ಜನ್ಮದಿನದ ಪ್ರಯುಕ್ತ ಡಿಕೆ ಶಿವಕುಮಾರ್‌ಗೆ ಪಟೇಲ್‌ರಿಂದ ಸನ್ಮಾನ
ಕೊಪ್ಪಳ 16: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ರಾದ ಡಿಕೆ ಶಿವಕುಮಾರ್ ರವರ ಜನ್ಮದಿನ ಪ್ರಯುಕ್ತ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ನೇತೃತ್ವದ ತಂಡದ ವತಿಯಿಂದ ಅವರಿಗೆ ಸನ್ಮಾನಿಸಲಾಯಿತು, ಶುಕ್ರವಾರ ಹೊಸಪೇಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅವರನ್ನು ಸನ್ಮಾನಿಸಿ ಶುಭ ಕೋರಿದರು, ನಂತರ ಮಾತನಾಡಿ ಕೊಪ್ಪಳ ನಗರದ ಸರ್ವಾಂಗಿನ ಅಭಿವೃದ್ಧಿಗಾಗಿ ಸರಕಾರದ ವಿಶೇಷ ಅನುದಾನ ಒದಗಿಸಿ ಕೊಡುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಲಾಯಿತು, ಹಾಗೂ ಹೊಸಪೇಟೆಯಲ್ಲಿ ಜರಗಲಿರುವ ಸರ್ಕಾರದ ಸಾಧನ ಸಮಾವೇಶದಲ್ಲಿ ಕೊಪ್ಪಳದಿಂದ ಅತಿ ಹೆಚ್ಚು ಜನ ಪಾಲ್ಗೊಳ್ಳುವಂತೆ ಈಗಾಗಲೇ ಮನವರಿಕೆ ಮಾಡಲಾಗಿದೆ ಮತ್ತು ಜನರಿಗೆ ಆಹ್ವಾನ ನೀಡಲಾಗಿದೆ, ನೀರೀಕ್ಷೆಗೂ ಮೀರಿ ಕೊಪ್ಪಳ ಭಾಗ ದಿಂದ ಜನ ಸಾಧನ ಸಮಾವೇಶ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದರು ,ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ದಾದಾಪೀರ್ ರವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು