ಸ್ಯಾಮಸಂಗ ಕೆಫೆ: ವಿದ್ಯಾರ್ಥಿಗಳ ಅನಕೂಲಕ್ಕಾಗಿ ವಿಶೇಷ ಯೋಜನೆ ಅನುಷ್ಠಾನ
ಅಥಣಿ 16: ಅಥಣಿಯಲ್ಲಿ ಇದೇ ಮೊದಲ ಬಾರಿಗೆ ಜಿ.ಎಮ್.ಸ್ಯಾಮಸಂಗ ಕೆಫೆಯ ಉದ್ಘಾಟನೆ ನೆರವೇರಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗಜಾನನ ಮಂಗಸೂಳಿ ಮನವಿ ಮಾಡಿದರು. ಸ್ಯಾಮಸಂಗ ಕೆಫೆಯ ಮೂಲಕ ವಿದ್ಯಾರ್ಥಿಗಳ ಅನಕೂಲಕ್ಕಾಗಿ ವಿಶೇಷ ಯೋಜನೆ ಅನುಷ್ಠಾನಗೊಂಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳ ಸಿದ್ಧ ಸ್ವಾಮೀಜಿ ಸಾನಿಧ್ಯದಲ್ಲಿ, ಪುರಸಭಾ ಸದಸ್ಯರ, ಗಣ್ಯ ವ್ಯಾಪಾರಾಸ್ಥರ, ರಾಜಕೀಯ ಮುಖಂಡರ, ರೋಟರಿ ಮತ್ತು ಇನ್ನರವ್ಹೀಲ್ ಕ್ಲಬ್ ಪದಾಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಸಾನಿಧ್ಯ ವಹಿಸಿದ್ದ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹಾಗೂ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹಾಗೂ ಗಣ್ಯ ವ್ಯಾಪಾರಿ ಶೇಖರ ಕೋಲಾರ ಇವರು ಪ್ರಾರಂಭಿಸಿದ ಈ ಉದ್ಯಮ ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಕಾಗವಾಡ ತಹಶೀಲ್ದಾರ ರಾಜು ಬುರ್ಲಿ, ಐನಾಪುರ ಪುರಸಭಾ ಮುಖ್ಯಾಧಿಕಾರಿ ಮಹಾಂತೇಶ ಕೌಲಾಪುರ, ಧುರೀಣರಾದ ರಾಹುಲ ಮಂಗಸೂಳಿ, ಮಲ್ಲಿಕಾರ್ಜುನ ಕೋಲಾರ, ಗೀರೀಶ ಬುಟಾಳಿ, ಚಂದ್ರಶೇಖರ ಯಲ್ಲಟ್ಟಿ, ಧರೆಪ್ಪ ಠಕ್ಕಣ್ಣವರ,ಅಜಿತ ಇನಾಮದಾರ, ಶೇಖರ ಕೋಲಾರ, ಸಿದ್ಧಾರ್ಥ ಸಿಂಗೆ, ಸಂಜೀವ ಕಾಂಬಳೆ, ಶಿವು ಬುರ್ಲಿ, ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ರಾವಸಾಹೇಬ ಐಹೊಳೆ, ದತ್ತಾ ವಾಸ್ಟರ್, ದೀಲೀಪ ಲೋಣಾರೆ, ಸೈಯ್ಯದಮೀನ್ ಗದ್ಯಾಳ, ವೀಲೀನರಾಜ ಯಳಮೇಲಿ, ಉದಯ ಸೋಳಸಿ, ಬಾಬು ಖೆಮಲಾಪುರ, ರೋಟರಿ ಸಂಸ್ಥೆಯ ಅರುಣ ಸೌದಾಗರ, ಡಾ.ಆನಂದ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಶುಭ ಕೋರಿದರು.