10ರಂದು ದಿ. ಎಸ್‌.ಎ.ಜಿದ್ದಿ ಅವರ ಪ್ರತಿಮೆ ಅನಾವರಣ

On the 10th. Unveiling of statue of S.A. Jiddi

10ರಂದು ದಿ. ಎಸ್‌.ಎ.ಜಿದ್ದಿ ಅವರ ಪ್ರತಿಮೆ ಅನಾವರಣ  

  ವಿಜಯಪುರ 08: ಕಾಳಿದಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯ, ಶಿಕ್ಷಣ ಪ್ರೇಮಿ ಹಾಗೂ ಸರಳ ಸಜ್ಜನಿಕೆಯ ರಾಜಕಾರಣಿ ದಿ. ಎಸ್‌. ಎ. ಜಿದ್ದಿ ಅವರ ಪ್ರತಿಮೆಯ ಅನಾವರಣ ಹಾಗೂ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವು ವಿಜಯಪುರದ ಕಾಳಿದಾಸ ಶಿಕ್ಷಣಸಂಸ್ಥೆ ಆವರಣದಲ್ಲಿ ಇದೇ ಫೆಬ್ರುವರಿ 10ರಂದು ಮುಂಜಾನೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಆರ್‌.ಎಸ್‌.ವಾಡೇದ ಹಾಗೂ ಪ್ರಾಚಾರ್ಯ ಕೆ. ಆರ್ .ಜಾಧವ ಅವರು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

  ಈ ಕಾರ್ಯಕ್ರಮವು ಸಿಂದಗಿಯ ಸಾರಂಗಮಠ-ಗಚ್ಚಿನಮಠ ಗುರುಕುಲ ಭಾಸ್ಕರ ಪೂಜ್ಯ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಇವರ ಪಾವನ ಸಾನಿಧ್ಯದಲ್ಲಿ, ಮುಧೋಳದ ರೂಗಿ ಅಡವಿ ಸಿದ್ದೇಶ್ವರ ಆಶ್ರಮದ ಪೂಜ್ಯ ನಿತ್ಯಾನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿದ್ದು, ಸಹಕಾರ ಸಚಿವರಾದ ಕೆ.ಎನ್‌.ರಾಜಣ್ಣ ಅವರು ದಿ. ಎಸ್‌. ಎ. ಜಿದ್ದಿ ಅವರ ಪ್ರತಿಮೆಯ ಅನಾವರಣ ನಡೆಸಿಕೊಡಲಿದ್ದಾರೆ.  ಕಾಳಿದಾಸ ಪ್ರೌಢಶಾಲೆಯ ಚೇರಮನ್ನರಾದ ಡಾ. ಕಂಠೀರವ ಕುಲ್ಲಳ್ಳಿ ಹಾಗೂ ಸುಭಾಷಚಂದ್ರ ಬೋಸ್ ಪದವಿ ಕಾಲೇಜಿನ ಚೇರಮನ್ನರಾದ ಪ್ರೊ. ವಿ.ಡಿ.ವಸ್ತ್ರದ ಅವರುಗಳು ನುಡಿನಮನ ಸಲ್ಲಿಸಲಿದ್ದಾರೆ.   

  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಿದಾಸ ಶಿಕ್ಷಣಸಂಸ್ಥೆಯ ಅಧ್ಯಕ್ಷರಾದ ಅಶೋಕ ಎಸ್‌. ಜಿದ್ದಿ ಅವರು ವಹಿಸಲಿದ್ದಾರೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಭಾಸ ಜಿದ್ದಿ,  ವಿ. ಎಸ್‌. ಶಿರೋಳ, ಬಿ. ಟಿ. ಜಿದ್ದಿ, ಎಫ್‌.ಎಚ್‌. ಮ್ಯಾಗೋಟಿ ಅವರು ಭಾಗವಹಿಸಲಿದ್ದಾರೆ.  ಶಿಕ್ಷಣ ಪ್ರೇಮಿ ಹಾಗೂ ಸರಳ ಸಜ್ಜನಿಕೆಯ ರಾಜಕಾರಣಿ ದಿ. ಎಸ್‌. ಎ. ಜಿದ್ದಿ ಅವರ ಅಭಿಮಾನಿಗಳು ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಆಡಳಿತಾಧಿಕಾರಿ, ಆರ್‌. ಎಸ್‌. ವಾಡೇದ ಹಾಗೂ ಪ್ರಾಚಾರ್ಯ ಕೆ.ಆರ್‌.ಜಾಧವ ಅವರು ತಿಳಿಸಿದ್ದಾರೆ.