ಧಾರವಾಡ 29: ನಮ್ಮ ನಡೆನುಡಿ ಆಚಾರ ವಿಚಾರಗಳು ಸಾಹಿತ್ಯದ ತಾಯಿ ಬೇರು. ಸಾಹಿತ್ಯದ ಪದಗಳಲ್ಲಿ ನಮ್ಮ ನಿತ್ಯ ಜೀವನದಲ್ಲಿ ನೈತಿಕತೆ ತುಂಬಿದೆ. ಜಾನಪದ ಸಂಸ್ಕೃತಿಯೇ ನಮ್ಮ ಬದುಕಿನ ಜೀವಾಳವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ವಸಂತ ಅಕರ್ಾಚಾರ್ ಹೇಳಿದರು.
ಮಲೆನಾಡ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆ, ನಿಗದಿ, ಮಾನಸಾ ಸಂಗೀತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಇವರ ವತಿಯಿಂದ ಶಾಲಾ ಆವರಣದಲ್ಲಿ ಜಾನಪದ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಂಗ ಚೇತನ ಪುರಸೃತ ಯಮನಪ್ಪ ಜಾಲಗಾರ ತಾಯಿ ಹಾಡುವ ಜೋಗುಳದ ಪದದಿಂದ ಮಗು ಆನಂದ ಪಡುತ್ತದೆ. ತಾಯಿ ಹಾಡುವ ಲಾಲಿ ಮಗುವಿಗೆ ಕೊನೆಯ ನಿದ್ರೆವರೆಗೂ ಕಾಪಾಡುತ್ತದೆ. ಆ ನಿಟ್ಟಿನಲ್ಲಿ ಯುವ ಪೀಳಿಗೆಯೂ ಆಸಕ್ತಿ ವಹಿಸಲಿ. ಪ್ರಾಚೀನ ಕಲೆಗಳಲ್ಲಿ ಒಂದಾದ ಜಾನಪದ ಕಲೆ ಈಗಿನ ಯುವ ಪೀಳಿಗೆಗೆ ಪೂರಕವಾಗಲೆಂದು ಹೇಳಿದರು.
ನಂತರ ಜಾನಪದ ಕತೃ ಅನಾಮಧೇಯ ಕೃತಿಗಳೇ ಅಂದಿನ ಕಾಲದಲ್ಲಿ ಜನರಿಂದ ಜನರ ಬಾಯಿಂದ ಬರುವ ಪದಗಳಿಗೆ ಜನಪದ ಎಂಬ ಹೆಸರು. ಆವತ್ತಿನ ಕಾರ್ಯಕ್ರಮದಲ್ಲಿ ಸೋಬಾನ, ಬಿಸೋಕಲ್ಲಿನ ಪದ ಮತ್ತು ಲಾಲಿಹಾಡು ಈ ಎಲ್ಲಾ ಹಾಡುಗಳಿಂದ ವಿಶ್ವದಲ್ಲಿ ಜನಪದಕ್ಕೆ ಅರ್ಥ ಬಂದಿದೆ. ಆ ನಿಟ್ಟಿನಲ್ಲಿ ಮಾನಸಾ ಸಂಗೀತ ಸಂಸ್ಥೆಯ ಅಧ್ಯಕ್ಷ ಶ್ರೀಧರ ಶಿವಾನಂದ ಭಜಂತ್ರಿ ಇವರು ಅತಿ ಚಿಕ್ಕ ವಯಸ್ಸಿನಲ್ಲೇ ಸಂಸ್ಥೆಯನ್ನು ಕಟ್ಟಿಕೊಂಡು ಸಾಧನೆ ಮಾಡುತ್ತಿರುವುದು ದೊಡ್ಡ ಸಾಧನೆ ಎಂದು ಜಾಲಗಾರ ಹೇಳಿದರು.
ನಂತರ ಜಾನಪದ ಗಾಯನ, ಚಿತ್ರಕಲೆ, ರಂಗೋಲಿಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಅದೇ ರೀತಿ ಕಾರ್ಯಕ್ರಮದಲ್ಲಿ ಮಲ್ಲನಗೌಡ ಎಸ್. ಪಾಟೀಲ, ಮತ್ತು ಎಸ್. ಆರ್ ನಾಯ್ಕರ ಇವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾದ ಸುವರ್ಣ ಬಿ. ಸುರಕೂಡ, ಫಕ್ಕೀರಪ್ಪ ಎಸ್. ಮಾಧನಬಾವಿ, ಆಕಾಶವಾಣಿ ಕಲಾವಿದರಾದ ಅನಿತಾ ಆರ್, ಪ್ರಮೋದ ಕುಮಾರ ಎಫ್. ಕೆಂಗೇರಿ, ಮಲ್ಲನಗೌಡ ಎಸ್. ಪಾಟೀಲ, ಮತ್ತು ಎಸ್. ಆರ್ ನಾಯ್ಕರ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.