ಗ್ರಾನೈಟ್ ಲೀಸ್ ಅರ್ಜಿ ವಿಲೇವಾರಿಗೆ ಕ್ರಮ: ರಾಜಶೇಖರ ಪಾಟೀಲ್

ಕೊಪ್ಪಳ 05:  ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕುಕನೂರು, ಬಾಗಲಕೋಟೆ ಜಿಲ್ಲೆಯ ಇಲಕಲ್ನಲ್ಲಿನ ಗ್ರಾನೈಟ್ಗೆ ಉತ್ತಮ ಬೇಡಿಕೆ ಇದೆ ಗ್ರಾನೈಟ್ ಕ್ವಾರಿ ಲೀಸ್, ಕ್ರಷರ್ಗಳಿಗೆ ಅನುಮತಿ ಹಾಗೂ ನವೀಕರಣಕ್ಕೆ ಸಲ್ಲಿಸಿದ ಅಜರ್ಿಗಳ ವಿಲೇವಾರಿಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಇದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವರಾದ ರಾಜಶೇಖರ ಬಿ. ಪಾಟೀಲ್ ಅವರು ಹೇಳಿದರು.

ಅವರು (ಜುಲೈ. 05 ರಂದು) ಕೊಪ್ಪಳ ಗಣಿ ಗುತ್ತಿಗೆ ಮತ್ತು ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಿಗೆ ಭೇಟಿ ನೀಡಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಡವರು, ಸಾರ್ವಜನಿಕರು ಮನೆ  ಹಾಗೂ ಕಟ್ಟಡ ಕಟ್ಟಿಸಿಕೊಳ್ಳಲು ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಮರಳು ಪೂರೈಕೆ ಬಗ್ಗೆ ಇಡೀ ರಾಜ್ಯದಲ್ಲಿ ಸಮಸ್ಯೆ ತಲೆದೋರಿದೆ.  ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇದರ ಜೊತೆ ಜೊತೆಗೆ ಸಾರ್ವಜನಿಕರಿಗೆ ಮರಳು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕಿದೆ.  ಈ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಮರಳು ಸೇರಿದಂತೆ ವಿವಿಧ ಗಣಿಗಾರಿಕೆ ಉದ್ಯಮದಲ್ಲಿ ಇರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ.  ಮರಳು ಗಣಿಗಾರಿಕೆಯನ್ನು ಸುಗಮಗೊಳಿಸಲು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

  ಕೊಪ್ಪಳ ಜಿಲ್ಲೆಯಲ್ಲಿ 133 ಗ್ರಾನೈಟ್, 33 ಕಲ್ಲು ಗಣಿಗಾರಿಕೆ ಇವೆ. ಆದರೆ ಉತ್ಪಾದನೆಯಲ್ಲಿ ಕಡಿಮೆ ಇದ್ದು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. 2018-19 ರಲ್ಲಿ ಪ್ರೀಂಟ್ ಗ್ರಾನೈಟ್ 77301 ಘನ ಮೀಟರ್ ಖನಿಜಾ ಉತ್ಪಾದಿಸಿ ರೂ. 2681 ಲಕ್ಷ ರಾಜಧನ ಸಂಗ್ರಹಿಸಲಾಗಿದೆ. ಗ್ರೇ-ಗ್ರಾನೈಟ್ನಲ್ಲಿ 82011 ಘನ ಮೀಟರ್ ಉತ್ಪಾದಿಸಿ 797 ಲಕ್ಷ ರಾಜಧನ ಸಂಗ್ರಹಿಸಲಾಗಿದೆ. ಕಟ್ಟಡ ಕಲ್ಲು 374135 ಮೆಟ್ರಿಕ್ ಟನ್ ಉತ್ಪಾದಿಸಿ 270 ಲಕ್ಷ ರಾಜಧನ ಹಾಗೂ ಸಾದಾ ಮರಳು ಕಣಿಗಾರಿಕಯಲ್ಲಿ 26666 ಮೆಟ್ರಿಕ್ ಟನ್ ಉತ್ಪಾದಿಸಿ 12.88 ಲಕ್ಷ ರಾಜಧನ ಸಂಗ್ರಹಿಸಲಾಗಿದೆ. 2019-20ರಲ್ಲಿ ಪಿಂಕ್ ಗ್ರಾನೈಟ್ 16628 ಘನ ಮೀಟರ್ ಉತ್ಪಾದಿಸಿ, 522 ಲಕ್ಷ ರಾಜಧನ ಮತ್ತು ಗ್ರೇ-ಗ್ರಾನೈಟ್ 8421 ಘನ ಮೀಟರ್ ಉತ್ಪಾದಿಸಿ ರೂ. 173 ಲಕ್ಷ ರಾಜಧನ, ಕಟ್ಟಡ ಕಲ್ಲು 143310 ಮೆಟ್ರಿಕ್ ಟನ್ ಉತ್ಪಾದಿಸಿ 194 ಲಕ್ಷ ಮತ್ತು ಸಾದಾ ಮರಳು 6050 ಮೆಟ್ರಿಕ್ ಟನ್ ಉತ್ಪಾದಿಸಿ 4.75 ಲಕ್ಷ ರಾಜಧನ ಸಂಗ್ರಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 

