ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗಣರಾಜ್ಯೋತ್ಸವ ದಿನ ಆಚರಣೆ
ತಾಳಿಕೋಟಿ 26: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ 76ನೇ ಗಣ ರಾಜ್ಯೋತ್ಸವ ದಿನಾಚರಣೆಯನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮದ ಮುನ್ನ ಕರ್ನಾಟಕ ಸಾಬೂನ್ ಮತ್ತು ಮಾರ್ಜಕ ನಿಯಮದ ಅಧ್ಯಕ್ಷ,ಶಾಸಕ ಅಪ್ಪಾಜಿ ನಾಡಗೌಡ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಅರ್ಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ ಧ್ವಜಾ ರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಬಿ.ಎಸ್.ಪಾಟೀಲ (ಯಾಳಗಿ), ಎಂ.ಜಿ.ಪಾಟೀಲ, ಎ.ಕೆ.ನಮಾಜಕಟ್ಟಿ, ಚಾಂದಸಾ ಲಾಹೋರಿ, ಎಂ.ಎ. ಮೇತ್ರಿ, ಬುಡನ್ ಶಾ ಮಕಾನದಾರ, ಎಂ.ಆರ್.ಮಕಾನದಾರ, ಮೋದಿನಸಾ ನಗಾರ್ಚಿ, ರಫೀಕ ಬೇಪಾರಿ, ಸಂಗಮೇಶ ದೇಸಾಯಿ, ಹಡಗಿನಾಳ ದೇಸಾಯಿ, ಫಯಾಜ ಉತ್ನಾಳ, ರಿಯಾಜ್ ಡೋಣಿ, ಕಾಸೀಮ ಅಬಾವಲೆ, ಸದ್ದಾಮ್ ಹೊನ್ನಳ್ಳಿ, ಗೋಪಾಲ ಕಟ್ಟಿಮನಿ, ಆಸಿಫ್ ಕೆಂಭಾವಿ ಮತ್ತಿತರರು ಇದ್ದರು.