ಫೆ 3 ರಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವೇದಮೂರ್ತಿ ಚೆನ್ನವೀರಯ್ಯ ಹಿರೇಮಠ ಇವರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ

On February 3rd, a stage program led by Vedamurthy Chennaveeraiah Hiremath in the divine presence o

ಫೆ 3 ರಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವೇದಮೂರ್ತಿ ಚೆನ್ನವೀರಯ್ಯ ಹಿರೇಮಠ ಇವರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ

ಲಕ್ಷ್ಮೇಶ್ವರ 29 :  ತಾಲೂಕಿನ ಗೊಜನೂರು ಗ್ರಾಮದಲ್ಲಿ  ದುರ್ಗಾ ದೇವಿಯ ಜಾತ್ರೆಯ  ಫೆ- 1ರಿಂದ 4ರ ವರೆಗೆ ನಡೆಯಲಿದ್ದು, ಗ್ರಾಮದ  ದುರ್ಗಾದೇವಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ವಿದ್ಯುತ್ ಅಲಂಕಾರದಿಂದ ದ್ವಾರಬಾಗಿಲು ಕಂಗೊಳಿಸುತ್ತಿದೆ.ಗ್ರಾಮದ ಇತರೆ ಗ್ರಾಮದ ದೇವಸ್ಥಾನಗಳು ಸಹ ವಿದ್ಯುತ್  ದೀಪದ ಅಲಂಕಾರದಿಂದ ಕಂಗೊಳಿಸುತ್ತಿವೆ. ಗ್ರಾಮದೇವಿ ಜಾತ್ರೆಯ ಕುರಿತು ಮಾತನಾಡಿದ ಗೊಜನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಂಜುನಾಥ್ ಚಲವಾದಿ ಅವರು ಪೆ 1ರಿಂದ 4ರ ವರೆಗೆ ದುರ್ಗಾದೇವಿಯ ಜಾತ್ರೆ ಜಗದಲ್ಲಿದ್ದು ತಾರೀಕು 1 ರಂದು ಗ್ರಾಮದ ಗಡಿಗೆ  ದುರ್ಗಾದೇವಿ  ಮೂರ್ತಿಯನ್ನು ಕರೆತರುವುದು 2ರಂದು ಗ್ರಾಮದಲ್ಲಿ ದುರ್ಗಾದೇವಿ ಮೂರ್ತಿ ಮೆರವಣಿಗೆ ಜರುಗುವುದು. ಫೆ 3 ರಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವೇದಮೂರ್ತಿ ಚೆನ್ನವೀರಯ್ಯ ಹಿರೇಮಠ ಇವರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.       ಕಾರ್ಯಕ್ರಮಕ್ಕೆ ಶಾಸಕರು ಮತ್ತು ಮಾಜಿ ಶಾಸಕರು ಸೇರಿದಂತೆ ಗಣ್ಯ ಮಾನ್ಯರು  ಆಗಮಿಸಲಿದ್ದು, ಜಾತ್ರಾ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೀಲಗುಂದ ಮತ್ತು ಕುರ್ತಕೋಟಿ ಗ್ರಾಮದ ಕಲಾ ತಂಡದವರಿಂದ ಜಾನಪದ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.ಪೆ 4ರಂದು ಉಡಿ ತುಂಬುವ ಕಾರ್ಯಕ್ರಮ ನಡೆಯುವವು ಈಗಾಗಲೇ ಗ್ರಾಮದಲ್ಲಿ ದೇವಿಯ ಜಾತ್ರಾ ಸಡಗರ ಪ್ರಾರಂಭಗೊಂಡಿದ್ದು, ಸಮಸ್ತ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಜಾತ್ರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದುರ್ಗಾದೇವಿ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಗ್ರಾಮ ಹಿರಿಯ ಮುಖಂಡರಾದ ಚಂದ್ರಶೇಖರ ಹೊಸಮನಿ, ರಮೇಶ್ ಚಲವಾದಿ, ಮಾನಪ್ಪ ಚಲವಾದಿ, ಉಡ್ಚಪ್ಪ ಚಲವಾದಿ, ಮುತ್ತಪ್ಪ ಚಲವಾದಿ, ಮಾಂತಪ್ಪ ಚಲವಾದಿ, ಶೇಖಣ್ಣ ಚಲವಾದಿ, ಬಸಣ್ಣ ಚಲವಾದಿ, ಸೇರಿದಂತೆ ಇತರರು ಇದ್ದರು.