ಸುಪ್ರಿಂ ಕೋಟರ್್ ಹಸಿರು ಪೀಠದ ನಿದರ್ೇಶನದನ್ವಯ ಮರಳು ನೀತಿಯನ್ನು ರೂಪಿಸಲಾಗಿದೆ. ಹಿಂದೆ ಇದ್ದ ರೀತಿ ಅಕ್ರಮ ಕಂಡು ಬಂದಾಗ ದಂಡ ವಿಧಿಸದೇ ಪ್ರಕರಣ ದಾಖಲಿಸಲಾಗುತ್ತದೆ. ಹಾಗಾಗಿ ಪರಿಸರಕ್ಕೆ ಹಾನಿಯಾಗದ ರೀತಿ ಹಾಗೂ ವೈಜ್ಞಾನಿಕವಾಗಿ ಗಣಿಕಾರಿಕೆ ಮಾಡಬೇಕಿದ್ದು ಈ ಬಗ್ಗೆ ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಬ್ಲಾಸ್ಟಿಂಗ್ ಬಗ್ಗೆ ರಕ್ಷಣಾಧಿಕಾರಿಗಳು ನಿಗಾವಹಿಸಬೇಕು ಎಂದು ಸಚಿವರು ಸೂಚಿಸಿದರು.

ಉಪ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನೂತನ ಮರಳು ನೀತಿ ಬಗ್ಗೆ ಸಭೆ ನಡೆದಿದ್ದು ಮುಂದಿನ ಸಭೆಗಳಲ್ಲಿ ರೂಪರೇಷಗಳನ್ನು ಮಾಡುವ ಮೂಲಕ ತೆಲಂಗಾಣ ಮಾದರಿಯಲ್ಲಿ ಮರಳನ್ನು ಎಲ್ಲರಿಗೂ ಸಿಗುವಂತೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಮರಳು ಸಿಗಬೇಕಾಗಿದೆ. ಮರಳು ಕೊರತೆ ಇದ್ದು ಬೇಡಿಕೆಯಷ್ಟು ಪೂರೈಕೆ ಮಾಡಲಾಗುತ್ತಿಲ್ಲ. ಹಾಗಾಗಿ ಎಂ ಸ್ಯಾಂಡ್ ಬಳಕೆ ಮಾಡಲು ಪ್ರೇರೆಪಿಸಲಾಗುತ್ತಿದೆ ಎಂದರು.

