ಲಿಂಗರಾಜ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಇತಿಹಾಸ ವಿಚಾರ ಸಂಕಿರಣ

ಲೋಕದರ್ಶನ ವರದಿ

ಬೆಳಗಾವಿ, 18: ಕಲೆ ವಾಸ್ತುಶಿಲ್ಪಕ್ಕೆ ಭಾರತೀಯ ಇತಿಹಾಸದ ಕೊಡುಗೆ ಬಹುಮೌಲಿಕವಾಗಿದೆ. ಪಾರಂಪರಿಕ ಸಾಂಸ್ಕೃತಿಕ ನೆಲೆಗಳನ್ನು ಉಳಿಸುವ ಹಾಗೂ ಪುನರ್ಶೋಧಿಸುವ ಕಾರ್ಯ ಜರುಗಬೇಕಾಗಿದೆ ಎಂದು ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಜಯಾನಂದ ಮುನವಳ್ಳಿಯವರು ನುಡಿದರು.

ಅವರು ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಇತಿಹಾಸ ವಿಭಾಗವು ದಿನಾಂಕ 18 ಜನೆವರಿ 2018 ರಂದು ಆಯೋಜಿಸಿದ್ದ 'ಭಾರತೀಯ ಉಪಮಹಾದ್ವೀಪದ ಪ್ರಾಚೀನ ಕಲೆ, ವಾಸ್ತುಶಿಲ್ಪ ಹಾಗೂ ಪ್ರಾಚ್ಯಶಾಸ್ತ್ರ : 21ನೇ ಶತಮಾನದ ಪರಾಮಶರ್ೆ ವಿಷಯದ ಮೇಲೆ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ 

ಮಾತನಾಡಿದರು.

ಒಂದೊಂದು ಮೈಲುಗಳು ಇತಿಹಾಸಕ್ಕೆ ಹೊಸ ಭಾಷ್ಯವನ್ನು ಬರೆಯುತ್ತವೆ. ಬೆಳಗಾವಿಯು ಈ ನಿಟ್ಟಿನಲ್ಲಿ ಕಲೆ ವಾಸ್ತುಶಿಲ್ಪಕ್ಕೆ ಬಹುಮೌಲಿಕವಾದ ಕೊಡುಗೆಯನ್ನು ನೀಡಿದೆ. ಹೀಗೆ ಭಾರತದ ಹಲವಾರು ನಗರ ಹಾಗೂ ಪ್ರದೇಶಗಳು ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಅವುಗಳನ್ನು ನಿಖರವಾಗಿ ಅವಲೋಕಿಸುವ ಮೂಲಕ ಇತಿಹಾಸವನ್ನು ಪುನರ್ನಿಮರ್ಿಸಬೇಕಾಗಿದೆ. ಸತ್ಯವನ್ನು ದಾಖಲಿಸುವ ಇತಿಹಾಸ ಇಂದಿನ ಯುವಪೀಳಿಗೆಗೆ ಅಗತ್ಯವಾಗಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯ     ಪ್ರೊ. ಆರ್.ಎಂ.ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. ಕನರ್ಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಸ್ನಾತಕೋತ್ತರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ವ್ಹಿ. ಪಾಡಿಗಾರ್ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತ 'ಇತಿಹಾಸದ ಸ್ಮಾರಕಗಳನ್ನು ಇಂದಿನ ಯುವಪೀಳಿಗೆ ಸಂರಕ್ಷಿಸಬೇಕು. ಹಾಗೂ ಐತಿಹಾಸಿಕ ಸ್ಮಾರಕಗಳು ಹಾಗೂ ಸ್ಥಳಿಯ ಇತಿಹಾಸದ ಕುರಿತು ಸುದೀರ್ಘವಾಗಿ ಅಧ್ಯಯನ ಮಾಡಬೇಕು.  ಇದರಿಂದ ನಮ್ಮೂರು ಹಾಗೂ ದೇಶದ ಇತಿಹಾಸವನ್ನು ಸ್ಪಷ್ಟವಾಗಿ ಅರಿಯಲು ಸಾಧ್ಯವಾಗುತ್ತದೆ. ಪ್ರಾಚೀನ ಭಾರತದ ವಾಸ್ತುಶಿಲ್ಪದ ಶೈಲಿಗಳಾದ ದ್ರಾವಿಡ ಶೈಲಿ, ವೇಸರಶೈಲಿ, ನಾಗರಶೈಲಿಗಳ ಬಗ್ಗೆ ವಿವರಿಸಿದರು. ಅಂತೆಯೆ ಬೆಳಗಾವಿಯ ಪಾರಂಪರಿಕ ದೇವಾಲಯಗಳ ನಿಮರ್ಾಣದಲ್ಲಿ ಈ ಶೈಲಿಗಳ ಪ್ರಯೋಗವನ್ನು ವಿವರಿಸಿದರು.

ವೇದಿಕೆಯ ಮೇಲೆ  ಪುಣೆಯ ಯರವಾಡಾ ಡೆಕ್ಕನ್ ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ. ವಿಜಯ ಸಾಠೆ, ಡಾ.ಎ.ಕೆ.ಪತ್ತಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಿಚಾರ ಸಂಕಿರಣದ ಸಂಯೋಜಕರು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಬಿ.ಕಮತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ವಿಚಾರಸಂಕಿರಣದಲ್ಲಿ ಕನರ್ಾಟಕ, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮೊದಲ್ಗೊಂಡು ದೇಶದ ಹಲವಾರು ರಾಜ್ಯಗಳಿಂದ 100 ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿದ್ದರು. ಮಹಾವಿದ್ಯಾಲಯದ ಎಲ್ಲ ಬೋಧಕ ಸಿಬ್ಬಂದಿ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.  ಪ್ರೊ.ಶ್ರದ್ಧಾ ಪಾಟೀಲ ಹಾಗೂ ಸಾರಿಕಾ ನಗರೆ ನಿರೂಪಿಸಿದರು. ಪ್ರೊ.ನೀತಾ ಗಂಗರೆಡ್ಡಿ ವಂದಿಸಿದರು.