ಗದಗ 14: ಅಮೃತ ಯೋಜನೆಯಡಿ ಕೇಂದ್ರ ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲಾಗುವ ಗದುಗಿನ ಭೀಷ್ಮಕೆರೆ ಉದ್ಯಾನವನ ಅಭಿವೃದ್ಧಿ ಕುರಿತಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಂದು (ದಿ.14) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗದಗ ಬೇಟಗೇರಿ ನಗರಸಭೆ ಪೌರಾಯುಕ್ತ ದೀಪಕ ಹರಡಿ ಅಮೃತ ಯೋಜನೆಯಡಿ ಒಟ್ಟು 9.56 ಕೋಟಿ ವೆಚ್ಚದ ಭೀಷ್ಮಕೆರೆ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ಗದಗ ಬೆಟಗೇರಿ ನಗರಸಭೆ ಅಭಿಯಂತರುಗಳಾದ ಎಲ್. ಜಿ. ಪತ್ತಾರ, ಎಚ್. ಎ. ಬಂಡಿವಡ್ಡರ ಇದ್ದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಗದಗ ಬೇಟಗೇರಿ ನಗರಸಭೆ ಕಾಯರ್ಾಲಯ ಅನಿರೀಕ್ಷಿತವಾಗಿ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಸೇರಿದಂತೆ ವಿವಿಧ ವಿಷಯಗಳ ಪರಿಶೀಲನೆ ನಡೆಸಿದರು.