ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಶಾಲೆ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಂಟಕ: ಸಹನಾ ಪಾಲನಕರ ವಿಷಾದ
ಗದಗ 24 :- ಇಂದು ಅವಳಿ ನಗರವಾದ ಗದಗ ಬೆಟಗೇರಿಯಲ್ಲಿ ಇತ್ತೀಚಿಗಷ್ಟೇ ರಾಜ್ಯ ಸಭೆಯಲ್ಲಿ 75 ನೇ ವಜ್ರಮಹೋತ್ಸವದ ಸಂಭ್ರಮದಲ್ಲಿ ಸಂವಿಧಾನದ ಮೇಲೆ ನಡೆಯುತ್ತಿದ್ದ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾತನಾಡುತ್ತಾ "ಅಂಬೇಡ್ಕರ್... ಅಂಬೇಡ್ಕರ್... ಅಂಬೇಡ್ಕರ್... ಎನ್ನುವುದೇ ಫ್ಯಾಶನ್ ಆಗಿದೆ, ಅಂಬೇಡ್ಕರ್ ಬದಲಾಗಿ ಅಷ್ಟು ಬಾರಿ ದೇವರನ್ನು ಸ್ಮರಿಸಿದರೆ ಏಳು ಜನ್ಮಕ್ಕಾಗುವಷ್ಟು ಸ್ವರ್ಗ ಪ್ರಾಪ್ತಿಯಾಗುತ್ತಿತ್ತು" ಎಂದು ಸದನದಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರವರಿಗೆ ಅವಹೇಳನ ಮಾಡಿದ್ದಾರೆ.
ಮಹಾನಾಯಕ, ಸಂವಿಧಾನ ಶಿಲ್ಪಿ ಡಾಽಽ ಬಾಬಾಸಾಹೇಬ ಅಂಬೇಡ್ಕರವರನ್ನು ಅವಹೇಳನ ಮಾಡಿರುವುದನ್ನು ಖಂಡಿಸಿ ಅವಳಿ ನಗರದ ಪ್ರಗತಿಪರ ಸಂಘಟನೆಗಳಿಂದ ಇಂದು ಗದಗ ಬೆಟಗೇರಿ ಬಂದ್‌ಗೆ ಕರೆ ನೀಡಲಾಗಿದೆ. ಬಂದ್ ಕುರಿತು ಒಂದು ದಿನ ಮುಂಚಿತವಾಗಿಯೇ ಸಾರ್ವಜನಿಕವಾಗಿ ಬಂದ್‌ಗೆ ಬೆಂಬಲ ನೀಡಲು ವಿನಂತಿಸಿ ವಾಹನದಲ್ಲಿ ಮೈಕ್ ಮೂಲಕ ಕೋರಿಕೊಳ್ಳಲಾಗಿದ್ದರೂ ಅವಳಿ ನಗರದಲ್ಲಿನ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಧಿಕೃತವಾಗಿ ರಜೆಯನ್ನು ಘೋಷಿಸದೇ ಇರುವುದರಿಂದ ಎಂದಿನಂತೆ ಶಾಲಾ ವಿದ್ಯಾರ್ಥಿಗಳನ್ನು ಪಾಲಕರು ಬಂದ್ ಪ್ರತಿಭಟನೆಯ ನಡುವೆಯೇ ತಮ್ಮ ಮಕ್ಕಳನ್ನು ಇಕ್ಕಟ್ಟಿನ ಪರಸ್ಥಿತಿಯಲ್ಲಿಯೂ ಶಾಲೆಗಳಿಗೆ ತಲುಪಿಸಲು ಮುಂದಾದರೆ, ಬೆಳ್ಳಂ-ಬೆಳಿಗ್ಗೆಯೇ ಪ್ರತಿಭಟನೆಯ ಕಾವು ಜೋರಾಗಿತ್ತು. ಸಕಾರಣದಿಂದ ಹಲವಾರು ಅವಘಡ ಸಂಭವಿಸಿರುತ್ತವೆ.ಗದಗ ನಗರದ ಮುಳಗುಂದ ನಾಕಾ ಸರ್ಕಲ್ ನಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೊರಟಿದ್ದ ಸ್ಕೂಲ್ ವ್ಯಾನ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ವಿದ್ಯಾರ್ಥಿನಿಯ ಕಾಲಿಗೆ ಬಲವಾದ ಪೆಟ್ಟಾಗಿದೆ. ಪ್ರತಿಭಟನೆ ಹಿನ್ನೆಲೆ ಸರ್ಕಲ್ ನ ಕಿರಿದಾದ ರಸ್ತೆಯಲ್ಲಿ ವಾಹನಗಳು ಹೊರಟಿದ್ದವು ಈ ವೇಳೆ ಬೈಕ್ ಸ್ಕೂಲ್ ವ್ಯಾನ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮಗದೊಂಡೆದೆ ಶಾಸ್ತ್ರಿಜೀ ಶಾಲೆಯ ಹಿಂಬಾಗದಲ್ಲಿ ಬೆಳಿಗ್ಗೆ ವಾಹನಗಳ ದಟ್ಟಣೆ ಹೆಚ್ಚಾಗಿ ಪಾಲಕರು ಶಾಲಾ ಮಕ್ಕಳು ಸಮೇತರಾಗಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದು ಗಾಯಗೊಂಡಿರುವರು.ಇಂದಿನ ಗದಗ ಬೆಟಗೇರಿ ಅವಳಿ ನಗರ ಬಂದ್ ವೇಳೆಯಲ್ಲಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಸೂಕ್ತ ಮುಂಜಾಗ್ರತಾ ಕ್ರಮವಹಿಸದೇ ದಿವ್ಯನಿರ್ಲಕ್ಷದಿಂದ ಸಕಾಲಕ್ಕೆ ಶಾಲೆಗಳಿಗೆ ರಜೆ ಘೋಷಣೆ ಮಾಡದಿರುವುದರಿಂದಾಗಿ ಅವಳಿ ನಗರದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಇಲಾಖೆಯ ಅವೈಜ್ಞಾನಿಕ ದಿವ್ಯ ನಿರ್ಲಕ್ಷತನದಿಂದಾಗಿ ಕಂಟಕಪ್ರಾಯವಾಗಿರುತ್ತದೆ ಎಂದು ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ ಪ್ರಕಟಣೆಯ ಮೂಲಕ ವಿಷಾದವನ್ನು ವ್ಯಕ್ತಪಡಿಸಿರುತ್ತಾರೆ.