ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಗುರುನಮನ

Salutations to Jnanyogi Sri Siddeshwar Swami

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಗುರುನಮನ

ವಿಜಯಪುರ 02  : ದರ್ಬಾರ್ ಸಮೂಹ ಶಿಕ್ಷಣ ಸಂಸ್ಥೆಯ ಬನ್ಸಿಲಾಲ ವಿಠ್ಠಲ ದಾಸ ದರಬಾರ ಪದವಿ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ದಿನಾಂಕ : 02.01.2025 ಮಂಗಳವಾರದಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಾಧ್ಯಾಪಕರಾದ ಎಸ್‌.ಎಸ್‌. ಗೌರಿ ಅವರು, ಸರಳ ಸ್ವಭಾವದ ಸಂತ ನಿರಾಡಂಬರವಾಗಿ ಬದುಕಿ ಬದುಕಿನ ಅರ್ಥವನ್ನು ಸಾಮಾನ್ಯ ಜನರಿಗೂ ತಿಳಿಸಿದ ಮಹಾನ ಯೋಗಿ, ಬರಿ ಶಿಕ್ಷಣ ಪಡೆಯುವುದು ಮುಖ್ಯವಲ್ಲ ಸಂಸ್ಕಾರ ಸಂಸ್ಕೃತಿಯನ್ನು ಶಿಕ್ಷಕ ಸಮುದಾಯ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಅವರ ಸದಾಶಯವಾಗಿತ್ತು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ರಮೇಶ್ ಕೋಟ್ಯಾಳ ಅವರು, ಶ್ರೀ ಸಿದ್ದೇಶ್ವರ ಸ್ವಾಮಿಗಳು ಆಡುಮುಟ್ಟದ ಸೊಪ್ಪಿಲ್ಲವೆಂಬಂತೆ ಜಗದ ತತ್ವ ಜ್ಞಾನದ ಮಾತು ಸಾಕ್ರೆಟಿಸ್ ಅರಿಸ್ಟಾಟಲ್ ಪ್ಲೇಟೋ ಕನ್ಫ್ಯೂಸಿಯಸ್ ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದ ಜಗದ ದಾರ್ಶನಿಕರ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ನೈತಿಕ ಸಂದೇಶವನ್ನು ನಿತ್ಯ ಪ್ರಸರಣ ಮಾಡಿದ ತತ್ವಜ್ಞಾನಿ ಅಲ್ಲಮನ ಎಲ್ಲವನ್ನು ಅರಿತಿದ್ದರೂ ಅರಿಯದಂತಿದ್ದ ಅವರೊಬ್ಬ ಹೊರಗೆ ಸಂತ ಒಳಗೆ ಭಗವಂತರಾಗಿದ್ದರು ಎಂದು ನುಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಚ್‌. ಮಣ್ಣೂರ ಅವರು, ಆಡು ಭಾಷೆಯಲ್ಲಿ ನಿತ್ಯ ಸತ್ಸಂಗದ ಸದ್ಗುಣಗಳನ್ನು ಜನರ ಮನದಲ್ಲಿ ಬೆರೆಯುವಂತೆ ಬೋಧಿಸಿದ ಪ್ರವರ್ತಕರಾಗಿದ್ದರು ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಾರ್ಯಕ್ರಮವನ್ನು ಉಪನ್ಯಾಸಕ ರಾಜು ಕಪಾಲಿ ನಿರೂಪಿಸಿ, ವಂದಿಸಿದರು.