ಜಿಲ್ಲೆಗೊಂದು ಹಜ್ ಭವನ್ ನಿರ್ಮಾಣ ಮಾಡಲು ಪಟೇಲ್ ಒತ್ತಾಯ

Patel demands construction of a Haj Bhavan in the district

ಜಿಲ್ಲೆಗೊಂದು ಹಜ್ ಭವನ್ ನಿರ್ಮಾಣ ಮಾಡಲು ಪಟೇಲ್ ಒತ್ತಾಯ

ಕೊಪ್ಪಳ 15: ಇಸ್ಲಾಂ ಧರ್ಮದ ಪವಿತ್ರ ಹಜ್ ಯಾತ್ರೆಗೆ ತರಳಲು ಪ್ರತಿ ವರ್ಷ ಬಹಳಷ್ಟು ಜನ ಯಾತ್ರಿಕರು ಅರ್ಜಿ ಸಲ್ಲಿಸಿ ಪ್ರಯಾಣ ಕೈಗೊಳ್ಳುತ್ತಾರೆ ಅವರಿಗೆ ಹಜ್ ಯಾತ್ರೆ ಬಗ್ಗೆ ತರಬೇತಿ ನೀಡಲು ಜಿಲ್ಲೆಗೆ ಒಂದು ಹಜ್ ಭವನ ನಿರ್ಮಾಣ ಅವಶ್ಯಕತೆ ಇದೆ ಈ ದಿಶೆಯಲ್ಲಿ ಸಂಸದರು ಶಾಸಕರು ವಿಶೇಷ ಅನುದಾನ ನೀಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಜಿಲ್ಲೆಗೆ ಒಂದು ಹಜ್ ಭವನ ನಿರ್ಮಿಸುವಂತೆ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಅವಶ್ಯಕತೆಯ ಮನವರಿಕೆ ಮಾಡಿ ಒತ್ತಾಯಿಸಿದರು.  

ಅವರು ಮಂಗಳವಾರ ಓಜನಹಳ್ಳಿ ರಸ್ತೆಯಲ್ಲಿ ಲಕ್ಷ್ಮಿ ಪ್ಯಾಲೇಸ್ ಸಭಾಂಗಣದಲ್ಲಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಪ್ರಸಕ್ತ ಸಾಲಿನ ಹಜ್ ಯಾತ್ರಿಕರಿಗೆ ಏರಿ​‍್ಡಸಿದ ಚಿಕಿತ್ಸಾ ತಪಾಸಣಾ ಹಾಗೂ ವ್ಯಾಕ್ಸಿನೇಷನ್ ಯಾತ್ರಿಕರಿಗೆ ಆರೋಗ್ಯ ಕಾರ್ಡ್‌ ವಿತರಣೆ ಸಮಾರಂಭ ಅಲ್ಲದೆ ತರಬೇತಿ ಶಿಬಿರದ ಉಸ್ತುವಾರಿ ನೋಡಿಕೊಂಡು ಏರಿ​‍್ಡಸಿದ ಸಮಾರಂಭದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು, ಕೊಪ್ಪಳ ಜಿಲ್ಲೆಯ 57 ಮತ್ತು ಪಕ್ಕದ ವಿಜಯನಗರ ಜಿಲ್ಲೆಯ 37 ಹಜ್ ಯಾತ್ರಿಕರು ತರಬೇತಿ ಶಬೀರದಲ್ಲಿ ಪಾಲ್ಗೊಂಡಿದ್ದು ಪ್ರತಿ ವರ್ಷ ಯಾತ್ರಿಕರುಗಳ ಸಂಖ್ಯೆ ಹೆಚ್ಚಾಗುತ್ತಿದೆ ನಮ್ಮ ರಾಜ್ಯ ಸರ್ಕಾರ ವಿಭಾಗ ಮಟ್ಟದಲ್ಲಿ ಒಂದು ಹಜ್ ಭವನ ನಿರ್ಮಾಣ ಮಾಡಲು ಮುಂದಾಗಿದ್ದು ಸಂತೋಷದ ವಿಷಯ ಆದರೆ ಅದು ವಿಸ್ತರಣೆಗೊಂಡು ಜಿಲ್ಲೆಗೊಂದು ಹಜಭವನ ನಿರ್ಮಾಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸಂಸದರು ಶಾಸಕರು ಮುಖ್ಯಮಂತ್ರಿ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಸಚಿವರ ಗಮನಕ್ಕೆ ತಂದು ಈ ಕೆಲಸ ಕಾರ್ಯ ನಿರ್ವಹಿಸಬೇಕೆಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಮನವಿ ಮಾಡಿಕೊಂಡರು, 

ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಸದ ಕೆ ರಾಜಶೇಖರ್ ಹಿಟ್ನಾಳ ರವರು ಪ್ರಸಕ್ತ ಸಾಲಿನ ಹಜ್ ಯಾತ್ರಿಕರಿಗೆ ಆರೋಗ್ಯ ಕಾರ್ಡ್‌ ವಿತರಣೆ ಮಾಡಿ ಮಾತನಾಡಿ ನಮ್ಮ ದೇಶದ ಬಗ್ಗೆ ಶಾಂತಿ ಸರ್ವರ ಬಾಳಿನಲ್ಲಿ ನಮ್ಮದೇ ಸಮೃದ್ಧಿ ಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡಿದರು, 

ಇದೆ ವೇಳೆ ಎಲ್ಲಾ ಯಾತ್ರಿಕರಿಗೆ ವ್ಯಾಕ್ಸಿನೇಷನ್ ಹಾಕಿಸಲಾಯಿತು, ವೇದಿಕೆ ಮೇಲೆ ಕರ್ನಾಟಕ ರಾಜ್ಯ ವಕ್ಫ್‌ ಸಮಿತಿ ಸದಸ್ಯರಾದ ಹಿರಿಯ ನ್ಯಾಯವಾದಿ ಎಸ್ ಆಸೀಫ್ ಅಲಿ, ಪೀರಾ ಹುಸೇನ್ ಹೊಸಳ್ಳಿ ನಗರಸಭೆಯ ಮಾಜಿ ಅಧ್ಯಕ್ಷ ಮಹೇಂದ್ರ ಚೋಪ್ರಾ ಸದಸ್ಯ ಮುತ್ತುರಾಜ್ ಕುಷ್ಟಗಿ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷ ಕಾಟನ್ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್ ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಡಿ ಆಸಿಫ್ ಕರ್ಕಿಹಳ್ಳಿ ಸಮಾಜದ ಮುಖಂಡ ಕೆಎಂ ಸೈಯದ್ ಸೇರಿದಂತೆ ಮೌಲಾನ ಮುಫ್ತಿ ಮುಬೀನ್ ಖಾದ್ರಿ ಬಳ್ಳಾರಿ ಮೌಲಾನ ಮುಫ್ತಿ ಆರಿಫ್ ಅಹಮದ್ ಗದಗ್ ಹಜ್ ಕಮಿಟಿ ಅಧಿಕಾರಿ ತೌಖ್ ರ್ ಅಹಮದ್ ಖಾನ್, ಬಳ್ಳಾರಿಯ ಶಾಶ ವಲಿ ಕೊಪ್ಪಳ ಡಿ ಹೆಚ್ ಓ ಡಾ, ಲಿಂಗರಾಜ್, ಟಿ ಹೆಚ್ ಓ ಡಾ, ರಾಮಾಂಜನೇಯ ಡಾ, ಪ್ರಕಾಶ್ ಡಾ. ಸಂಗನಬಸವ ಗೌಡ ಡಾ. ಇರ್ಫಾನಾ ಡಾ, ಪ್ರಶಾಂತ್, ಡಾ, ಶಫಿವುಲ್ಲಾ ಅಲ್ಲಿ ಮುದ್ದೀನ್ ಶಾಹಿದ್ ಹುಸೇನ್ ತಹಸಿಲ್ದಾರ್, ಗಾವ್ ಸಾಬ್ ಸರ್ದಾರ್, ಶಾದಿ ಮಹ ಲ್ ಕಮಿಟಿ ಅಧ್ಯಕ್ಷ ಅಬ್ದುಲ್ ಅಜಿತ್ ಚೌತಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.