ಸರ್ವರ್ ಬೀಜಿ-ಅಧಿಕಾರಿಗಳು ಲೇಜಿ

ಲೋಕದರ್ಶನ ವರದಿ

ಗಜೇಂದ್ರಗಡ 27: ಎಸ್ ಬಿ ಎಚ್( ಎಸ್.ಬಿ.ಐ) ನಲ್ಲಿ ಕಳೆದ ಹತ್ತು ದಿನಗಳಿಂದ ಖಾತೆ ತೆರೆಯಲು ಪರದಾಡುತ್ತಿರುವ ನಾಗರಿಕರು. ಕೈ ಕೊಟ್ಟಿದೆ ಸರ್ವರ್ ಅದು ಆಗಿದೆ ಇದಾಗಿದೆ ಎಂದು ನೆಪ ವಡ್ಡುವ ಅಧಿಕಾರಿಗಳು. ದಲ್ಲಾಳಿಗಳಗಳ ಕೆಲಸವನ್ನು ಮಾಡಿಕೊಡಲು ಸರ್ವರ್ ಇರುತ್ತೆ, ಬ್ಯಾಂಕಿನಲ್ಲಿ ದೊಡ್ಡ ದೊಡ್ಡ ಮಂದಿಗೆ ಕೆಲಸ ಮಾಡಿಕೊಡೊ ಇವರೆಲ್ಲ, ಜನರು ಮಾಹಿತಿ ಕೇಳಿದ್ರೆ ಸೂತಾರಂ ಹೇಳಲ್ಲ ಈ ಬ್ಯಾಂಕ ಅಧಿಕಾರಿಗಳು, ಸಾಮಾನ್ಯ ಜನತಗೆ ಹತ್ತು ದಿನಗಳಿಂದ ಸತಾಯಿಸುತ್ತಿರುವುದು. ದಲ್ಲಾಳಿಗಳ ತರ ಕೆಲಸ ಮಾಡುತ್ತಿರುವ ಇಲ್ಲಿನ ಬ್ಯಾಂಕ ಸಿಬ್ಬಂದಿಗಳು ಪ್ರಭಾವಿಶಾಲಿಗಳಿಗೆ ಕುಂತೆಲ್ಲಿಯೇ ಖುದ್ದಾಗಿ ಮಾಹಿತಿ, ಬ್ಯಾಂಕ ಬ್ಯಾಲನ್ಸ್ ಮಾಹಿತಿ ಒಳಗೊಂಡಂತೆ ಎಲ್ಲವನ್ನು ಹೇಳುತ್ತಾರೆ ಅವರ ಹೇಳಿದಂತೆ ಕೆಲಸ ಮಾಡುತ್ತಾರೆ. ಅದೇ ಸಾಮಾನ್ಯ ಜನತೆ ಒಂದು ಮಾಹಿತಿ ಕೇಳಿದ್ರೆ, ಹೊಸ ಖಾತೆ ತೆರೆಯಲು ಹತ್ತಾರು ದಿನಗಳು ಕಾದು ಕಾದು ಇಲ್ಲಿನ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಯಾರಿಗೆ ಹೇಳ್ತಿರಾ ಹೇಳಿ ಎಂದು ಅಸಡ್ಡೆ ವರ್ತನೆ ಹೊಸ ಖಾತೆಗಾಗಿ ನಾಗರೀಕರು ಬ್ಯಾಂಕಿನ ಸಿಬ್ಬಂದಿಗಳಿಗೆ ಮಾಹಿತಿ ಕೇಳಿದ್ರೆ ಇವತ್ತು ಸರ್ವರ್ ಇಲ್ಲ ನಾಳೆ ಬನ್ನಿ, ನಾಡಿದ್ದು ಬನ್ನಿ ಅಂತಹ ಹತ್ತು ದಿನಗಳನ್ನು ಕಳೆದ್ರು ಹೊಸ ಖಾತೆ ಮಾತ್ರ ಮಾಡಿಕೊಡಲಿಲ್ಲ ಈ ಬಗ್ಗೆ ಯಾಕೆ ಸರ್ ಹೀಗೆ ಇಷ್ಟೊಂದು ಬಾರಿ ಅಲೆದಾಡುಸುತ್ತಿದ್ದಿರಿ ಅಂತ ಕೇಳಿದ್ರೆ, ಯಾರಿಗೆ ಹೇಳಿತ್ತಿರಾ ಹೋಗಿ ಹೇಳಿ ಯಾವ ಪೇಪರ್ ಟಿವಿ ಹಾಕಸ್ತಿರಾ ಹಾಕಿಸಿ ಅಂತ ಉಡಾಫೆ ಉತ್ತರ ನೀಡುತ್ತಾರೆ.

ರಿಯಲ್ ಎಸ್ಟೇಟ್ ದಾರರಿಗೆ ಕುಳಿತಲ್ಲಿಯೇ ಹಣ ವಿಡ್ರಾಲ್ ಮಾಡಿಕೊಡುವ ಮೂಲಕ ಇಲ್ಲಿನ ಸಿಬ್ಬಂದಿಗಳು ದಲ್ಲಾಳಿಗಳಂತೆ ವತರ್ಿಸುತ್ತಾರೆ. ಇದರಿಂದ ಬೇಸತ್ತ ನಾಗರೀಕರು ಬ್ಯಾಂಕ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕ್ರಮ ಕೈಗೊಳ್ಳದಿರುವ ಮೇಲಾಧಿಕಾರಿಗಳ ನಿಷ್ಕಾಳಜಿಯಿಂದಾಗಿ ಈ ಬ್ಯಾಂಕ ಸಿಬ್ಬಂದಿ ಸರ್ವರ ಬೀಜಿ ನೆಪದಲ್ಲಿ ಲೇಜಿಯಾಗಿದ್ದಾರೆ