ಲೋಕದರ್ಶನ ವರದಿ
ವಿಜಯಪುರ 26: ಭಾರತ ಸಂವಿದಾನವೂ ಮಹಿಳೆಯರಿಗೆ ದೇಶದಲ್ಲಿ ಉತ್ತಮ ಸ್ಥಾನ-ಮಾನ ಹಾಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದ್ದು, ಹೆಣ್ಣು ಮಕ್ಕಳ ಅಭಿವೃದ್ಧಿಗೆ ಶಿಕ್ಷಣವು ಬಹುಮುಖ್ಯವಾದ ಪಾತ್ರ ವಹಿಸುತ್ತದೆ, ಈ ನಿಟ್ಟಿನಲ್ಲಿ ಸಕರ್ಾರ ಹೆಣ್ಣು ಮಕ್ಕಳಿಗಾಗಿ ರೂಪಿಸುವ ಎಲ್ಲ ಯೋಜನೆಗಳು ಅವರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಒತ್ತನ್ನು ನೀಡುವಂತಿರಬೇಕು ಮತ್ತು ಸಂಭಂದಿಸಿದ ಇಲಾಖೆಗಳು ಆ ಎಲ್ಲ ಯೋಜನೆಗಳನ್ನು ಜನರು ಸದುಪಯೋಗ ಮಾಡಿಕೊಳ್ಳುವಂತೆ ಮನಪರಿವರ್ತನೆ ಮಾಡುವಂತ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ನ್ಯಾಯಾಧಿಶರಾದ ಪ್ರಭಾಕರ್ ರಾವ ತಿಳಿಸಿದರು.
ಭಾರತ ಸಕರ್ಾರ ಕ್ಷೇತ್ರ ಜನಸಂಪರ್ಕ ಕಾಯರ್ಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸರಕಾರಿ ಉದರ್ು ಹಿರಿಯ ಪ್ರಾಥಮಿಕ ಮತ್ತು ಪ್ರೌಡ ಶಾಲೆ, ಸರಕಾರಿ ಪ್ರೌಡ ಶಾಲೆ ರೀಮ್ಯಾಂಡರೂಮ್ ದೌಲತಕೊಟಿ, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಉದರ್ು ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಬೇಟಿ ಬಚಾವೋ- ಬೇಟಿ ಪಢಾವೋ ಕುರಿತು ಏರ್ಪಡಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೇಟಿ ಬಚಾವೋ- ಬೇಟಿ ಪಢಾವೋ ಕಾರ್ಯಕ್ರಮದ ನೋಡಲ್ ಅಧಿಕಾರಿ ನಿರ್ಮಲಾ ದೊಡ್ಡಮನಿ ಮಾತನಾಡಿ, ಯೋಜನೆಯು ಎರಡೂ ವಿಭಾಗಗಳನ್ನು ಹೊಂದಿದ್ದು, ಮೊದಲನೆ ಹಂತದಲ್ಲಿ ಹೆಣ್ಣು ಮಗುವನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ, ಇದು ಅಸಮತೋಲಿತವಾಗಿರುವ ಲಿಂಗ ಅನುಪಾತವನ್ನು ಸರಿದೂಗಿಸಲು ಅತ್ಯವಶ್ಯಕವಾಗಿದೆ. ಬೇಟಿ ಪಡಾವೋ ಇದು ಕೂಡ ಪ್ರತಿ ಹೆಣ್ಣು ಮಗುವಿನ ಉನ್ನತ ಶಿಕ್ಷಣಕ್ಕೆ ಸರಕಾರ ಹೆಚ್ಚು ಒತ್ತನ್ನೂ ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲೂ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳಾದ ಎನ್.ಬಿ.ಶರ್ಮ, ಎಸ್.ಎನ್.ಮಣ್ಣೂರ ಶಾಲಾ ಎಸ್.ಡಿ.ಎಮ್.ಸಿ ಅಧ್ಯೆಕ್ಷ ಸಾದಿಕ್ ಎನ್, ಮೆಹಬೂಬ ಪಾಶಾ, ಶಿಕ್ಷಕರಾದ ಜ್ಯೋತಿ ಬಸವಣ್ಣವರ, ಟಿ.ಎ.ಪಟೇಲ್ ಹಾಗೂ ಶಿಕ್ಷಕರು, ವಿದ್ಯಾಧರ್ಿಗಳು ಮುಂತಾದವರು ಭಾಗವಹಿಸಿದ್ದರು.
ಬೇಟಿ ಬಚಾವೋ-ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ ಕುರಿತು ಏರ್ಪಡಿಸಿದ್ದ ವಿವಿಧ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಬದಾಮಿಯ ಸಂಗನಬಸಯ್ಯ ಹೀರೆಮಠ ಕಲಾ ತಂಡದವರಿಂದ ವಿವಿಧ ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.