ರಾಜ್ಯೋತ್ಸವ ಪೂರ್ವಭಾವಿ ಸಭೆ ಬಹಿಷ್ಕಾರ

ಲೋಕದರ್ಶನ ವರದಿ

ಶಿಗ್ಗಾವಿ 17: ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ತಾವುಗಳು ದಿನಾಂಕ: 17-10-2018 ರಂದು 12-00 ಘಂಟೆಗೆ ಸಭೆಯನ್ನು ಎಲ್ಲ ಇಲಾಖಾ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಲಾಗಿದ್ದರೂ ಕೂಡಾ ಸಭೆಗೆ ತಾಲೂಕಿನ ಎಲ್ಲ ಅಧಿಕಾರಿಗಳು ಗೈರು ಹಾಜರಾಗಿದ್ದು ಖಂಡನೀಯ. ಮತ್ತು ಸ್ಥಳೀಯ ಜನಪ್ರತಿನಿಧಿಗಳು ಬೆರಳೆಣಿಕೆಯಷ್ಟೇ ಹಾಜರಾಗಿದ್ದು ಕನ್ನಡಾಭಿಮಾನ ಮತ್ತು ರಾಜ್ಯೋತ್ಸವದ ಆಚರಣೆಯ ಬಗ್ಗೆ ಅವರಲ್ಲಿರುವ ತಾತ್ಸಾರ ಮನೋಭಾವನೆ ಅವರಲ್ಲಿ ಎತ್ತಿ ತೋರಿಸುತ್ತದೆ. ಶಿಸ್ಟಾಚಾರಕ್ಕೆ ಆದರೂ ಸಹಿತ ಸಭೆಗೆ ಹಾಜರಾಗದೇ ದೂರ ಉಳಿದ ಇಲಾಖೆ ಅಧಿಕಾರಿಗಳ ದುರಹಂಕಾರದ ನಡೆಗೆ ತಾಲೂಕಿನ ಎಲ್ಲ ಕನ್ನಡಾಭಿಮಾನಿಗಳಿಗೆ ಮತ್ತು ನಾಡದೇವಿ ಭುವನೇಶ್ವರಿಗೆ ಅವಮಾನವೆಸಗಿದ್ದು ಕ್ಷಮೆಗೆ ಅರ್ಹವಾದುದ್ದು ಅಲ್ಲ.

   ಬರೀ ನೆಪ ಮಾತ್ರಕ್ಕೆ ತಾಲೂಕಾ ದಂಡಾಧಿಕಾರಿಗಳಿಗೆ ಕುಂಟು ನೆಪ ಹೇಳಿ ಸಭೆಯಿಂದ ದೂರ ಉಳಿದ ಶಿಸ್ಟಾಚಾರವನ್ನು ಪಾಲನೆ ಮಾಡದೇ ಇರುವ ಅಧಿಕಾರಿಗಳನ್ನು ಮಾನ್ಯ ತಾಲೂಕಾ ದಂಡಾಧಿಕಾರಿಗಳು ಅವರ ಮೇಲೆ ಶೋಕಾಸ ನೋಟಿಸ್ ನೀಡಿ ಕಾರಣ ತೆಗೆದುಕೊಳ್ಳಬೇಕು.

 ಅಲ್ಲದೇ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತಾಗಬೇಕು. ತಾಲೂಕಾ ದಂಡಾಧಿಕಾರಿಗಳ ಆದೇಶವನ್ನು ಪಾಲನೆ ಮಾಡದೇ ಅಸಡ್ಯವಾಗಿ ವತರ್ಿಸಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು.

                 ಸೌಜನ್ಯಕ್ಕಾದರೂ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಆಗಮಿಸದೇ ಇರುವ ಸ್ಥಳೀಯ ಮತ್ತು ತಾಲೂಕಿನ ಎಲ್ಲ ಜನಪ್ರತಿನಿಧಿಗಳು ನಡೆಯನ್ನು ತಾಲೂಕಿನ ಎಲ್ಲ ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳು ಖಂಡಿಸುತ್ತಾರೆ. ಬರೀ ಚುನಾವಣೆ ರಾಜಕಾರಣಕ್ಕೆ ಮಾತ್ರ ಸಿಮಿತವಾಗಿರದೇ ಕನ್ನಡ ಪರ ವಿಚಾರಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗಬೇಕು ಎನ್ನುವುದೇ ನಮ್ಮ ಒಡಲಾಳದ ನೋವು. ಇನ್ನುಮುಂದೆಯಾದರೂ ಸ್ಥಳೀಯ ಜನಪ್ರತಿನಿಧಿಗಳು ರಾಜ್ಯೋತ್ಸವ ಸಭೆ ಸಮಾರಂಭಗಳಲ್ಲಿ ಮತ್ತು ಕನ್ನಡದ ಮನಸ್ಸುಗಳನ್ನು ಒಗ್ಗಟ್ಟು ಮಾಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಲಿ ಅನ್ನುವುದೇ ನಮ್ಮ ಮನವಿ.

ಪಟ್ಟಣದ ತಾಲೂಕ ದಂಡಾದಿಕಾರಿಗಳಿಗೆ ಮನವಿ ನೀಡಿದ ತಾಲೂಕಿನ ಕನ್ನಡ ಪರ ಹೋರಾಟಗಾರರಾದ ಸಂತೋಷಗೌಡ ಪಾಟೀಲ, ನಿಂಗಪ್ಪ ಬೆಂಚಳ್ಳಿ  ಬಸವರಾಜ ಕುನ್ನೂರ,ದುರಗಪ್ಪ ವಡ್ಡರ, ಈರಣ್ಣ ಸಮಗೊಂಡಶಂಕರ ಬಡಿಗೇರ, ಮಂಜುನಾಥ ಬಡಿಗೇರಮಾಣಿಕ್ಯ ನವಲೂರ, ಪೀರಾಮನಿ, ಪವನ ಬಾರಕೇರ, ಶಂಭು ಕೇರಿ ಮುಂತಾದವರು ಉಪಸ್ಥಿತರಿದ್ದರು.