ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯವಶ್ಯಕ: ಸೋಮಶೇಖರ

ಕೊಪ್ಪಳ 14: ಸೈಬರ್ ಮತ್ತು ಆಥರ್ಿಕ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಸೈಬರ್, ಅಥರ್ಿಕ ಮತ್ತು ಮಾದಕ ದ್ರವ್ಯ ಅಪರಾದ ಪೊಲೀಸ್ ಠಾಣೆಯ ಪಿ.ಐ ಸೋಮಶೇಖರ ಜುಟ್ಟಲ್ ಅವರು ಹೇಳಿದರು.  

ಸೈಬರ್ ಮತ್ತು ಆಥರ್ಿಕ ಅಪರಾಧಗಳ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಇಂದು (ಮೇ. 14 ರಂದು) ನಗರದ ಬಿ.ಎಸ್. ಪವಾರ ಹೋಟೆಲ್ನ ಮಿಟಿಂಗ್ ಹಾಲ್ನಲ್ಲಿ ಬ್ಯಾಂಕುಗಳ ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಏರ್ಪಡಿಲಾದ  ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ನಡೆಯುವ ಡೆಬಿಟ್, ಕ್ರೆಡಿಟ್ ಕಾರ್ಡ ಬಳಸಿ ಎಟಿಎಮ್ ವಿತ್ ಡ್ರಾ ವಂಚನೆ, ಒಟಿಪಿ ಪಡೆದು ಮಾಡುವಂತಹ ವಂಚನೆಗಳ ಪ್ರಕರಣಗಳು ಜರುಗುತ್ತಿವೆ.  ಬ್ಯಾಂಕುಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇಂತಹ ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ.  ಇದರ ಬಗ್ಗೆ ಎಲ್ಲರಿಗೂ ತಿಳಿದಿರಬಹುದಾದ ವಿಶಷಯವಾಗಿದೆ ಆದರೂ ಸಹ ಈ ರೀತಿಯ ಮೊಸಕ್ಕೆ ಒಳಗಾಗುತ್ತಿದ್ದಾರೆ.  ಅಲ್ಲದೇ ಆನ್ಲೈನ್ ಶಾಪಿಂಗ್ ವಂಚನೆ, ಆನ್ಲೈನ್ ಸಾಲದ ವಂಚನೆ, ಒಎಲ್ಕ್ಸ್ನಲ್ಲಿ ವಾಹನ ಮಾರಾಟದ ವಂಚನೆ, ದೊಡ್ಡ ಮೊತ್ತದ ಹಣ ಹಾಗೂ ಕಾರುಗಳ ಬಹುಮಾನಗಳ ಆಮಿಷದ ವಂಚನೆ, ಮೊಬೈಲ್ ಟವರ್ ಹಾಕುವ ಹೆಸರಿನಲ್ಲಿ ಮಾಡುವ ವಂಚನೆ ಮತ್ತು ಉದ್ಯೋಗ ಕೊಡುವ ಅಥವಾ ಕೊಡಿಸುವ ಹೆಸರಿನಲ್ಲಿ ಮಾಡುವ ವಂಚನೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರು ಇಂತಹ ವಂಚನೆಗಳಲ್ಲಿ ಬಲಿಯಾಗುತ್ತಿಲ್ಲ.  ಆದರೆ ತಿಳಿದಿರುವವರು ವಿದ್ಯಾವಂತರೇ ಇಂತಹ ಮೊಸಕ್ಕೊಳಗುತ್ತಿದ್ದಾರೆ.  ಲೋನ್ ಕೆಳಿದರೇ ಬ್ಯಾಂಕುಗಳು ಕೊಡುವುದು ಕಷ್ಟ ಅಂತಹದ್ರಲ್ಲಿ ಆನ್ಲೈನ್ ಮೂಲಕ ನೀವು ಇಷ್ಟು ಮೊತ್ತ ಲೋನ್ಗೆ ಆಯ್ಕೆಯಾಗಿದ್ದಿರಿ.  ಸ್ಪಧರ್ೆಯೇ ಇಲ್ಲದೇ ನೀವು ಇಷ್ಟು ಮೊತ್ತ ಮೊಬೈಲ್, ಬೈಕ್ ಕಾರು ಗೆದ್ದಿದ್ದಿರಿ ಎಂದು ನಿಮ್ಮ ಸಂಖ್ಯೆಗಳಿಗೆ ಕರೆ ಬರುವುದೆಲ್ಲವೂ ಸೂಳ್ಳಾಗಿದ್ದು, ಇಂತಹ ಕರೆಗಳು ಬಂದರೆ ಅದಕ್ಕೆ ಸ್ಪಂಧಿಸದಿರಿ.  ನಿಮ್ಮ ಖಾತೆ ಸಂಖ್ಯೆ, ಪಿನ್, ಒಟಿಪಿಗಳಂತಹ ಯಾವುದೇ ಸಂಖ್ಯೆಗಳನ್ನು ಬ್ಯಾಂಕುಗಳು ಕೇಳುವುದಿಲ್ಲ.  ಅಲ್ಲದೇ ಆನ್ಲೈನ್ ಶಾಪಿಂಗ್ ಮಾಡುವ ಮುನ್ನವೂ ಸಹ ಎಚ್ಚರಿಕೆಯಿಂದ ವ್ಯವಹಾರ ಮಾಡಿ.  ಆನ್ಲೈನ್ ಶಾಪಿಂಗ್ ವೇಳೆ ಯಾವೆದೇ ಬಗೆಯ ಅಡ್ವಾನ್ಸ್ ಪೇಮೆಂಟ್ ವ್ಯವಹಾರಗಳಿಂದ ದೂರವಿರಿ.  ಇವು ಎಲ್ಲಾವೂ ಸೈಬರ್ ಮತ್ತು ಆಥರ್ಿಕ ಅಪರಾಧಗಳಡಿ ಬರಲಿವೆ ಆದ್ದರಿಂದ ಸಾರ್ವಜನಿಕರು ಈ ಕುರಿತು ಜಾಗೃತರಾಗಬೇಕು.  ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕೊಪ್ಪಳ ಸೈಬರ್, ಅಥರ್ಿಕ ಮತ್ತು ಮಾದಕ ದ್ರವ್ಯ ಅಪರಾದ ಪೊಲೀಸ್ ಠಾಣೆಯ ಪಿ.ಐ ಸೋಮಶೇಖರ ಜುಟ್ಟಲ್ ಅವರು ಹೇಳಿದರು. ಕೊಪ್ಪಳ ಸೈಬರ್, ಅಥರ್ಿಕ ಮತ್ತು ಮಾದಕ ದ್ರವ್ಯ ಅಪರಾದ ಪೊಲೀಸ್ ಠಾಣೆಯ ರಂಗನಾಥ ಸೇರಿದಂತೆ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.