ಸದ್ಗುರು ಸಿದ್ಧಾರೂಢರು ಮಹಾನ್ ಪವಾಢ ಪುರುಷ: ಬಸವರಾಜ ಪಣದಿ

Sadhguru Siddharudha is a great miraculous man: Basavaraja Panadi

ಸದ್ಗುರು ಸಿದ್ಧಾರೂಢರು ಮಹಾನ್ ಪವಾಢ ಪುರುಷ: ಬಸವರಾಜ ಪಣದಿ  

ಬೆಟಗೇರಿ 25 : ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರು್ದೇವತಾ ಪುರುಷರಾಗಿದ್ದರು. ಸರ್ವ ಜಾತಿಯ ಸಮನ್ವಯದ ಸಿದ್ಧಾರೂಢರ ಹುಬ್ಬಳ್ಳಿ ಶ್ರೀಮಠವಾಗಿದೆ ಎಂದು ಬೆಟಗೇರಿ ಹಗ್ರಾಮ ಪಂಚಾಯ್ತಿ ಗ್ರಂಥಾಲಯದ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು.  

   ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರ 190ನೇ ಹಾಗೂ ಗುರುನಾಥರೂಢರ 115ನೇ ಜಯಂತ್ಯುತ್ಸವ ಹಾಗೂ ಸಿದ್ಧಾರೂಢರ ಕಥಾಮೃತ ಗ್ರಂಥದ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಸಿದ್ಧಾರೂಢರ ಜ್ಯೋತಿ ರಥ ಯಾತ್ರೆಗೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸ್ವಾಗತ ಕಾರ್ಯಕ್ರಮ ನಡೆದ ಬಳಿಕ ಮಾತನಾಡಿದ ಅವರು, ಸದ್ಗುರು ಸಿದ್ಧಾರೂಢರು ಮಹಾನ್ ಪವಾಢ ಪುರುಷರಾಗಿದ್ದರು ಎಂದರು. 

    ಜ್ಯೋತಿ ಯಾತ್ರೆಯ ಸದಸ್ಯ ಶಂಕರಗೌಡ ಸಂಗೊಂದಿ ಮಾತನಾಡಿ, ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರ 190ನೇ ಹಾಗೂ ಗುರುನಾಥರೂಢರ 115ನೇ ಜಯಂತ್ಯುತ್ಸವ ಹಾಗೂ ಸಿದ್ಧಾರೂಢರ ಕಥಾಮೃತ ಗ್ರಂಥದ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಕ್ತರಿಗೆ ಹಲವು ಅನುಕೂಲತೆ ಸೇರಿದಂತೆ ಭಕ್ತಿ ಸಮರೆ​‍್ನ ಸೌಲಭ್ಯಗಳ ಕುರಿತು ತಿಳಿಸಿದರು. 

      ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿದ್ಯ ವಹಿಸಿ ಸದ್ಗುರು ಸಿದ್ಧಾರೂಢರು ಮತ್ತು ಗುರುನಾಥರೂಢರ ಭಾವಚಿತ್ರ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಬೆಟಗೇರಿ ಗ್ರಾಮದ ಅಶ್ವರೂಢ  ಬಸವೇಶ್ವರ ವೃತ್ತದಲ್ಲಿ ಸ್ಥಳೀಯ ಸದ್ಗುರು ಸಿದ್ಧಾರೂಢರ ಪಾದ ಯಾತ್ರೆ ಸಮಿತಿ, ಈಶ್ವರ ಭಜನಾ ಮಂಡಳಿ ಹಾಗೂ ಸಿದ್ಧಾರೂಢರ ಭಕ್ತರು ಶ್ರೀ ಸಿದ್ಧಾರೂಢರ ಜ್ಯೋತಿ ರಥ ಯಾತ್ರೆಗೆ ಹೂ ಮಾಲೆ ಹಾಕಿ ಭವ್ಯ ಸ್ವಾಗತ ಕೋರಿದರು.  

    ಸಿದ್ಧಾರೂಢರ ಜ್ಯೋತಿ ರಥ ಯಾತ್ರೆ ಪ್ರಯುಕ್ತ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆದ ಬಳಿಕ ಜ್ಯೋತಿ ಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾಧ್ಯಮೇಳಗಳೊಂದಿಗೆ ಜ್ಯೋತಿ ಯಾತ್ರೆ ನಡೆದ ನಂತರ ಮಹಾಪ್ರಸಾದ ನಡೆಯಿತು. ಜ್ಯೋತಿ ಯಾತ್ರೆಯ ಸದಸ್ಯ ಶಂಕರಗೌಡ ಸಂಗೊಂದಿ, ಈಶ್ವರ ಬಳಿಗಾರ, ಈರಣ್ಣ ಸಿದ್ನಾಳ, ಮಲ್ಲಪ್ಪ ಪಣದಿ, ದುಂಡಪ್ಪ ಕಂಬಿ, ಬಾಳಪ್ಪ ಕನೋಜಿ, ಗೌಡಪ್ಪ ದೇಯಣ್ಣವರ, ಬಸಪ್ಪ ದೇಯಣ್ಣವರ, ಬಸವರಾಜ ಮಾಳೇದ, ಭೀಮನಾಯ್ಕ ನಾಯ್ಕರ, ಬಸವರಾಜ ನೀಲಣ್ಣವರ, ಸುರೇಶ ಸಿದ್ನಾಳ, ಗುಳಪ್ಪ ಪಣದಿ, ಸ್ಥಳೀಯ  ಸಿದ್ಧಾರೂಢರ ಪಾದ ಯಾತ್ರೆ ಸಮಿತಿ, ಈಶ್ವರ ಭಜನಾ ಮಂಡಳಿ,ಸಿದ್ಧಾರೂಢರ ಭಕ್ತರು, ಗ್ರಾಮಸ್ಥರು ಇದ್ದರು.