ಬೆಳಗಾವಿ: 13 :ಒಂದೇ ಶಾಲೆ ಅಥವಾ ಕಾಲೇಜು ಹೊಂದಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸಿಬ್ಬಂದಿಗೆ ಬಡ್ತಿ ನೀಡಲು ಬಿ. ಕೆ. ಪವಿತ್ರ ಪ್ರಕರಣ ಅಡ್ಡಿಯಾಗದಿದ್ದಲ್ಲಿ ಮುಂಬಡ್ತಿ ನೀಡಲು ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ವಿಧಾನಪರಿಷತ್ತಿನಲ್ಲಿ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಶರಣಪ್ಪ ಮಟ್ಟೂರ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ 2016-17 ನೇ ಸಾಲಿನಲ್ಲಿ 247 ಪ್ರೌಢಶಾಲಾ ಸಹಶಿಕ್ಷಕರಿಗೆ ಮುಖ್ಯಶಿಕ್ಷಕರ ಹುದ್ದೆಗಳಿಗೆ ಮುಂಬಡ್ತಿ ನೀಡಲಾಗಿದೆ. .ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸವರ್ೋಚ್ಛ ನ್ಯಾಯಾಲಯವು ದಿನಾಂಕ : 9-2-2017 ರಂದು ನೀಡಿದ ತೀಪರ್ಿನನ್ವಯ ರಾಜ್ಯ ಸಿವಿಲ್ ಸೇವೆಗಳಲ್ಲಿನ ಎಲ್ಲಾ ವೃಂದಗಳ ಜೇಷ್ಟತಾ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸಕರ್ಾರಿ ನೌಕರರಿಗೆ ತತ್ಪರಿಣಾಮದ ಜೇಷ್ಟತೆಯನ್ನು ವಿಸ್ತರಿಸುವ 2017 ರ ಅಧಿನಿಯಮವು ದಿನಾಂಕ : 23-06-2018 ರಿಂದ ಜಾರಿಗೆ ಬಂದಿರುತ್ತದೆ. ಈ ಅಧಿನಿಯಮ ಪ್ರಶ್ನಿಸಿ ಸವರ್ೋಚ್ಛ ನ್ಯಾಯಾಲಯದಲ್ಲಿ ಹಲವು ರಿಟ್ ಅಜರ್ಿಗಳು ದಾಖಲಾಗಿರುವದರಿಂದ.ನ್ಯಾಯಾಲಯವು ಮುಂದಿನ ನಿದರ್ೇಶನ ನೀಡುವವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿರುವುದರಿಂದ, ಮುಂಬಡ್ತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಒಂದೇ ಶಾಲೆ ಅಥವಾ ಕಾಲೇಜು ಹೊಂದಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ರೋಸ್ಟರ್ ನಿಯಮಗಳು ಅಡ್ಡಿಯಾಗದಿದ್ದರೆ ಅಂತಹ ಸಂಸ್ಥೆಗಳ ಸಿಬ್ಬಂದಿಗೆ ಬಡ್ತಿ ನೀಡಲು ಸಾಧ್ಯವಿದೆಯೇ ? ಎಂಬುದನ್ನು ಪರಿಶೀಲಿಸಲಾಗುವುದು ಎಂದರು.
ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ-ರಹಿತ ಶಿಕ್ಷಣ ಸಂಸ್ಥೆಗಳಿಗೂ ಅನುದಾನ ನೀಡಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರ ಮಾಡಿದ ಮನವಿಯನ್ನೂ ಕೂಡಾ ಪರಿಶೀಲಿಸಿ ಮಾಪರ್ಾಡುಗಳನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಸದನಕ್ಕೆ ತಿಳಿಸಿದರು.