ಲೋಕದರ್ಶನ ವರದಿ
ಕೊಪ್ಪಳ 21: ನಗರದ ಹೃದಯ ಭಾಗದಲ್ಲಿರುವ 21ನೇ ವಾಡರ್ಿನಲ್ಲಿ ಗಬ್ಬು ನಾರುತ್ತಿರುವ ಚರಂಡಿಗಳು ಬೀದಿಗಳಲ್ಲಿ ಕಸ ರಾಶಿ ರಾಶಿ ಬಿದ್ದು ಸೊಳ್ಳೆಗಳಿಂದ ಮಲೇರಿಯ ಮತ್ತು ಡೆಂಗು ರೋಗದ ಭಯದಲ್ಲಿ ಜನರು ಬದುಕುತ್ತಿದ್ದಾರೆ ಇದಕ್ಕೆಲ್ಲಾ ನಗರ ಸಭೆಯ ನಿರ್ಲಕ್ಷ್ಯವೇ ಕಾರಣ ಎಂದು ವಾಡರ್ಿನ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ವಾಡರ್ಿನ ದಿವಂಗತ ಶಿವಾನಂನದ ಹೂದ್ಲೂರ್ ರವರ ಮನೆಯ ಮುಂದೆ ಇರುವ ಚರಂಡಿಗೆ ಮುಚ್ಚಿರುವ ಕಲ್ಲು ಬಂಡೆಗಳು ಒಡೆದು ಹೋಗಿ ರಸ್ತೆಯ ಮೇಲಿನ ಮಣ್ಣು ಮತ್ತು ಕಸ ಚರಂಡಿಗೆ ಸೇರಿ ಚರಂಡಿಯ ನೀರು ತುಂಬಿ ಮೇಲಿಂದ ಹರಿಯುತ್ತಿದೆ, ಸ್ವಚ್ಚ ಮಾಡದೆ ಕಸ ಚರಂಡಿಗಳಲ್ಲಿ ಬಿದ್ದಿದೆ, 21ನೇ ವಾರ್ಡ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಹಾಗಾಗಿ 21ನೇ ವಾಡರ್ಿನ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ, ಆರಿಸಿ ಹೋದ ಜನಪ್ರತಿನಿಧಿಗಳು ತಿರುಗಿ ನೋಡಿಲ್ಲಾ ನಗರ ಸಭೆ ಎಚ್ಚೇತ್ತು ಕೊಂಡು ಸ್ವಚ್ಚತಾ ಕಾರ್ಯ ಕೈಗೋಳ್ಳ ದಿದ್ದರೆ ವಾಡರ್ಿನ ಜನತೆ ಉಗ್ರ ಹೋರಾಟ ಮಾಡುವುದಾಗಿ 21ನೇ ವಾಡರ್ಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.