ಲೋಕದರ್ಶನ ವರದಿ
ವಿಜಯಪುರ 23: ನಗರದ ದರಬಾರ ಹೈಸ್ಕೂಲ್ದಲ್ಲಿ ಹಮ್ಮಿಕೊಳ್ಳಲಾಗುವ ಮಿನಿ ಉದ್ಯೋಗ ಮೇಳಕ್ಕಾಗಿ ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳುವ ಜೊತೆಗೆ ಅಭ್ಯಥರ್ಿಗಳಿಗೆ ಮತ್ತು ಆಯಾ ಉದ್ಯೋಗಿ ಕಂಪನಿಗಳಿಗೆ ಅನಾನೂಕೂಲತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ವಾಯ್.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಿನಿ ಉದ್ಯೋಗ ಮೇಳದ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು, ವಿವಿಧ ಭಾಗಗಳಿಂದ ಉದ್ಯೋಗಕ್ಕಾಗಿ ಆಗಮಿಸುವ ಅಭ್ಯಥರ್ಿಗಳಿಗೆ ಅವಶ್ಯಕ ಮಾಹಿತಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅದರಂತೆ ಆಯಾ ಕೌಂಟರ್ವಾರು ವಿದ್ಯಾರ್ಹತೆಗೆ ಅನುಗುಣವಾಗಿ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳುವ ಜೊತೆಗೆ ಆಯಾ ಕಂಪನಿಗಳ ಸಿಬ್ಬಂದಿಗಳು ಇರುವಂತೆಯೂ ಸಹ ನೋಡಿಕೊಳ್ಳಲು ಸಲಹೆ ನೀಡಿದರು.
ಉದ್ಯೋಗ ಮೇಳದಲ್ಲಿ ಸುಮಾರು 6 ಸಾವಿರದಿಂದ 7 ಸಾವಿರ ಜನರು ಆಗಮಿಸುವ ಸಾಧ್ಯತೆ ಇದೆ. 64 ಕಂಪನಿಗಳು ಸಹ ಭಾಗವಹಿಸಲಿದ್ದು, ಪ್ರತಿ ವಿದ್ಯಾಥರ್ಿಗೆ ಸಂಬಂಧಪಟ್ಟ ಕೌಂಟರ್ ಹಾಗೂ ಸ್ಟಾಲ್ಗಳಲ್ಲಿ ಅವಶ್ಯಕ ಮಾಹಿತಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಲು ತಿಳಿಸಿದ ಅವರು, ಅಲ್ಪೋಪಹಾರ, ಉಪಹಾರದ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಆದ್ಯತೆ ಮೇಲೆ ಕಲ್ಪಿಸಬೇಕು. ಅದರಂತೆ ಆವರಣದಲ್ಲಿ ಮೊಬೈಲ್ ಶೌಚಾಲಯಗಳ ವ್ಯವಸ್ಥೆ, ಸ್ವಚ್ಛತಾ ಕ್ರಮಗಳನ್ನು ಸಹ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಕೈಗೊಳ್ಳಬೇಕು. ಅದರಂತೆ ವಿವಿಧ ಸಮಿತಿಗಳಿಗೆ ನೀಡಲಾಗಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
ಉದ್ಘಾಟನಾ ಸಮಾರಂಭ ಸರಳ ರೀತಿಯಲ್ಲಿ ಉತ್ತಮವಾಗಿ ನಡೆಸಿಕೊಡಬೇಕು. ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ವಿವಿಧ ಕಂಪನಿಗಳ ಮೂಲಕ ಅಭ್ಯಥರ್ಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಉದ್ಯೋಗ ಖಾತ್ರಿ ಬಗ್ಗೆ ಮುಂಚಿತವಾಗಿ ಆಯಾ ಕಂಪನಿಗಳ ಪರಿಶೀಲನೆ ನಡೆಸಿಕೊಳ್ಳಬೇಕು. ವಿ ದ್ಯಾಥರ್ಿಗಳಿಗೆ ಉದ್ಯೋಗದ ಅವಕಾಶ ದೊರೆಯಬೇಕೆಂದು ತಿಳಿಸಿದ ಅವರು, ಯಾವುದೇ ರೀತಿಯ ಲೋಪವಾಗದಂತೆ ಎಚ್ಚರಿಕೆ ವಹಿಸಲು ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.