ಪ್ರೊ. ಕುಸಾಲ ದಾಸ ಅವರಿಗೆ ಅಜೀವ ಸಲಹೆಗಾರ ಘೋಷಣೆ
ವಿಜಯಪುರ 29: ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದ ಫಿಜಿಯಾಲಜಿ ವಿಭಾಗದ ಡಿಸ್ಟಿಂಗ್ವಿಷ್ ಚೇರ್ ಪ್ರೊಫೆಸರ್ ಕುಸಾಲ ದಾಸ ಅವರಿಗೆ ದಕ್ಷಿಣ ಏಷಿಯಾ ಶರೀರ ಕ್ರಿಯಾ ಶಾಸ್ತ್ರ ಜ್ಞರ ಸಂಘ(ಸ್ಯಾಪ್) ಸೌಥ್‌ಎಷಿಯಾ ಅಸೋಸಿಯೇಷನ್ ಆಫ್ ಫಿಜಿಯಾಲಾಜಿಸ್ಟಸ್(ಖಂಂಕ)ಕ್ಕೆ ಅಜೀವ ಸಲಹೆಗಾರ ಎಂದು ಘೋಷಣೆ ಮಾಡಲಾಗಿದೆ.
ಸ್ಯಾಪ್ ಅಧ್ಯಕ್ಷ ಪ್ರೊ. ಸಮೀನಾ ಮಲಿಕ ಮತ್ತು ಸೆಕ್ರೆಟರಿ ಜನರಲ್ ಪ್ರೊ. ನಯ್ಮಾ ಸುಲ್ತಾನ ಅವರು ಈ ಘೋಷಣೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಕುಸಾಲ ದಾಸ ಅವರು, ಈ ಗೌರವದಿಂದ ತಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ಇನ್ನಷ್ಟು ಸಂಶೋಧನೆ ಕೈಗೊಳ್ಳಲು ಹೊಸ ಉತ್ಸಾಹ ನೀಡಿದೆ. ಡೀಮ್ಡ್ ವಿವಿಯ ಕುಲಾಧಿಪತಿ ಎಂ. ಬಿ. ಪಾಟೀಲ ಅವರ ನಿರಂತರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರೊ. ಕುಸಾಲ ದಾಸ ಅವರಿಗೆ ಈ ಗೌರವ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.