ಗದಗ 16: ನೀರು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದ್ದು ಪಾರಂಪರಿಕ ಜಲಮೂಲಗಳ ರಕ್ಷಣೆ ಮಾಡಬೇಕಾಗಿದೆ. ಕೆರೆ ಹಾಗೂ ಸರೋವರ ಹಾಳು ಮಾಡಿದರೆ ಅಂತರ್ಜಲ ಬತ್ತಿ ಹೋಗುತ್ತದೆ. ಈ ನಿಟ್ಟಿನಲ್ಲಿ ಕೆರೆಗಳ ಸಂರಕ್ಷಣೆ ಕುರಿತು ಕಾನೂನಿನ ಅರಿವು ಹಾಗೂ ಜಾಗೃತಿ ಸರಕಾರಿ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಲ್ಲಿಯೂ ಇರಬೇಕಾದದ್ದು ಅವಶ್ಯವಾಗಿದೆ ರಾಜ್ಯ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದಶರ್ಿ ಸಂಜೀವ ಕುಮಾರ್ ಹಂಚಾಟೆ ನುಡಿದರು.
ಅವರಿಂದು ಗದಗ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಿಡಿಯೋ ಕಾನ್ಫರನ್ಸ್ ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2014 ರ ಪ್ರಕಾರ ಕನರ್ಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚಿಸತಕ್ಕದ್ದು. ಕೆರೆಯ ಹೊರಗಿನ ಸರಹದ್ದಿನಿಂದ ಮೂವತ್ತು ಮೀಟರ್ಗಳೊಳಗೆ ಅಕ್ರಮ ಮತ್ತು ಅನಧಿಕೃತವಾಗಿ ಯಾವುದೆ ವಾಣಿಜ್ಯ, ಮನರಂಜನೆ ಅಥವಾ ಕೈಗಾರಿಕಾ ಸಂಕೀರ್ಣಗಳನ್ನು ಅಥವಾ ಮನೆಗಳನ್ನು ಕಟ್ಟತಕ್ಕದ್ದಲ್ಲ ಅಥವಾ ಯಾವುದೇ ಕೈಗಾರಿಕೆ ಚಟುವಟಿಕೆಗಳನ್ನು ನಡೆಸತಕ್ಕದ್ದಲ್ಲ. ವಾಹನವನ್ನು ಬಳಸಿ ಅಥವಾ ಇತರ ರೀತಿಯಲ್ಲಿ ಕೆರೆಯಲ್ಲಿ ಭಗ್ನಾವಶೇಷಗಳನ್ನು ಪೌರ ಘನ ತ್ಯಾಜ್ಯಗಳನ್ನು , ಕೆಸರನ್ನು , ಮಣ್ಣನ್ನು ಅಥವಾ ದ್ರವ ತಾಜ್ಯಗಳನ್ನು ಅಥವಾ ಯಾವುದೇ ಮಾಲಿನ್ಯಕಾರಕಗಳನ್ನು ರಾಶಿ ಹಾಕತಕ್ಕದ್ದಲ್ಲ. ಸಕರ್ಾರದ ಅನುಮತಿ ಇಲ್ಲದೆ ಕೆರೆಯು ಒಡ್ಡು ಸೇರಿದಂತೆ ಕೆರೆ ಪ್ರದೇಶದೊಳಗೆ ರಸ್ತೆಗಳನ್ನು ಸೇತುವೆಗಳನ್ನು ಮತ್ತು ಅದೇ ರೀತಿಯ ಇತರೆ ರಚನೆಗಳನ್ನು ನಿಮರ್ಿಸತಕ್ಕದ್ದಲ್ಲ. ಕೆರೆಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬಾಧಕವಾದ ಯಾವುದೇ ಕೃತ್ಯವನ್ನು ಮಾಡತಕ್ಕದ್ದಲ್ಲ ಎಂದು ಸಂಜೀವ ಕುಮಾರ ಹಂಚಾಟೆ ತಿಳಿಸಿದರು.
ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮವನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಮುಖ್ಯಸ್ಥರು , ಸಂಬಂಧಿತ ಕಂಪನಿಯವರು, ಸಾರ್ವಜನಿಕರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಜೀವ ಕುಮಾರ್ ಹಂಚಾಟೆ ತಿಳಿಸಿದರು.
ಕೆರೆಯ ಕಾನೂನುಬಾಹಿರ ಅಧಿಬೋಗದಾರಿಕೆ ಅಥವಾ ಬಳಕೆ ಅಥವಾ ಕೆರೆಯ ನಿರ್ವಹಣೆ ಮತ್ತು ಸಂರಕ್ಷಣೆ ಯನ್ನು ವರದಿ ಮಾಡುವ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿರುವ ಪ್ರಾಧಿಕಾರದ ಅಥವಾ ಸಕರ್ಾರದ ಅಥವಾ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರದ ಒಬ್ಬ ಅಧಿಕಾರಿ ಅಥವಾ ನೌಕರನು ಅಂಥ ಕಾನೂನು ಬಾಹಿರ ಅಧಿಬೋಗದಾರಿಕೆಯನ್ನು ವರದಿ ಮಾಡಲು ಅಥವಾ ತೆರವುಗೊಳಿಸಲು ಕ್ರಮ ಕೈಕೊಳ್ಳಲು ಅಥವಾ ಕೆರೆಯನ್ನು ನಿರ್ವಹಿಸಲು ಅಥವಾ ರಕ್ಷಿಸಲು ತಪ್ಪಿದಲ್ಲಿ ಇಲಾಖಾ ವಿಚಾರಣೆಯ ತರುವಾಯ ಅಂಥ ಶಿಸ್ತು ದಂಡದಿಂದ ಅಥವಾ ಹತ್ತು ಸಾವಿರ ರೂ.ಗಳ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು ಎಂದು ಸಂಜೀವ ಕುಮಾರ್ ಹಂಚಾಟೆ ನುಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಕುಲಕಣರ್ಿ ಅವರು ಮಾತನಾಡಿ ನಗರದ ಭೀಷ್ಮ ಕೆರೆ ಒತ್ತುವರಿ ಕುರಿತು ಈಗಾಗಲೇ ಗದಗ ಬೆಟಗೇರಿ ಪೌರಾಯುಕ್ತರಿಗೆ ನೋಟೀಸ್ ನೀಡಲಾಗಿದೆ. ಜಿಲ್ಲಾಡಳಿತದಿಂದ ಕೆರೆ ಒತ್ತುವರಿ ಕುರಿತು ಮಾಹಿತಿ ಸಂಗ್ರಹಣೆ ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿಗಳು ಉಪಸ್ಥಿತರಿದ್ದರು.