ರಾಮ ಮಂದಿರ, ಹಿಂದುಗಳನ್ನು ಒಟ್ಟುಗೂಡಿಸಿದ ರಾಷ್ಟ್ರಮಂದಿರ: ಅರವಿಂದ ದೇಶಪಾಂಡೆ

Ram Mandir, the national temple that unites Hindus: Arvind Deshpande

ರಾಮ ಮಂದಿರ, ಹಿಂದುಗಳನ್ನು ಒಟ್ಟುಗೂಡಿಸಿದ ರಾಷ್ಟ್ರಮಂದಿರ: ಅರವಿಂದ ದೇಶಪಾಂಡೆ 

ಬೆಳಗಾವಿ 16: ರಾಮ ಮಂದಿರದ ಹೋರಾಟದ ದೃಷ್ಟಿಯಿಂದ ಲೇಖಕ ಡಾ. ಸಿ. ಕೆ. ಜೋರಾಪೂರ ಅವರು ಬರೆದಿರುವ ‘ಶ್ರೀರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ’ ಅತ್ಯಂತ ಮಹತ್ವದ ಕೃತಿಯಾಗಿದ್ದು ಇದು ಎಲ್ಲ ಓದುಗರನ್ನು ತಲುಪುವಂತಾಗಬೇಕು. ಅಯೋಧ್ಯೆಯ ರಾಮ ಮಂದಿರ ಕೇವಲ ರಾಮಮಂದಿರವಲ್ಲ ಹಿಂದುಗಳನ್ನೆಲ್ಲ ಒಂದುಗೂಡಿಸುವ ರಾಷ್ಟ್ರ ಮಂದಿರ ಎಂದು ರಾಷ್ಟ್ರವಾದಿ ಅರವಿಂದ ದೇಶಪಾಂಡೆಯವರು ಇಂದಿಲ್ಲಿ ಹೇಳಿದರು ನಗರದ ನಾಡಹಬ್ಬ ಉತ್ಸಹ ಸಮಿತಿ ಮತ್ತು ಪ್ರಹ್ಲಾದ ಪ್ರಕಾಶನ ಇವುಗಳ ಸಂಯುಕ್ತ ಆಶ್ರಯದಲ್ಲಿ  ನಿನ್ನೆ ದಿ. 15 ರಂದು ಶಿವಬಸವನಗರದಲ್ಲಿರುವ ಕನ್ನಡ ಭವನದಲ್ಲಿ ಲೇಖಕ ಡಾ. ಸಿ. ಕೆ. ಜೋರಾಪೂರ ಅವರು ರಚಿಸಿದ ‘ಶ್ರೀರಾಮ ಮಂದಿರದ ಹೋರಾಟಗಳು ಮತ್ತು ರಾಮಾಯಣ’ ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರವಿಂದ ದೇಶಪಾಂಡೆಯವರು ಮೇಲಿನಂತೆ ಅಭಿಪ್ರಾಯ ಪಟ್ಟರು. ನಿವೃತ್ತ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಇವರು ಕೃತಿ ಪರಿಚಯಿಸುತ್ತ ಶ್ರೀರಾಮ ಮಂದಿರ ಸ್ಥಾಪನೆಯ ಸಂಘರ್ಷಣೆಯ ಇತಿಹಾಸ ಮುಂದಿ ಪೀಳಿಗೆಗೆ ಗೊತ್ತಾಗಬೇಕೆಂಬ ಆಸೆಯಿಂದ ವಾಸ್ತವದ ಸಂಗತಿಗಳನ್ನು ಈ ಕೃತಿಯಲ್ಲಿ ಲೇಖಕ ಡಾ. ಜೋರಾಪೂರ ಅವರು ದಾಖಲಿಸಿದ್ದಾರೆ. ಅತ್ಯಂತ ಉತ್ಕೃಷ್ಟವಾದ ಗ್ರಂಥವಿದಾಗಿದ್ದು ಎಲ್ಲರೂ ಕೊಂಡು ಓದಬೇಕೆಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಪಂ. ಪ್ರಮೋದಾಚಾರ್ಯ ಕಟ್ಟಿಯವರು ಮಾತನಾಡುತ್ತ, ಡಾ. ಜೋರಾಪೂರ ಅವರ ಈ ಕೃತಿಯಲ್ಲಿ ರಾಮ ಮಂದಿರದ ಹೋರಾಟದ ಕ್ಷಣಗಳೊಂದಿಗೆ ಸಂಕ್ಷಿಪ್ತವಾಗಿ, ಚಿಂತನಾತ್ಮಕವಾಗಿ ಅಲ್ಲದೇ ರೋಚಕವಾಗಿ ರಾಮಾಯಣವನ್ನು