ಮನರಂಜನೆ ಮುಖಾಂತರ ವಿಜ್ಞಾನ ತಿಳಿದುಕೊಳ್ಳಲು ವಿಜ್ಞಾನ ನಾಟಕ: ಹೊರಟ್ಟಿ

ಲೋಕದರ್ಶನ ವರದಿ

ಧಾರವಾಡ04: ಮನರಂಜನೆ ಮುಖಾಂತರ ವಿಜ್ಞಾನವನ್ನು ತಿಳಿದುಕೊಳ್ಳಲು ವಿಜ್ಞಾನ ನಾಟಕವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇವತ್ತಿನ ದಿನ ನಾವು ವಿಜ್ಞಾನದ ಸ್ಪರ್ಶ ಇಲ್ಲದೇ ಇದ್ದರೆ ನಾವು ಯಾರು ಭೂಮಿಯ ಮೇಲೆ ಇರುತ್ತಿರಲಿಲ್ಲ. ವೈಜ್ಞಾನಿಕ ಸಂಶೋಧನೆಯಿಂದ ಹಲವಾರು ಪ್ರಯೋಗಗಳನ್ನು ಮಾಡಿ ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ. ಎಲ್ಲವೂ ವಿಜ್ಞಾನದ ಮೇಲೆಯೇ ನಿಂತಿದೆ. ಸಾಧ್ಯವಾದಷ್ಟು ನಾವೆಲ್ಲರೂ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳೋಣ ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕನರ್ಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕನರ್ಾಟಕ ಸರಕಾರ, ಬೆಂಗಳೂರು ಇವುಗಳ ಸಹಯೋಗದಲ್ಲಿ ಮಾ.03ರಂದು ಬೆಳಗಾವಿ ಕಂದಾಯ ವಿಭಾಗದ 7 ಜಿಲ್ಲೆಗಳಲ್ಲಿ ಜಿಲ್ಲಾವಾರು ನಾಟಕ ಸ್ಪಧರ್ೆಯನ್ನು ನಡೆಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳಿಗೆ ವಿಭಾಗ ಮಟ್ಟದ ನಾಟಕ ಸ್ಪಧರ್ೆಯ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬಸವರಾಜ ಹೊರಟ್ಟಿ ಹೇಳಿದರು.

      ಅಬ್ದುಲ್ ಕಲಾಂ ಅಂತ ಅನೇಕ ವಿಜ್ಞಾನಿಗಳು ವೈಜ್ಞಾನಿಕ ಸಂಶೋಧನೆಯಿಂದ ಹಲವಾರು ಪ್ರಯೋಗಗಳನ್ನು ಮಾಡಿ ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ. ಸಮಾಜದಲ್ಲಿ ಒಳ್ಳೆಯದನ್ನು ಪ್ರಚುರ ಪಡಿಸಲು ಸಲಹೆ ನೀಡಿದರು. ಪ್ರತಿ ದಿನ ಹೊಸ ಹೊಸ ಪ್ರಯೋಗಗಳು ಹಾಗೂ ಸಂಶೋಧನೆಗಳ ಮೂಲಕ ವಿಜ್ಞಾನವನ್ನು ತಿಳಿದುಕೊಂಡು ಪ್ರಗತಿಯನ್ನು ಸಾಧಿಸಿರಿ. ವಿಜ್ಞಾನ ನಾಟಕಗಳ ಮೂಲಕ ಕಲಿತ ವಿಷಯಗಳನ್ನು ಭವಿಷ್ಯದಲ್ಲಿ ಬಳಸಿಕೊಂಡು ವಿಜ್ಞಾನದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕೆಂದು ಕರೆ ನೀಡಿದರು.

    ಅಧ್ಯಕ್ಷತೆ ವಹಿಸಿದ ಕೇಂದ್ರದ ನಿದರ್ೇಶಕರಾದ ಡಾ. ಕೆ.ಬಿ. ಗುಡಸಿ ಅವರು ವಿದ್ಯಾಥರ್ಿಗಳನ್ನುದ್ಧೇಶಿಸಿ ಮಾತನಾಡುತ್ತ ವಿಜ್ಞಾನ ಮತ್ತು ವೈಜ್ಞಾನಿಕತೆಯನ್ನು ಪ್ರಚಾರ ಮಾಡುವುದು ಮೂಲ ಉದ್ದೇಶ. ನಾಟಕ ಅನ್ನುವುದು ಒಂದು ಪ್ರಭಾವಿ ಮಾಧ್ಯಮವಿದೆ. ವಿಜ್ಞಾನವನ್ನು ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರಚಾರ ಪಡಿಸಲಿಕ್ಕೆ ನಾವೆಲ್ಲರೂ ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕು. ಮೂಢನಂಬಿಕೆ ಹೋಗಲಾಡಿಸಲು, ತಪ್ಪು ಕಲ್ಪನೆಗಳನ್ನು, ಭಯವನ್ನು ಹಾಗೂ ಸಮಾಜವನ್ನು ತಿದ್ದಿ, ದೇಶವನ್ನು ಪ್ರಗತಿ ಪಥದ ಹಾದಿಯಲ್ಲಿ ಹೋಗಲಿಕ್ಕೆ ಈ ವಿಜ್ಞಾನ ನಾಟಕಗಳು ಬಹಳ ಸಹಕಾರಿಯಾಗಿವೆ. ಇಂದಿನ ವಿದ್ಯಾಥರ್ಿಗಳು ನಾಳೆಯ ಕನಸನ್ನು ನನಸು ಮಾಡಿ. ಯಾವಾಗ ವಿಜ್ಞಾನದ ವಿಚಾರ ಇಟ್ಟುಕೊಂಡು ಮುಂದೆ ಹೋಗುತ್ತಿರೋ ಆಗ ವಿಜ್ಞಾನಿಗಳಾಗಲಿಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

     ನಾಟಕ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

 ವಿಷಯಾ ಜೇವೂರ, ಸನ್ಮತಿ ಅಂಗಡಿ ಹಾಗೂ ರವಿ ಕುಲಕಣರ್ಿ ಇವರುಗಳು ನಿಣರ್ಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿ.ಎಫ್.ಚಂಡೂರ ನಿರೂಪಿಸಿ, ವಂದಿಸಿದರು. 

   ವಿಜಯಕುಮಾರ ಗಿಡ್ನವರ, ಪ್ರೊ. ನಂದಿಬೇವೂರ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿಗಳಾದ ಅಡಿವೆಪ್ಪ ಅಂತಣ್ಣವರ, ಎಂ.ಸಿ. ಕಂದಗಲ್ಲ, ಆರ್. ಪಿ. ಗಾಳಿ, ಅಭಿಷೇಕ ಸಿ., ಪ್ರಮೋದ ಆರ್., ಎಂ. ಕೆ. ಹೊರಕೇರಿ, ಕೆ.ಎನ್.ಲಕ್ಷ್ಮಣ, ಶ್ಯಾಮ ತೇಲಗಾರ, ಎಂ.ಸಿ. ಶಂಕರೇಗೌಡ, ಶಂಕರ ಹಿರೇಮಠ, ಪದವಿ ವಿದ್ಯಾಥರ್ಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.