜಾಲ್ ಮಾತ್ರೆಯನ್ನು ಸೇವಿಸುವ ವಿಧಾನವನ್ನು ಮಕ್ಕಳಿಗೆ ತಿಳಿಸಿದರು.
ಅತಿಥಿಗಳಾದ ಎಚ್.ವಾಯ್.ಉಪ್ಪಾರ ವಿಜ್ಞಾನ ಶಿಕ್ಷಕರು ಜಂತು ಹುಳುವಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಎಂ.ಕಡೆತೋಟದ ಮುಖ್ಯೋಪಾಧ್ಯಾಯನಿಯರು ವೈಯಕ್ತಿಕ ಸ್ವಚ್ಛತೆ ಮತ್ತು ಸುಚಿತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು, ಶಿಕ್ಷಕರು-ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕೆ.ಎಂ.ಕಡೆತೋಟದ ವಂದಿಸಿದರು. ಎಸ್.ಬಿ.ಉಪ್ಪಿನ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.