ಅತಿಥಿ ಶಿಕ್ಷಕರಿಗೆ ಮೊದಲು ಆದ್ಯತೆ ನೀಡಬೇಕೆಂದು ಮನವಿ

ಲೋಕದರ್ಶನ ವರದಿ

ಕೊಪ್ಪಳ 09: ಮೊದಲು ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರಿಗೆ ಮೊದಲು ಆದ್ಯತೆ ನೀಡಬೇಕೆಂದು ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಉಪನಿದರ್ೆಶಕರಿಗೆ ಮನವಿ ಸಲ್ಲಿಸಲಾಯಿತು.

2019-20ನೇ ಸಾಲಿನ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದ್ದು, ಆ ಆದೇಶದ ಪ್ರತಿಯಲ್ಲಿ ಮೇರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವುದೆಂದು ತಿಳಿಸಲಾಗಿದೆ.

ಆದ್ದರಿಂದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಹಲವಾರು ಬಾರಿ ರಾಜ್ಯ ಸಕರ್ಾರಕ್ಕೆ ಹಾಗೂ ಶಿಕ್ಷಣ ಇಲಾಖೆಗಳಿಗೆ ಸಂಬಂಧಿಸಿದ ಸರ್ಕಾರಿ ಮತ್ತು ಅಧಿಕಾರಿಗಳಿಗೆ ಹಲವು ಬೇಡಿಕೆ ಮತ್ತು ಸಮಸ್ಯೆಗಳನ್ನು ಕುರಿತಾಗಿ ಮನವಿಯನ್ನು ಸಲ್ಲಿಸಿದರೂ ಕೂಡಾ ಯಾವುದೇ ರೀತಿಯಲ್ಲಿ ಪ್ರಯೋಜನೆ ಆಗಲಿಲ್ಲ. ಜೊತೆಗೆ ಯಾವುದೇ  ರೀತಿ ಸ್ಪಂದನೆ ಸಿಗಲಿಲ್ಲ.

ಸುಮಾರು ಆರು ಏಳು ವರ್ಷಗಳಿಂದ ಕೆಲಸ ಮಾಡುತ್ತಿರುವಂತಹ ಅತಿಥಿ ಶಿಕ್ಷಕರಿಗೆ ಮೆರಿಟ್ ಆಧಾರದ ನೇಮಕಾತಿಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ತಕ್ಷಣ ಪರಿಹರಿಸಬೇಕೆಂದು ಸಕರ್ಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಒತ್ತಾಯಿಸಿ ಸಾರ್ವಜನಿಕ ಶಿಕ್ಷಣ ಇಳಾಖೆಯ ಉಪನಿದರ್ೇಶಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಸಣ್ಣ ಹುಸೇನಪ್ಪ ಹಂಚಿನಾಳ, ಹನುಮಂತಪ್ಪ ಎಚ್ ಎಸ್, ಪಾಲಾಕ್ಷಗೌಡ ಮಾಲಿಪಾಟೀಲ, ಭಾಗ್ಯಲಕ್ಷ್ಮಿ ಇಟಗಿ, ಬೀರಪ್ಪ ಬಂಡಿ, ರಾಜಶೇಖರ ಆರ್ ಗ್ಯಾನಪ್ಪ ತಳವಾರ, ವಿರುಪಾಕ್ಷಿ ಹಳ್ಳಿ, ದುರಗಪ್ಪ ಟಿ, ಕುಂಟೆಪ್ಪ ಹುಗ್ಗಿ, ಶರಣಪ್ಪ ಎಂ.ಕೆ ಸೇರಿದಂತೆ ಇತರರು ಇದ್ದರು.