ಕಳಪೆ ಬೀಜ ವಿತರಣೆ 5ನೇ ದಿನಕ್ಕೆ ಕಾಲಿಟ್ಟ ಅನ್ನದಾತನ ಧರಣಿ
ಬ್ಯಾಡಗಿ 25: ತಾಲೂಕಿನಲ್ಲಿ ಹಿರೇಹಳ್ಳಿ, ಚಿಕ್ಕಳ್ಳಿ ಗ್ರಾಮಗಳಲ್ಲಿ ಮೆಣಸಿನ ಕಾಯಿ ಬೀಜವನ್ನು ನೀಡಿ ರೈತರಿಗೆ ಮೋಸ ಮಾಡಿದ ಕಂಪನಿಯ ವಿರುದ್ಧ ಕಂಪನಿಯನ್ನು ಬ್ಲಾಕ್ ಲಿಸ್ಟಿಗೆ ಹಾಕಿ ಹಾಕಲು ಮತ್ತು ಅನ್ಯಾಯವಾದ ಅನ್ನದಾತನಿಗೆ ಪರಿಹಾರ ಒದಗಿಸುವ ಸಲುವಾಗಿ ಮಾನ್ಯ ಶಾಸಕರೇ ಕಚೇರಿ ಎದುರಿಗೆ 21ನೇ ಮೇ 2025 ರಿಂದ ಇಲ್ಲಿಯವರೆಗೆ ರೈತರು ಧರಣಿ ನಡೆಸುತ್ತಾ ಬಂದಿದ್ದು ಇಂದು ಸಹ ಧರಣಿಯನ್ನು ನಡೆಸಲಾಯಿತು, ಧರಣಿ ಸ್ಥಳಕ್ಕೆ ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಭೇಟಿ ನೀಡಿ ರೈತರಿಗೆ ಮನವೊಲಿಸಲು ಮುಂದಾದರು ಮುಂಗಾರು ಹಂಗಾಮು ಜೋರಾಗಿದ್ದು ರೈತರು ತಮ್ಮ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಎಂದು ಹೇಳಿದರು ಆದರೆ ಅನ್ನದಾತನು ಮೊದಲು ರೈತರಿಗೆ ಮೆಣಸಿನ ಕಾಯಿ ಹಾಳಾದ ನಷ್ಟವನ್ನು ತುಂಬಿ ಕೊಡಿ ತಕ್ಷಣವೇ ನಾವು ಧರಣಿಯನ್ನು ಕೈಬಿಡುತ್ತೇವೆ ಎಂದು ಅನ್ನದಾತರು ಹೇಳಿದರು ಹಾಗಾಗಿ ತಹಶೀಲ್ದಾರ್ ಅವರು ಸಂಧಾನ ವಿಫಲವಾದಂತಾಯಿತು.
ಈ ವಳೇ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಳ್ಳಾರಿ ಮಾತನಾಡಿ ಜನಪ್ರತಿನಿಧಿಗಳು ರೈತರ ಗೋಳನ್ನು ಕೇಳಲು ಬಾರದೇ ಇರುವುದು ಇದು ಆಕ್ರೋಶದ ಧರಣಿ ಮೊದಲು ಜನಪ್ರತಿನಿಧಿಗಳು ಅಧಿಕಾರ ಚುಕ್ಕಾಣಿ ಹಿಡಿಯುವಾಗ ರೈತರ ಹೆಸರೇಳಿ ಅಧಿಕಾರವನ್ನು ಗದ್ದುಗೆ ಎರುತ್ತಾರೆ ಆದರೆ ಅನ್ನದಾತನಿಗೆ ನಷ್ಟವಾದಾಗ ಸರಿಪಡಿಸಲು ಬಾರದೆ ಇರುವುದು ಇದು ಬೇಸರದ ಸಂಗತಿ ಶೀಘ್ರವೇ ಮಾನ್ಯ ಶಾಸಕರು ನಮ್ಮ ಬೇಡಿಕೆಗಳನ್ನು ಹಾಗೂ ಕಳಪೆ ಬೀಜ ದಿಂದ ಬೆಳೆಯ ಹಾಳು ಮಾಡಿಕೊಂಡ ರೈತರ ನಷ್ಟವಾದ ಪರಿಹಾರವನ್ನು ಕೊಡಿಸುವವರೆಗೂ ನಾವು ಧರಣಿಯನ್ನು ಅಂತ್ಯಗೊಳಿಸುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಂಗಣ್ಣ ಎಲಿ. ಕೆ ವಿ ದೊಡ್ಗೌಡ್ರು. ಜಾನ್ ಪುನೀತ್. ರುದ್ರಗೌಡ ಕಾಡನ ಗೌಡ್ರು ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.