ಕೂಡಲೇ ರೈಲ ಸಂಚಾರ ಆರಂಭಿಸಲು ಮನವಿ

Request to start train services immediately

ಕೂಡಲೇ ರೈಲ ಸಂಚಾರ ಆರಂಭಿಸಲು ಮನವಿ 

ಹೊಸಪೇಟೆ 15: ನೈರುತ್ಯ ರೈಲ್ವೇ ಬಳಕೆದಾರರ ಹಿರಿಯ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್ ಅವರ ನೇತೃತ್ವದಲ್ಲಿ ವಿಜಯನಗರ ರೈಲ್ವೇ ಬಳಕೆದಾರರ ಸಂಘದ ಪದಾಧಿಕಾರಿಗಳೂ 14 ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಈ ಭಾಗದ ರೈಲ್ವೇ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿತು. ಹೊಸಪೇಟೆ, ಬಳ್ಳಾರಿ, ಕೊಟ್ಟೂರು ಮಾರ್ಗವಾಗಿ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಇದರಿಂದ ಹಂಪಿ, ಬೇಲೂರು, ಹಳೇ ಬೀಡು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶ್ರವಣಬೆಳಗೋಳ, ಮಣಿಪಾಲ, ಉಡುಪಿ, ಮಂಗಳೂರಿಗೆ ಸಂಪರ್ಕ ದೊರೆಯುತ್ತದೆ. ಅಲ್ಲದೇ ಕರಾವಳಿ ಮಲೆನಾಡು ಜಿಲ್ಲೆಗಳಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ನಡುವೆ ವ್ಯಾಪಾರ ವಾಣಿಜ್ಯ ವಹಿವಾಟುಗಳು ವೃದ್ದಿಯಾಗುತ್ತವೆ. ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ ಎಂದರು.  

ಈ ಸಂದರ್ಭದಲ್ಲಿ ವೈ.ಯಮುನೇಶ್, ಮಹೇಶ್ ಕುಡುತಿನಿ, ಉಮಾಮಹೇಶ್ವರ್, ಯು.ಆಂಜನೇಯಲು, ಎಂ.ರಂಗನಾಥ, ಅರವಿಂದ ಜಾಲಿ, ರಾಮನಮಲಿ, ಶಾಂತಪ್ಪ, ಎಂ.ರಾಜಶೇಖರ್, ಜಗದೀಶ್, ನಜೀರ್ ಸಾಬ್, ಜೆ.ವರುಣ್, ದೀಪಕ್ ಉಳ್ಳಿ, ಟಿ.ಎಂ.ತಿಪ್ಪೇಸ್ವಾಮಿ, ಶಿವಕುಮಾರ್, ಇನ್ನು ಮುಂತಾದವರು ಉಪಸ್ಥಿತರಿದ್ದರು.