ಧಾರವಾಡ03: ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಅತೀ ಮುಖ್ಯವಾಗಿರುವ ಆರೋಗ್ಯ ತಪಾಸಣೆಗಾಗಿ ಭಾರತ ಸರಕಾರದಿಂದ ಧಾರವಾಡ ಜಿಲ್ಲೆಯಲ್ಲಿ 1.4 ಲಕ್ಷಕ್ಕೂ ಅಧಿಕ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡಗಳನ್ನು ವಿತರಿಸಲಾಗಿದ್ದು, ಸಾರ್ವಜಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸಂಸದ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕರ ಉಚಿತ ಆರೋಗ್ಯ ತಪಾಸಣೆಗಾಗಿ ಆಯೋಜಿಸಿದ್ದ ಆರೋಗ್ಯ ಮೇಳವನ್ನು ಉದ್ಘಾಟಿಸಿ, ಮಾತನಾಡಿದರು.
ಭಾರತದ ಬಹುಪಾಲ ಜನರ ಆರೋಗ್ಯ ಕಾಳಜಿಗಾಗಿ ಭಾರತ ಸರಕಾರವು ಉಚಿತ ಮತ್ತು ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೊಳಿಸಿದೆ. ಜನರ ತಪ್ಪು ತಿಳುವಳಿಕೆ ಹಾಗೂ ಬಡತನದ ಕಾರಣದಿಂದ ಆರೋಗ್ಯದ ಬಗ್ಗೆ ನಿಷ್ಕಾಳಜಿ ಮಾಡಿ, ಕಾಯಿಲೆಯ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬರುತ್ತಾರೆ. ಸರಕಾರ ಜಾರಿಗೊಳಿಸದ ಯೋಜನೆಗಳನ್ನು ಬಳಸಿಕೊಳ್ಳದೆ ತೊಂದರೆ ಅನುಭವಿಸುತ್ತಾರೆ. ಇದಕ್ಕೆ ಜಾಗೃತಿಯ ಕೊರತೆ ಮತ್ತು ಆಥರ್ಿಕ ತೊಂದರೆ ಕಾರಣವಾಗಿದೆ.
ಹುಬ್ಬಳ್ಳಿ ಇ.ಎಸ್.ಐ. ಆಸ್ಪತ್ರೆ ಉನ್ನತ್ತಿಕರಣಕ್ಕೆ 30 ಕೊಟಿ ಅನುದಾನ ನೀಡಲಾಗಿದೆ. ಮತ್ತು ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಹೊಸ ರೀತಿಯ ಆರೋಗ್ಯ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲು 137 ಕೋಟಿ ಅನದಾನ ನೀಡಲಾಗಿದೆ. ಹಾಗೂ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿ ಮತ್ತು ಉನ್ನತ ದಜರ್ೆಯ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ ಪರಿಕರ, ಸೌಲಭ್ಯಗಳನ್ನು ಕೇಂದ್ರ ಸರಕಾರ ಅನುದಾನದಲ್ಲಿ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಜಿಲ್ಲಾ ಸರ್ಜನ್ ಡಾ.ಡಿ.ವಿ.ಕಪರ್ೂರಮಠ ಅವರು ಮಾತನಾಡಿ, ಮಧುಮೆಹ, ಕ್ಯಾನ್ಸರ್, ರಕ್ತದೊತ್ತಡದಂತಹ ಕಾಯಿಲೆಗಳು ಇಂದು ವಯಸ್ಸಿನ ಭೇದಭಾವ ಇಲ್ಲದೆ ಎಲ್ಲರಲ್ಲೂ ಬಹುತೇಕವಾಗಿ ಕಾಣಿಸುತ್ತದೆ.
ಇದ್ದಕೆ ಮುಖ್ಯವಾಗಿ ಬದಲಾಗಿರುವ ಬದುಕಿನ ಶೈಲಿ ಮತ್ತು ಆಹಾರ ಪದ್ಧತಿ ಕಾರಣವಾಗಿದೆ. ಕಾಯಿಲೆಗಳ ಲಕ್ಷಣಗಳು ಕಂಡ ತಕ್ಷಣ ಉದಾಸೀನ ಮಾಡದೆ ವೈದ್ಯರ ಬಳಿ ತೊರಿಸಬೇಕು. ಆಯುಷಮಾನ್ ಭಾರತ, ಆರೋಗ್ಯ ಕನರ್ಾಟಕ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಾರಿ ಮಾಡಿರುವ ಆರೋಗ್ಯ ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಹೇಳಿದರು.
ವೇದಿಕೆಯಲ್ಲಿ ಶಾಸಕರಾದ ಅಮೃತ ದೇಸಾಯಿ, ಮಾಜಿ ಮಹಾಪೌರರಾದ ಪೂಣರ್ಾ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಗಿರಿಧರ ಕುಕನೂರ, ಡಾ. ಪುಷ್ಪಾ ಎಚ್.ಆರ್ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ಎಮ್.ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ಯೋಜನೆಗಳ ಕುರಿತು ಮತ್ತು ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಅಶೋಕ ಬೆಟ್ಟದೂರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್.ಎಸ್.ಅಂಬಲಿ ವಂದಿಸಿದರು.
ಆರೋಗ್ಯ ಮೇಳದಲ್ಲಿ ಸರಕಾರಿ ಹಾಗೂ ಅರೆ ಸರಕಾರಿ ಆರೋಗ್ಯ ಸಿಬ್ಬಂದಿ, ತಜ್ಞ ವೈದ್ಯರು ಭಾಗವಹಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿದರು. ಸುಮಾರು 500ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.