ನಮ್ಮ ರಕ್ಷಕ ಹಾಗೂ ಬಹುದೊಡ್ಡ ಪ್ರಶ್ನೆ ಕೃತಿಗಳ ಬಿಡುಗಡೆ
ಬೆಳಗಾವಿ 02: ಡಾ. ಸುನೀಲ ಪರೀಟ ಅವರು ಸಂಪಾದಿಸಿದ ಸೈನಿಕರ ಕುರಿತಾಗಿ ’ನಮ್ಮ ರಕ್ಷಕ’ ಕವನ ಸಂಕಲನ ಹಾಗೂ ಅವರ ಸ್ವರಚಿತ ’ಬಹುದೊಡ್ಡ ಪ್ರಶ್ನೆ’ ಕವನ ಸಂಕಲನಗಳು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರದಂದು ಲೋಕಾರೆ್ಣ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ. ರಾ. ಸುಳಕೂಡೆ ಮಾತನಾಡಿ, ಸೈನಿಕರಗೋಸ್ಕರ ಇದೊಂದು ಅತ್ಯದ್ಭುತ ಕೃತಿ ಇದರಲ್ಲಿ ಸೈನಿಕರಿಗೆ ಶಬ್ದ ಸುಮಾನಗಳು ಅರ್ಿತಗೊಂಡಿವೆ. ’ಬಹುದೊಡ್ಡ ಪ್ರಶ್ನೆ’ ಇದು ಆಧುನಿಕ ಯಾಂತ್ರಿಕ ಯುಗದಲ್ಲಿ ಜೀವಿಸುತ್ತಿರುವ ಮನುಷ್ಯನಿಗೆ ದಾರೀದೀಪವಾಗಲಿದೆ ಎಂದರು.ನಮ್ಮ ರಕ್ಷಕ ಕೃತಿಯನ್ನು ಬಿಡುಗಡೆಗೊಳಿಸಿ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ ಮಾತನಾಡಿ, ನಾನು ನೋಡಿದ ಹಾಗೆ ಸೈನಿಕರಗೋಸ್ಕರ ಬಂದಿರುವ ಇದು ್ರ್ರಥಮ ಕವನ ಸಂಕಲನ, ನಿಜಕ್ಕೂ ಇದು ಸಾಹಿತ್ಯ ಜಗತ್ತಿನಲ್ಲಿ ಸಂಚಲನವನ್ನು ಮೂಡಿಸುತ್ತದೆ.
ಕೃತಿ ಪರಿಚಯಿಸಿದ ಡಾ.. ಎಫ್. ವೈ. ಗಡ್ಡಿಗೌಡರ ಅವರು ಮಾತನಾಡಿ, ಕವಿಗಳ ಕವನಗಳ ಮೂಲಕ ಸೈನಿಕರ ಮಹತ್ವವು ಇಡೀ ಸಮಾಜಕ್ಕೆ ಸಾರುತಿದೆ. ಕವಿತೆಗಳು ಸೈನಿಕರ ಕುರಿತು ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುತ್ತಿವೆ. ಬಹುದೊಡ್ಡ ಪ್ರಶ್ನೆ ಕೃತಿಯನ್ನು ಬಿಡುಗಡೆ ಮಾಡುತ್ತಾ ಪ್ರೊ. ಎಸ್.ಎಂ. ಗಂಗಾಧರಯ್ಯ ಅವರು ಮಾತನಾಡಿ, ಈ ಕೃತಿಯ ಮೂಲಕ ಕೇಳಲಾದ ಬಹುದೊಡ್ಡ ಪ್ರಶ್ನೆಯನ್ನು ಈ ಮೊದಲು ಸಾಹಿತಿಗಳು ಕೇಳಿದ್ದಾರೆ. ಆದರೆ ಅವರು ಕೇಳಿದ ಪರಿ ಹಾಗೂ ಈಗ ಡಾ. ಪರೀಟ ಅವರು ಕೇಳಿದ ಪರಿ ವಿಭಿನ್ನವಾಗಿದೆ. ಸಮಾಜೊನ್ಮುಖವಾಗಿ ಸಾಗಿದ ಕವಿತೆಗಳು ಇಲ್ಲಿ ನಾವು ಕಾಣಬಹುದು. ನಮ್ಮೆಲ್ಲರನ್ನು ಬಡಿದೆಬ್ಬಿಸುವ ಭಾವನೆಗಳು ಇಲ್ಲಿ ಮೂಡಿಬಂದಿವೆ. ಕೃತಿ ಪರಿಚಯವನ್ನು ಮಾಡುತ್ತಾ ನಾಗೇಶ್ ನಾಯಕ ಅವರು ಹೇಳಿದರು ಆಧುನಿಕತೆಯ ಯುಗದಲ್ಲಿ ನೈತಿಕತೆಯನ್ನು ಬೆಂಬಲಿಸುವ ಕವಿತೆಗಳು ಇಲ್ಲಿ ಓದಲು ಸಿಗುತ್ತವೆ. ಈ ಕೃತಿಯು ಮಾನವ ಜೀವನಕ್ಕೆ ದಾರೀದೀಪವಾಗಲಿದೆ.
