ಮತದಾರರ ಜಾಗೃತಿಗಾಗಿ ಮರಳು ಶಿಲ್ಪ: ಸೆಲ್ಫಿಯೊಂದಿಗೆ ಸಂಭ್ರಮಿಸಿದ ಯುವಜನ

ಧಾರವಾಡ.11: ಮತದಾರರ ಜಾಗೃತಿಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ ಇಂದು ನಗರದ ಕನರ್ಾಟಕ ಮಹಾವಿದ್ಯಾಲಯದ ಮಹಾದ್ವಾರದ ಬಳಿ ನಿಮರ್ಿಸಿರುವ ಮತದಾರ ಜಾಗೃತಿ ಸಂದೇಶ ಸಾರುವ ಮರಳು ಶಿಲ್ಪ ವಿದ್ಯಾಥರ್ಿ, ಯುವಜನರನ್ನೂ ಸೇರಿದಂತೆ ಹಲವಾರು ಜನರನ್ನು ಸೆಳೆಯುತ್ತಿದೆ. ಅಧಿಕಾರಿಗಳು, ಹಿರಿಯ ನಾಗರಿಕರೂ ಕೂಡ ಶಿಲ್ಪದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಸ್ಥಳೀಯ ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಪುತ್ರ ಕಾಂತೇಶ ನಿಮರ್ಿಸಿರುವ ಮರಳು ಶಿಲ್ಪ ಕಲಾಕೃತಿಯನ್ನು ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಬಿ.ಸಿ.ಸತೀಶ ಅವರು ಸಾರ್ವಜನಿಕ ಪ್ರದರ್ಶನಕ್ಕೆ ಉದ್ಘಾಟನೆಗೊಳಿಸಿದರು.

ಜಿಲ್ಲಾಧಿಕಾರಿಗಳು ಸ್ಥಳೀಯ ಮಹಿಳೆಯರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಶ್ರೇಯಾ ಕಾಲೇಜಿನ ವಿದ್ಯಾಥರ್ಿನಿಯರು ತಮ್ಮ ಮುಖದ ಮೇಲೆ ಐ ವಿಲ್ ವೋಟ್ ಆನ್ ಎಪ್ರಿಲ್ 23 ಎಂದು ಆಂಗ್ಲ ಭಾಷೆಯಲ್ಲಿ ಬರೆದುಕೊಂಡು ಎಲ್ಲರ ಗಮನ ಸೆಳೆದರು. 

   ಕಲಾವಿದರಾದ ಎಫ್.ಬಿ. ಕಣವಿ, ಕೀತರ್ಿವತಿ ಮತ್ತು ತಂಡದವರ ಚುನಾವಣಾ ಗೀತೆಗಳು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದವು. ಮೂರು ದಿನಗಳ ಕಾಲ ಅಂದರೆ ಏ.13 ರವರೆಗೆ ಈ ಪ್ರದರ್ಶನ ಮುಂದುವರೆಯಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಗಜಾನನ ಮನ್ನಿಕೇರಿ, ತೋಟಗಾರಿಕೆ ಉಪನಿದರ್ೇಶಕ ಡಾ.ರಾಮಚಂದ್ರ ಮಡಿವಾಳ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿದರ್ೇಶಕ ಮಂಜುನಾಥ ಡಿ. ಡೊಳ್ಳಿನ, ಸ್ವೀಪ್ ಸಮಿತಿಯ ಕೆ.ಎಂ.ಶೇಖ್, ಡಾ: ಆರ್.ಬಿ. ಸೋನೇಖಾನ್ ಹಾಗೂ ಮತ್ತಿತರರು ಇದ್ದರು.