ಧಾರವಾಡ 01: ಕುಟುಂಬದ ಸದಸ್ಯರ ರಕ್ಷಣೆ ಮತ್ತು ಅವರ ಹಿತಾಸಕ್ತಿಯನ್ನು ರಕ್ಷಿಸುವುದು ಕುಟುಂಬ ಮುಖ್ಯಸ್ಥರ ಹೊಣೆಗಾರಿಕೆಯಾಗಿದೆ. ಪ್ರತಿಯೊಬ್ಬರು ಉತ್ತಮ ಹವ್ಯಾಸ, ಆರೋಗ್ಯ ಮತ್ತು ಆಥರ್ಿಕ ಉಳಿತಾಯ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಮಾದರಿಯಾಗಬೇಕೆಂದು ಸಹಾಯಕ ಕಾಮರ್ಿಕ ಆಯುಕ್ತರಾದ ಮೀನಾ ಪಾಟೀಲ ಹೇಳಿದರು.
ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಕಾಮರ್ಿಕ ಇಲಾಖೆ, ಕನರ್ಾಟಕ ರಾಜ್ಯ ಅಸಂಘಟಿತ ಕಾಮರ್ಿಕ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕನರ್ಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾಮರ್ಿಕ ಸಮ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.
ಅಸಂಘಟಿತ ಕಾಮರ್ಿಕರು ಹಾಗೂ ಇತರ ಕಾಮರ್ಿಕರಿಗೆ ಕೇಂದ್ರ ಸಕರ್ಾರ ಹಾಗೂ ರಾಜ್ಯ ಸಕರ್ಾರದಿಂದ ಸಿಗುವ ಸೌಲಭ್ಯ, ಸೌಕರ್ಯಗಳ ಕುರಿತು ಅವರು ಮಾಹಿತಿ ನೀಡಿದರು.
ಧಾರವಾಡ ಜಿಲ್ಲೆಯ ಅಸಂಘಟಿತ ಕಾಮರ್ಿಕರ ವಲಯದಲ್ಲಿ ಬರುವ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿ ಭಟ್ಟಿ ಕಾಮರ್ಿಕರು, ಸಾರಿಗೆ ಕಾಮರ್ಿಕರು, ಹಮಾಲಿಗಳು, ಟೈಲರಗಳು, ಚಿಂದಿ ಆಯುವವರು, ಮೆಕ್ಯಾನಿಕ್ ಕಾಮರ್ಿಕರು, ಗೃಹ ಕೆಲಸದ ಕಾಮರ್ಿಕರು, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಚಾಲಕರು ಮುಂತಾದ ಈ ಎಲ್ಲ ಕಾಮರ್ಿಕ ವರ್ಗದ ವಿವಿಧ ರೀತಿಯ ವೃತ್ತಿಯಲ್ಲಿರುವ 194 ಕಾಮರ್ಿಕರಿಗೆ ಕಾಮರ್ಿಕ ಸಮ್ಮಾನ ಪ್ರಶಸ್ತಿಯನ್ನು ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.
ಪ್ರಶಸ್ತಿಯ ವಿಶೇಷ ಸನ್ಮಾನಿತರಿಗೆ 10 ಸಾವಿರ ನಗದು, ಪ್ರಮಾಣಪತ್ರ, ಮತ್ತು ಸ್ಮರಣಿಕೆ, ವರ್ಷದ ಪ್ರಶಸ್ತಿ ಪುರಸ್ಕೃತರಿಗೆ 1 ಸಾವಿರ ನಗದು, ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ಒಟ್ಟು 2,70,000 ಮೊತ್ತದ ನಗದನ್ನು ಪ್ರಶಸ್ತಿ ಪುರಸ್ಕೃತರಿಗೆ ಗೌರವಧನವಾಗಿ ವಿತರಿಸಲಾಯಿತು.
ವೇದಿಕೆಯಲ್ಲಿ ಕಾಮರ್ಿಕ ಪ್ರತಿನಿಧಿಗಳಾದ ಮಹೇಶ ಪತ್ತಾರ, ಶೇಖರಯ್ಯ ಮಠಪತಿ, ಹಾಗೂ ವಿವಿಧ ಕಾಮರ್ಿಕ ಸಂಘದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿರಿಯ ಕಾಮರ್ಿಕ ನಿರೀಕ್ಷಕ ಬಿ.ಆರ್. ಜಾಧವ ಪ್ರಾಥರ್ಿಸಿದರು. ಜಿಲ್ಲಾ ಕಾಮರ್ಿಕ ಅಧಿಕಾರಿ ತರನ್ನುಂ ಅ. ಬಂಗಾಲಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಹಾಗೂ ಹಿರಿಯ ಕಾಮರ್ಿಕ ನಿರೀಕ್ಷಕರಾದ ಭುವನೇಶ್ವರಿ ಕೋಟಿಮಠ ವಂದಿಸಿದರು. ಸೋಮಶೇಖರ ಜಾಡರ ನಿರೂಪಿಸಿದರು.
ಕಾಮರ್ಿಕ ಸಮ್ಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಸಂಘಟಿತ ಕಾಮರ್ಿಕ ವಲಯದ ವಿವಿಧ ಸಂಘ ಸಂಸ್ಥೆಗಲ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.