ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ

Nutritional food kit distribution program for tuberculosis patients

ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ  

ಗದಗ 24:ಕ್ಷಯ ಮುಕ್ತ ರಾಷ್ಟ್ರ ನಿರ್ಮಿಸಲು ಎಲ್ಲರು ಶ್ರಮಿಸೋಣ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಹೇಳಿದರು.  ಮುಂಡರಗಿ ಪಟ್ಟಣದ ತಾಲೂಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ,ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಆಂದೋಲನ ಅಭಿಯಾನ ಪ್ರಯುಕ್ತ ಕ್ಷಯರೋಗಿಗಳಿಗೆ ಚೈತನ್ಯ ಪೌಷ್ಠಿಕ ಪೂರಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಕ್ಷಯ ರೋಗಿಗಳಿಗೆ ಕಿಟ್ ವಿತರಿಸಿದ್ದು ವಿಶೆಷ ಕಾರ್ಯಕ್ರಮವಾಗಿದೆ,ಈ ಹಿಂದೆ ಕ್ಷಯ ರೋಗ ಬಗ್ಗೆ ಭಯದ ವಾತವಾರಣ ಇತ್ತು ,ಇಂದು ಭಾರತ ದೇಶದಲ್ಲಿ ಉತ್ತಮ ರೀತಿಯ ಓಷಧಿಗಳಿವೆ ರೋಗಿಗಳು ಸರಿಯಾಗಿ 6 ತಿಂಗಳು ಚಿಕಿತ್ಸೆಯನ್ನು ಪಡೆಯಬೇಕು, ಎಚ್ಚರಿಕೆಯಿಂದ ಎಲ್ಲರು ಆರೋಗ್ಯದ ಕಡೆ ಗಮನಹರಿಸಬೇಕು ಕ್ಷಯ ರೋಗವು ಗುಣಮುಖವಾಗುವ ರೋಗವಾಗಿದೆ ಹಾಗಾಗಿ ಭಯಪಡದೇ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯವನ್ನು ಸದುಪಯೋಗ ಪಡೆಸಿಕೊಂಡು ಪೌಷ್ಠಿಕ ಆಹಾರ ಸೇವಿಸಿ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.  ಈ ಹಿಂದೆ ತಾವು ಸಹ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಕಿಟ್ ಗಳನ್ನು ನೀಡಿದ್ದರ ಕುರಿತು ನೆನಪಿಸಿಕೊಂಡರು,ಶಾಸಕರಾಗುವ ಮೊದಲು ವೃತ್ತಿ ಯಲ್ಲಿ ವೈದ್ಯರಾಗಿ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಹಾಗು ಸಿಬ್ಬಂದಿ ಅವರ ಸಹಕಾರದಿಂದ ಕೋವಿಡ್ ವ್ಯಾಕ್ಸಿನ್ ಪಡೆದು ರೋಗಿಗಳಿಗೆ ಆತ್ಪಸ್ತೈರ್ಯ ನೀಡಿ ರೋಗಿಗಳನ್ನು ಗುಣಮುಖರನ್ನಾಗಿಸಿದ್ದು ಪುಣ್ಯದ ಕೆಲಸ,ಇಂತಹ ಸಂದರ್ಭದಲ್ಲಿ ಆಶಾಗಳು ದಿನಾಲೂ ಆಸ್ಪತ್ರೆಗೆ ಹೋಗಿ ಕೋವಿಡ್ ತರುತ್ತಾರೆ ಎಂದು ಗ್ರಾಮಗಳಲ್ಲಿ ಊರಿಂದ ಹೊರಗಡೆ ಹಾಕುವ ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ,ಆಶಾಗಳ ಶ್ರಮದಿಂದ ಇಂದು ದೇಶದ ಜನರ ಆರೋಗ್ಯ ಮಟ್ಟದಲ್ಲಿ ಸುಧಾರಣೆ ಆಗುತ್ತಿದೆ ಎಂದು ಅವರು ನುಡಿದರು.  ಸಾರ್ವಜನಿಕರು ಸುಖಾಸುಮ್ಮನೆ ವೈದ್ಯರನ್ನು ದೂಷಿಸುವುದನ್ನು ಬಿಟ್ಟು ವೈದ್ಯರ ಮೇಲೆ ಭರವಸೆ, ನಂಬಿಕೆ ಇಟ್ಟು ಪರಿಸ್ಥಿತಿಯನ್ನು ಅರಿತುಕೊಂಡು ವೈದ್ಯರಿಗೆ ಸಹಕಾರ ನೀಡಬೇಕು ಹಾಗೇ ಎಲ್ಲರು ಊಟದ ಪದ್ಧತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕು, 18-20 ವಯಸ್ಸಿನ ಯುವಕರು ಹೃದಯ ಘಾತದಿಂದ ಮರಣಹೊಂದುತ್ತಿದ್ದಾರೆ ಹಾಗಾಗಿ ಎಲ್ಲಾ ಯುವಕರ ಆರೋಗ್ಯ ಬಗ್ಗೆ ಗಮನಹರಿಸಬೇಕು ಹಾಗು ಹೆಚ್ ಐ ವಿ ರೋಗಿಗೂ ಸಹ ಸರ್ಕಾರದ ಯೋಜನೆ ಮೂಲಕ ಚಿಕಿತ್ಸೆ ದೊರೆಯುತ್ತಿದೆ ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು. ಹುಟ್ಟು ಹಬ್ಬದ ಪ್ರಯುಕ್ತ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ಗಳನ್ನು ನೀಡಿದ ಹೇಮಗೀರೀಶ ಹಾವಿನಾಳ ಅವರಿಗೆ ಬಡವರ ಆರ್ಶಿವಾದ ಸಲ್ಲಬೇಕು ಎಂದು ಹಾರೈಸಿದರು.  ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೇಮಗೀರೀಶ ಹಾವಿನಾಳ ಮಾತನಾಡಿ ಜೀವನದಲ್ಲಿ ಮನುಷ್ಯನಿಗೆ ಆರೋಗ್ಯ ತುಂಬಾ ಮುಖ್ಯವಾಗಿದ್ದು ಎಷ್ಟೇ ಶ್ರೀಮಂತನಾಗಿ ದುಡ್ಡು ಹೊಂದಿದ್ದರು ಅನಾರೋಗ್ಯಕ್ಕೆ ತುತ್ತಾದ್ದಾಗ ಎಲ್ಲರು ಅಸಹಾಯಕರಾಗುತ್ತರೆ,ಹಾಗಾಗಿ ಉತ್ತಮ ಆರೋಗ್ಯ ಹೊಂದಿದ್ದರೆ ಜೀವನದಲ್ಲಿ ಎನನ್ನಾದರು ಸಾಧಿಸಬಹುದು ಎಂದು ಹೇಳಿದರು.  ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಚಂದ್ರು ಲಾಮಾಣಿ ಅವರು ಜನರ ಅಪೇಕ್ಷೆ ಇಂದು ಶಾಸಕರಾಗಿ ಸದಾ ಬಡವರ ಬಗ್ಗೆ ಕಾಳಜಿ ಹೊಂದಿ ಆರೋಗ್ಯ,ಕುಡಿಯುವ ನೀರು,ಶಾಲಾ ಕೊಠಡಿಗಳ ಸುಧಾರಣೆ ಸೇರಿದಂತೆ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುತ್ತಾರೆ ಹಾಗೇಯೇ ತಮ್ಮನ್ನು ಆರೋಗ್ಯ ರಕ್ಷ ಸಮಿತಿಯ ಸದಸ್ಯರಾಗಿ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಶಕ್ತಿ ತುಂಬಿದ್ದಾರೆ, ಹಾಗೇ ಇಂದು ವಿಹಾನ ಆಸ್ಪತ್ರೆ ಯಿಂದ ಹೃದಯ ತಪಾಸಣೆ ,ದೃಷ್ಟಿ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾರ್ವಜನಿಕರು ಅದರ ಉಪಯೋಗ ಪಡೆಯಬೇಕು ಎಂದು ಹೇಳಿದರು.  ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಅರುಂಧತಿ ಕುಲಕರ್ಣಿ ಮಾತನಾಡಿ 100 ದಿನದ ಕ್ಷಯರೋಗ ನಿರ್ಮೂಲನೆ ಅಭಿಯಾನ ಯಶಸ್ವಿಯಾಗಿ ಮುಂದುವರೆಯುತ್ತಿದೆ,ವಿಶ್ವದೊಳಗೆ ಅತೀ ಹೆಚ್ಚು ಕ್ಷಯ ರೋಗಿಗಳು ಭಾರತದಲ್ಲಿದ್ದಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕ್ಷಯರೋಗ ಮುಕ್ತ ಭಾರತ ನಿರ್ಮಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ , ಕ್ಷಯರೋಗಿಗಳು ಯಾವುದೇ ಭಯಪಡದೇ ಉಚಿತವಾಗಿ ದೊರೆಯುವ ಚಿಕಿತ್ಸೆ ಪಡೆಯಬೇಕು ಎಂದು ಹೇಳಿ ಕ್ಷಯ ರೋಗದ ಗುಣ ಲಕ್ಷಣಗಳನ್ನು ವಿವರಿಸಿದರು. ಕುಮಾರಸ್ವಾಮಿ ಹೀರೆಮಠ, ಆರೋಗ್ಯ ನೀರೀಕ್ಷಣಾಧಿಕಾರಿ ಎ ಎ.ಅಳವಂಡಿ ಅವರು ಮಾತನಾಡಿದರು.  ಇದೇ ಸಂದರ್ಭದಲ್ಲಿ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ಗಳನ್ನು ವಿತರಿಸಿದರು.  ಕಾರ್ಯಕ್ರಮದಲ್ಲಿ ಪುರಸಭೆ ಸದ್ಯಸೆ ಜ್ಯೋತಿ ಹಾನಗಲ್,ಅಂದಾಪ್ಪ ಉಳ್ಳಾಗಡ್ಡಿ,ಜಾನು ಲಮಾಣಿ, ತಾಲೂಕ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ,,ಪುರಸಭೆ ಸದಸ್ಯರು ಸೇರಿದಂತೆ ಗಣ್ಯರು ಹಾಜರಿದ್ದರು. ಜಯಶ್ರೀ ಮತ್ತು ತಂಡದಿಂದ ಪ್ರಾರ್ಥನೆ ಗೀತೆ ಪ್ರಸ್ತುತ ಪಡಿಸಿದರು.ಆರೋಗ್ಯ ಶಿಕ್ಷಣಾಧಿಕಾರಿ ಎಮ್ ಎಸ್ ಸಜ್ಜನ ಅವರು ಸ್ವಾಗತಿಸಿದರು.ಶ್ರೀಮತಿ ಈರಮ್ಮ ಕುಂದಗೋಳ ಕಾರ್ಯಕ್ರಮ ನಿರೂಪಿಸಿದರು.