ಲೋಕದರ್ಶನ ವರದಿ
ಬೆಳಗಾವಿ, 20: ಸಮರ್ಥನಂ ಅಂಗವಿಕಲರ ಸಂಸ್ಥೆಯು ಕುಂದಾನಗರಿಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ 4ನೇ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂನರ್ಿ ಭಾನುವಾರ ಸಮಾರೋಪಗೊಂಡಿತು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರಾಮನಗರ ತಂಡ ಜಯಗಳಿಸಿದೆ. ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯು ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ನಗರ ಸೇವಕಿ ಅನುಶ್ರೀ ದೇಶಪಾಂಡೆ, ವೇಣುಗ್ರಾಮ ಆಸ್ಪತ್ರೆಯ ವೈದ್ಯ ಡಾ.ಶ್ರೀಪತಿ ಪಿಸೆ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಣೆ ಮಾಡಿದರು. ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯಸ್ಥರಾಗಿರುವ ಎಂ.ಅರುಣಕುಮಾರ್, ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಪ್ರಾಚಾಯರ್ೆ ಅನಿತಾ ಗಾವಡೆ, ಸಮರ್ಥನಂ ಸಂಸ್ಥೆಯ ಉತ್ತರ ಕನರ್ಾಟಕ ವಿಭಾಗದ ಟ್ರಸ್ಟಿ ಉದಯ ಭಾಗಣ್ಣವರ, ಕನರ್ಾಟಕ ಅಂಧರ ಕ್ರಿಕೆಟ್ ಮಂಡಳಿ ಕಾರ್ಯದಶರ್ಿ ಸತೀಶ ಮತ್ತಿತರರು ಉಪಸ್ಥಿತರಿದ್ದರು.