ಸಂಗ್ರಹಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಲೇಖಕ ಡಾ. ಜೋರಾಪೂರ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ,  ಗ್ರಂಥಾಲಯ ಲೇಖಕರ ಕೃತಿಗಳನ್ನು ಕೊಂಡುಕೊಳ್ಳುವಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ತುಂಬ ಖೇದದ ಸಂಗತಿ. ಸರಕಾರ ಲೇಖಕರ ಪುಸ್ತಕಗಳನ್ನು ಕೊಂಡುಕೊಳ್ಳುವುದರ ಬರೆಹಗಾರರನ್ನು ಪ್ರೋತ್ಸಾಹಿಸಬೇಕೆಂದು  ಕೇಳಿಕೊಂಡರು. ಬೇರೆ ಬೇರೆ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಮಾಧವಾಚಾರ್ಯ ಆಯಿ, ನಿರುಪಾದಯ್ಯ ಕಲ್ಲೊಳ್ಳಿಮಠ, ಎಲ್‌. ಎಸ್‌. ಶಾಸ್ತ್ರಿ, ಹನುಮಂತ ಕೊಂಗಾಲಿ, ಸುರೇಶ ಯಾದವ, ವ್ಹಿ. ಕೆ. ಬಡಿಗೇರ, ಡಾ. ಶಿವು ನಂದಗಾವಿಯವರನ್ನು ಗೌರವಿಸಲಾಯಿತು. ವೇದಿಕೆ ಮೇಲಿನ ಗಣ್ಯರಿಂದ ‘ಶ್ರೀರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ’ ಕೃತಿ ಬಿಡುಗಡೆಗೊಂಡಿತು. ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಯವರು ಆಶೀರ್ವಚನ ನುಡಿಗಳನ್ನಾಡಿದರು. ಡಾ. ಎಚ್‌.ಬಿ. ರಾಜಶೇಖರ ಅಧ್ಯಕ್ಷತೆಯನ್ನು ವಹಿಸಿದ್ದರು.  ಭಾರತಿ ಚೌಧರಿಯವರು ಹಾಡಿದ ರಾಷ್ಟ್ರಾಭಿಮಾನ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು... ಆರ್‌. ಪಿ. ಪಾಟೀಲ ವಂದಿಸಿದರು. ಪ್ರೊ. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಡಾ. ಬಸವರಾಜ ಜಗಜಂಪಿ, ಪ್ರೊ. ಎಂ.ಎಸ್‌. ಇಂಚಲ, ಯ. ರು. ಪಾಟೀಲ, ಪ್ರೊ. ಜಿ. ಕೆ. ಕುಲಕರ್ಣಿ, ಅರವಿಂದ ಹುನಗುಂದ, ಜಯತೀರ್ಥ ಸವದತ್ತಿ, ಕೇದಾರ ಜೋರಾಪೂರ, ಪ್ರಹ್ಲಾದ ಜೋರಾಪೂರ, ಸೋಮಲಿಂಗ ಮಾವಿನಕಟ್ಟಿ, ಪಾಂಡುರಂಗ ಮಾರಿಹಾಳಕರ, ಚಂದ್ರಶೇಖರ ನವಲಗುಂದ ಗುಂಡೇನಟ್ಟಿ ಮಧುಕರ, ಮದನ ಕಣಬೂರ, ಶ್ರೀಮತಿ ಗೀತಾ ಸುತಾರ, ವಿಜಯಾ ಹಿರೇಮಠ, ಸುಜಾತಾ ಉಲ್ಲಾಳ, ಮಹಾದೇವಿ ಹಿರೇಮಠ, ಆನಂದ ಕರನನಿಂಗಣ್ಣವರ, ಸಮೃದ್ಧಿ ಚೌಧರಿ, ಕೆ. ತಾನಾಜಿ ಮುಂತಾದ ಗಣ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತದ್ದರು.