ನಗರದ ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗಾಗಿ ಅನುದಾನ ಮಂಜೂರು ಮಾಡಲು ಆಗ್ರಹಿಸಿ ಆಯುಕ್ತರಿಗೆ ಮನವಿ

Petition to the Commissioner demanding grant for the development of the slum areas of the city

ನಗರದ ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗಾಗಿ ಅನುದಾನ ಮಂಜೂರು ಮಾಡಲು ಆಗ್ರಹಿಸಿ ಆಯುಕ್ತರಿಗೆ ಮನವಿ 

ಗದಗ 01 :  ಗದಗ-ಬೆಟಗೇರಿಯ ನೈಜ್ ಸ್ಲಂ ಪ್ರದೇಶಗಳಲ್ಲಿ ಯಾವುದೇ ನಾಗರೀಕ ಸೌಲಭ್ಯಗಳು ಇಲ್ಲದೇ ಸಾವಿರಾರು ಜನರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ, ಮುಖ್ಯವಾಗಿ ನಗರದ ಬಹುತೇಕ ಸ್ಲಂ ಪ್ರದೇಶಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲದೇ ಕಾರಣ ಮಹಿಳೆಯರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಆದ್ದರಿಂದ ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗಾಗಿ ಅನುದಾನ ಮಂಜೂರು ಮಾಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಗದಗ ಸ್ಲಂ ಬೋರ್ಡ ಅಧಿಕಾರಿಗಳ ಮೂಲಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು, ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ಮಾತನಾಡಿ ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ಆವಾಸ್ ಯೋಜನೆಡಿಯಲ್ಲಿ 863 ಮನೆಗಳು ಮಂಜುರಾಗಿದೆ, ಈಗಾಗಲೇ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು ಅದರೆ ಮನೆಗಳ ನಿರ್ಮಾಣ ಕಾರ್ಯವು ಆಮೆ ಗತಿಯಲ್ಲಿ ಸಾಗುತ್ತಿದೆ, 863 ಮನೆಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮಂಜೂರಾಗಿ ನಿರ್ಮಾಣ ಹಂತದಲ್ಲಿ ಇರುತ್ತದೆ ಎಂದು ಮಾಹಿತಿ ನೀಡಲಾಗಿದೆ, ಆದರೆ ಯಾವ ಸ್ಲಂಗಳಲ್ಲಿ ಎಷ್ಟು ಮನೆಗಳು ನಿರ್ಮಿಸಲಾಗಿದೆ ಎಂದು ಗುತ್ತಿಗೆದಾರರು ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ, 21-01-2025 ರಂದು ಸ್ಲಂ ಬೋರ್ಡ ಆಯುಕ್ತರು ನಡೆಸಿರುವ ಸ್ಲಂ ಮುಖಂಡರ ರಾಜ್ಯ ಮಟ್ಟದ ಜಂಟಿ ಸಭೆಯಲ್ಲಿ ಚರ್ಚಿಸದಂತೆ ಗದಗ-ಬೆಟಗೇರಿ ನಗರದಲ್ಲಿ ವಸತಿ ಯೋಜಯಲ್ಲಿ ನಡೆಸಲಾಗಿರುವ ಅವ್ಯಹಾರ ಕುರಿತು ಶೀಘ್ರವೇ ರಾಜ್ಯ ಮಟ್ಟದ ನಿಯೊಗದಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು, ಈ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಕೇವಲ 863 ಮನೆಗಳು ಮಂಜೂರು ಮಾಡಲಾಗಿದ್ದು,  ನಗರದ ಸ್ಲಂ ಪ್ರದೇಶಗಳ ಜನಸಂಖ್ಯೆ ಅನುಗುಣವಾಗಿ  ಇನ್ನು ಹೆಚ್ಚುವರಿಯಾಗಿ 1500 ಮನೆಗಳನ್ನು ಮಂಜೂರು ಮಾಡಬೇಕು, ಗದಗ-ಬೆಟಗೇರಿ ನಗರದ ಅನೇಕ ಸ್ಲಂ ಪ್ರದೇಶಗಳಲ್ಲಿ ಸ್ಥಳೀಯವಾಗಿ ವಸತಿ ಯೋಜನೆ ಕಲ್ಪಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದು, ಇಂತಹ ಸ್ಲಂ ಪ್ರದೇಶದ ಕುಟುಂಬಗಳಿಗೆ ಭೂಮಿಯನ್ನು ಮಂಜೂರು ಮಾಡಿ ನಿವೇಶನಗಳನ್ನು ವಿತರಿಸಿ ಪುನರ ವಸತಿ ಕಲ್ಪಿಸಬೇಕು, ಈಗಾಗಲೇ ಗದಗ-ಬೆಟಗೇರಿ ನಗರದ ಗಂಗಿಮಡಿ ಗುಡಿಸಲು ಪ್ರದೇಶ, ಖಾನತೋಟ್ 2ನೇ ಭಾಗ, ಭಜಂತ್ರಿ ಓಣಿ ಗದಗ, ಗೋಸಾವಿ ಸ್ಲಂ ಪ್ರದೇಶ, 8ನೇ ನಂ ಶಾಲೆ ಹಿಂದಿನ ಪ್ರದೇಶ, ಆಕಾಶನಗರ ಮತ್ತು ರಹಮತನಗರ ರಸ್ತೆಯ ನವನಗರ ಪ್ರದೇಶಗಳನ್ನು ಸ್ಲಂ ಘೋಷಣೆಗಾಗಿ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಕೊಡಲೇ ಸ್ಲಂ ಘೋಷಣೆಗೆ ಕ್ರಮ ಕೈಗೊಳ್ಳಬೇಕು, ಈ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳಾದ ವಿದ್ಯತ್ ಸಂಪರ್ಕ, ಶೌಚಾಲಯ, ರಸ್ತೆ, ಚರಂಡಿ, ಮುಂತಾದ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಲು ಅನುದಾನ ಮಂಜೂರು ಮಾಡಿ ಶೀಘ್ರವೇ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳೇಕು, ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣ, ನರಗುಂದ, ಮುಂಡರಗಿ, ಗಜೇಂದ್ರಗಡ, ರೋಣ ತಾಲೂಕ ಕೇಂದ್ರಗಳಲ್ಲಿ ಬರುವ ಕೊಳಗೇರಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅನುದಾನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು, ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಮೆಹರುನಿಸಾ ಡಂಬಳ, ಮಂಜುನಾಥ ಶ್ರೀಗಿರಿ, ಖಾಜಾಸಾಬ ಇಸ್ಮಾಯಿಲನವರ, ಗೌಸಸಾಬ ಅಕ್ಕಿ, ಸಲೀಮ ಹರಿಹರ, ಮೈಮುನ ಬೈರಕದಾರ, ದುರ್ಗಪ್ಪ ಮಣವಡ್ಡರ, ಮಕ್ತುಮಸಾಬ ಮುಲ್ಲಾನವರ, ಶಂಕ್ರ​‍್ಪ ರೋಣದ, ಈರ​‍್ಪ ಬೇವಿನಮರದ, ದಾವಲಸಾಬ ಯಾದಗೇರಿ, ಸಾಕ್ರುಬಾಯಿ ಗೋಸಾವಿ ಹಾಗೂ ನೂರಾರು ಪದಾಧಿಕಾರಿಗಳು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.