ಮಾನವನ ಘನತೆಗೆ ಹಕ್ಕುಗಳು ಅತ್ಯಗತ್ಯ

Rights are essential to human dignity

ಮಾನವನ ಘನತೆಗೆ ಹಕ್ಕುಗಳು ಅತ್ಯಗತ್ಯ

ಗದಗ : 14 ಮಾನವ ಹಕ್ಕುಗಳು ಮನುಷ್ಯನನ್ನುಘನತೆಯಿಂದ ಬದುಕುವಂತೆ ಮಾಡಲುಕಾರಣವಾಗಿವೆ ಎಂಬ ಅಭಿಪ್ರಾಯವನ್ನುಕೆ.ಎಲ್‌.ಇ ಸಂಸ್ಥೆಯಎಸ್‌. ಎ. ಮಾನ್ವಿ ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ಜೈಹನುಮಾನ ವ್ಯಕ್ತಪಡಿಸಿದರು. 

ನಗರದಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಮತ್ತುನೆಹರುಕೇಂದ್ರ, ಗದಗ ಇವರ ಸಹಯೋಗದೊಂದಿಗೆ ‘ಮಾನವ ಹಕ್ಕುಗಳು ಭಾರತೀಯ ನ್ಯಾಯಾಂಗ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.  

ವಿಶ್ವ ಸಂಸ್ಥೆಯು 1948ರ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಮೂಲಕ 30 ಹಕ್ಕುಗಳನ್ನು ನೀಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಿತು.ಎರಡನೆಯ ಮಹಾಯುದ್ಧದ ನಂತರ ರಾಷ್ಟ್ರವು ತನ್ನದೇ ಪ್ರಜೆಗಳ ವಿರುದ್ಧ ನಡೆಸುವ ಶೋಷಣೆಗೆ ವಿರಾಮ ನೀಡಲು ಈ ಹಕ್ಕುಗಳು ಮಹತ್ವದ ಪಾತ್ರ ವಹಿಸಿದವು.ಆದರೆ, ಇವುಗಳಲ್ಲಿ ಕೆಲವು ಹಕ್ಕುಗಳನ್ನು ಮಾತ್ರ ಮೂಲಭೂತ ಹಕ್ಕುಗಳೆಂದು ಪರಿಗಣಿಸಿ ಭಾರತೀಯ ಸಂವಿಧಾನದ ಮೂಲಕ ಅವುಗಳನ್ನು ರಕ್ಷಣೆ ಮಾಡಲಾಗುತ್ತಿದೆ.ಇನ್ನುಳಿದ ಹಕ್ಕುಗಳನ್ನು ಕಡೆ ಗಣಿಸದೇ, ರಾಜ್ಯನಿರ್ದೇಶಕ ತತ್ವಗಳಲ್ಲಿ ಸೇರಿಸಲಾಗಿದೆ. ಆದರೆ ಇವುಗಳು ಕೇವಲ ನೈತಿಕ ಹಕ್ಕುಗಳಾಗಿದ್ದು, ಅವುಗಳಿಗೆ ಕಾನೂನಿನ ರಕ್ಷಣೆ ಇರುವುದಿಲ್ಲ. ಮಾನವ ಹಕ್ಕುಗಳು ಮಾನವನನ್ನು ಘನತೆಯಿಂದ ಬದುಕುವಂತೆ ಮಾಡಲು ಕಾರಣವಾಗಿವೆ ಎಂಬ ಅಭಿಪ್ರಾಯವನ್ನು ಕೆ.ಎಲ್‌.ಇ ಸಂಸ್ಥೆಯ ಎಸ್‌. ಎ. ಮಾನ್ವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜೈಹನುಮಾನ್ ಕೆ.ಎಲ್‌.ಇಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ  ಆಯೋಜಿಸಿದ್ದ “ಮಾನವ ಹಕ್ಕುಗಳು ಮತ್ತು ಭಾರತೀಯ ನ್ಯಾಯಾಂಗ” ಎಂಬ ವಿಷಯದ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದ ವಿಷಯ ಕುರಿತು ವಿದ್ಯಾರ್ಥಿಗಳೊಂದಿಗೆ ವಿಚಾರಗಳನ್ನು ಹಂಚಿಕೊಂಡರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎ.ಕೆ.ಮಠ ಇವರು ಮಾನವ ಹಕ್ಕುಗಳು ಹಾಗೂ ಅವುಗಳ ರಕ್ಷಣೆಯ ಕುರಿತಾದ ಮಾಹಿತಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಪ್ರತಿಯೊಬ್ಬ ವ್ಯಕ್ತಿಗೂಅಗತ್ಯವಾಘಿದೆಎಂದು ತಿಳಿಸಿದರು.ಐ.ಕ್ಯು.ಎ.ಸಿ ಸಂಯೋಜಕರಾದ ಡಾ.ವೀಣಾ ವಿಚಾರ ಸಂಕಿರಣದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ.ಗೌರಾ ಯಳಮಲಿ ವಂದಿಸಿದರು.ಪ್ರೊ. ವಿಶಾಲ ತಳಗಡೆ ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿಚಾರ ಸಂಕಿರಣದಲ್ಲಿ ಹಾಜರಿದ್ದರು.