ಜನಪದೀಯ ಸಾಹಿತ್ಯದ ಸೊಬಗು ಇಲ್ಲಿ ಕಾಣತೊಡಗಿದೆ.ಶಿವ ಅಪ್ ಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಮಾಲೀಕರಾದ ಡಾ. ಶಿವು ನಂದಗಾಂವ ಅವರು ಮಾತನಾಡಿ, ಇಂತಹ ಅದ್ಭುತ ಕೃತಿಗಳನ್ನು ಪ್ರಕಟಣೆ ಮಾಡುವಾಗ ನಮಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ಶ್ರೀಮತಿ ಪಾರ್ವತಿ ಗುರುದೇವ್ ಅಂಬಲಿ, ಕಸಾಪ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ ಅವರು ಉಪಸ್ಥಿತರಿದ್ದರು. ಲೇಖಕ ಡಾ. ಪರೀಟ ಅವರುಮಾತನಾಡಿ, ಸಾಹಿತ್ಯವು ನಿಂತ ನೀರಲ್ಲ ಅದು ನದಿಯಂತೆ ಯಾವತ್ತು ನಿರಂತರವಾಗಿ ಹರಿಯುತ್ತದೆ. ಸಾಹಿತ್ಯದಲ್ಲಿ ನವನವೀನ ಪ್ರಯೋಗಗಳು ಆಗುತ್ತಿರುತ್ತವೆ. ಸಾಹಿತ್ಯವು ಸಮಾಜದ ಹಿತಕ್ಕಾಗಿ ಈ ರಾಷ್ಟ್ರದ ಹಿತಕ್ಕಾಗಿ ಮೂಡಿ ಬಂದರೆ ಸಾರ್ಥಕತೆ ಹೊಂದುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಮ್ಮ ರಕ್ಷಕ ಕವನ ಸಂಕಲನದಲ್ಲಿ ಕವಿತೆಗಳನ್ನು ಬರೆದ ಕವಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ, ಪುಸ್ತಕಗಳನ್ನು ಹಾಗೂ ಶಾಲನ್ನು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ವಿಶೇಷತೆ ಎಂದರೆ ಸಿದ್ದಪ್ಪ ಗೊಡಚಿ, ಚನ್ನಬಸಪ್ಪ ಬಳಗಾರ ಮಾಜಿ ಸೈನಿಕರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಕವಿಗಳು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ. ಮಂಜುನಾಥ ಕಲಾಲ ನಿರೂಪಿಸಿದರು, ಡಾ. ಸುನೀಲ ಪರೀಟ ಸ್ವಾಗತಿಸಿದರು, ಎಂ.ವೈ. ಮೆಣಸಿನಕಾಯಿ ಅವರು ವಂದಿಸಿದರು.