ಬೇಡಿಕೆಗೆ ಸರ್ಕಾರ ಸ್ಪಂದಿಸಲು ಮನವಿ
ಸಿಂದಗಿ 07 : ಆಶಾ ಕಾರ್ಯಕರ್ತೆಯರು ಕಳೆದ ಬಾರಿಯೂ ಮನವಿ ಸಲ್ಲಿಸಿದ್ದು, ಆದರೆ ವಿರೋಧ ಪಕ್ಷ ಬಿಜೆಪಿಯವರು ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಈ ವಿಷಯ ಕಲಾಪದಲ್ಲಿ ಚರ್ಚಿಸಲು ಆಗಲಿಲ್ಲ. ಈ ಬಾರಿ ಖಂಡಿತವಾಗಿ ನಿಮ್ಮ ಸಮಸ್ಯೆಗಳ ಧ್ವನಿಯಾಗಿ ಸರ್ಕಾರದ ಗಮನಕ್ಕೆ ತರುವೆ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಪಟ್ಟಣದಲ್ಲ್ಲಿ ಆಶಾ ಕಾರ್ಯಕರ್ತೆಯರ ಮನವಿ ಸ್ವೀಕರಿಸಿ ಮಾತನಾಡಿದರು.
ಆಶಾ ಕಾರ್ಯಕರ್ತೆ ರೂಪಾ ಆಲಮೇಲ ಮಾತನಾಡಿ, ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೆಂಬುದು ವಾಸ್ತವ ಸತ್ಯ. ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಮುಂಚೂಣಿಯ ವಾರಿಯರ್ಸ್ ಆಗಿ ಸೇವಾ ಕಾರ್ಯ ಸಲ್ಲಿಸಿದ್ದಾರೆ. ಇಂತಹ ಸೇವೆಗಾಗಿ ಸದಾ ಸಿದ್ಧರಾದ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಹಾಗೂ ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವ ಧನ ಸೇರಿಸಿ ಒಟ್ಟು 15 ಸಾವಿರ ರೂ. ನೀಡಬೇಕು ಎಂಬ ಪ್ರಮುಖ ಬೇಡಿಕೆಗೆ ಸರ್ಕಾರ ಸ್ಪಂದಿಸುವಂತೆ ಮನವಿ ಮಾಡಿಕೊಂಡರು.
ನಾಗಮ್ಮ ಎಮ್ಮಿ, ತುಳಜವ್ವ ಹತ್ತರಕಿಹಾಳ, ಗಂಗೂಬಾಯಿ ಮಣ್ಣೂರ, ಜಾನವ್ವ ಪುರದಾಳ, ಕವಿತಾ ನಾವಿ, ಸಂಗೀತಾ ಕುಲಕರ್ಣಿ, ಜ್ಯೋತಿ ಕುಲಕರ್ಣಿ, ಗೀತಾ ಕೂಚಬಾಳ ಇದ್ದರು.