ಸಾವಿತ್ರಿ ಬಾಯಿ ಫುಲೆ ಶ್ರಮ ಅನನ್ಯ : ಸುನಂದಾ
ವಿಜಯಪುರ 03: ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 30 ವಿವೇಕನಗರ ಶಾಲೆಯಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತ್ತು. ಕೆಲ ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರಿಗೂ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿ ಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಜೀವನದಲ್ಲಿ ಬರುವ ಎಡರು ತೊಡರುಗಳನ್ನು ಎದುರಿಸಿ ಸಾಧನೆಯ ಶಿಖರವನ್ನೇರಿದವರು ಶ್ರೀಮತಿ ಸಾವಿತ್ರಿಬಾಯಿ ಪುಲೆ ಹಾಗೂ ಜೋತಿಬಾ ಪುಲೆ ದಂಪತಿಗಳು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 30 ವಿವೇಕನಗರ ಶಾಲೆಯಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮುಖ್ಯ ಶಿಕ್ಷಕಿ ಕೆ. ಸುನಂದಾ ಮಾತನಾಡಿದರು. ಶಿಕ್ಷಣದಿಂದ ಮಕ್ಕಳು ತಮ್ಮ ಬದುಕನ್ನು ಉಜ್ವಲ ಗೊಳಿಸಿಕಳ್ಳಬೇಕು ಎಂದು ಕರೆಕೊಟ್ಟರು. ಮಕ್ಕಳು ಸಾವಿತ್ರಿ ಬಾಯಿಯವರಂತೆ ವೇಶ ತೊಟ್ಟು ಆನಂದಿಸಿದರು. ಗುರುಗಳಾದ ಟಿ ಸಿ ನಾಟಿಕಾರ, ಆಯ್ ವ್ಹಿ ಚವ್ಹಾಣ, ಹಾಗೂ ಮಕ್ಕಳು ಮಾತನಾಡಿದರು ಪಾಲಕರು ಮಕ್ಕಳು ಉಪಸ್ಥಿತರಿದ್ದರು.