ನದಿ, ಹಳ್ಳ ಮಾತ್ರವಲ್ಲದೇ ಖಾಸಗಿ ಪಟ್ಟಾ ಭೂಮಿಗಳಲ್ಲಿ ಮರಳು ಲಭ್ಯವಿದ್ದಲ್ಲಿ ಹಾಗೂ ಯೋಗ್ಯವಿದ್ದಲ್ಲಿ ಮರಳು ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ನಿಯಮಾವಳಿಗಳನ್ನು ಮತ್ತು ಷರತ್ತುಗಳನ್ನು ಪೂರೈಸಿದ್ದಲ್ಲಿ ಈ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಇದನ್ನು ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೇ ಗರಿಷ್ಠ ಮೂರರಿಂದ ನಾಲ್ಕು ತಿಂಗಳೊಳಗಾಗಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.     

ಯಲಬುಗರ್ಾ ಶಾಸಕ ಹಾಲಪ್ಪ ಆಚಾರ್ರವರು ಮಾತನಾಡಿ, ಗ್ರಾನೈಟ್ಗೆ ಹೆಚ್ಚಿನ ಬೇಡಿಕೆ ಇದ್ದು ಪ್ರಸ್ತುತ ಕ್ವಾರಿ ಲೀಸ್, ಕ್ರಷರ್ಗಳು ಅನುಮತಿ ಹಾಗೂ ನವೀಕರಣಗೊಳ್ಳದೇ ಮುಚ್ಚುತ್ತಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. 

ಕನಕಗಿರಿ ಶಾಸಕ ಕುಷ್ಟಗಿ ಶಾಸಕ ಬಸವರಾಜ ದಢೇಸೂಗೂರುರವರು ಮಾತನಾಡಿ, ಜಿಲ್ಲೆಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮರಳು ಸುಲಭವಾಗಿ ಸಿಗುತ್ತಿಲ್ಲ. ಜನ ಸಾಮಾನ್ಯರು ಮನೆ ನಿಮರ್ಾಣ ಮಾಡುವುದು ತುಂಬಾ ಕಷ್ಟವಾಗಿದೆ. ಕಾರಟಗಿ ತಾಲೂಕಿನಲ್ಲಿ ಒಬ್ಬ ರೈತ ತನ್ನ ಮನೆಯಲ್ಲಿ ಶೌಚಾಲಯ ನಿಮರ್ಿಸಲೆಂದು ಕೇವಲ ಆರು ಪುಟ್ಟಿಗಳಷ್ಟು ಮರಳನ್ನು ಕೊಂಡೊಯ್ದಿರುವುದಕ್ಕೆ ಪೊಲೀಸರು ಎಫ್ಐಆರ್ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು. 

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರರವರು ಮಾತನಾಡಿ, ಸಕರ್ಾರದಿಂದ ವಿವಿಧ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಮನೆ ನಿಮರ್ಾಣಕ್ಕೆಯೇ ಮರಳು ಸಿಗುತ್ತಿಲ್ಲ ಹೀಗಿದ್ದಲ್ಲಿ ಜನಸಾಮಾನ್ಯರ ಪಾಡು ಏನು. ಎಲ್ಲರಿಗೂ ಸುಲಭವಾಗಿ ಮರಳು ಪೂರೈಸುವ ನಿಟ್ಟಿನಲ್ಲಿ ಹೋಬಳಿಗಳಿಗೆ ಒಂದರಂತೆ ಮರಳು ಸಂಗ್ರಹಣಾ ಡಿಪೊಗಳನ್ನು ಆರಂಭಿಸಿ ಅಲ್ಲಿಂದ ಜನರಿಗೆ ಮರಳು ಪೂರೈಕೆಯಾಗುವಂತೆ ಸಹಕರಿಸಬೇಕು ಎಂದರು.

ಸಭೆಯಲ್ಲಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಎನ್ಎಂಡಿಸಿ ನಿದರ್ೇಶಕ ಪ್ರಸನ್ನ ಕುಮಾರ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರಾವಲ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.