ಶಾಂತಿಸಾಗರ ಸಹಕಾರಿ ಸದಸ್ಯ, ಸಿಬ್ಬಂದಿಗೆ ವಿಶೇಷ ತರಬೇತಿ ಕಾರ್ಯಾಗಾರ

Shantisagara Cooperative Member, Special Training Workshop for Staff

ಶಾಂತಿಸಾಗರ ಸಹಕಾರಿ ಸದಸ್ಯ, ಸಿಬ್ಬಂದಿಗೆ ವಿಶೇಷ ತರಬೇತಿ ಕಾರ್ಯಾಗಾರ 

ಕಾಗವಾಡ 15: ತಾಲೂಕಿನ ಶಿರಗುಪ್ಪಿಯ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಪ್ರಧಾನ ಕಚೇರಿಯ ಆಡಳಿತ ಮಂಡಳಿಯ ಸದಸ್ಯರಿಗೆ, ಶಾಖೆಗಳ ಸಲಹಾ ಸಮಿತಿಯ ಸದಸ್ಯರಿಗೆ ಮತ್ತು ಎಲ್ಲ ಶಾಖೆಗಳ ಸಿಬ್ಬಂದಿ ವರ್ಗದವರಿಗೆ ಪಟ್ಟಣದ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಒಂದು ದಿನದ ವಿಶೇಷ ತರಬೇತಿ ಶಿಬಿರವು ರವಿವಾರ ದಿ. 12 ರಂದು ಜರುಗಿತು. 


ಪ್ರಧಾನ ಶಾಖೆಯ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಕಾಗವಾಡ, ಕಬ್ಬೂರ, ಶೇಡಬಾಳ, ಸದಲಗಾ, ಇಂಗಳಿ, ಬನಜವಾಡ, ಮೊಳವಾಡ, ಚಿಂಚಲಿ ಶಾಖೆಗಳ ಸಲಹಾ ಸಮಿತಿಯ ಸದಸ್ಯರಿಗೆ, ಸಿಬ್ಬಂದಿ ವರ್ಗದವರಿಗೆ ವಿಶೇಷ ತರಬೇತಿ ಶಿಬಿರದಲ್ಲಿ ಉಪನ್ಯಾಸಕರಾಗಿ ಹರಿಹರದ ಕಿರ್ಲೋಸ್ಕರ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೋ. ಡಾ. ನಂದೀಶ ಹಿರೇಮಠ ಮಾರ್ಗದರ್ಶನ ಮಾಡಿದರು.  


ದೀಪ ಬೆಳಗಿಸಿ, ಶಿಬಿರಕ್ಕೆ ಚಾಲನೆ ನೀಡಲಾಯಿತು. ಡಾ. ನಂದೀಶ ಹಿರೇಮಠ, ಪ್ರಧಾನ ಶಾಖೆಯ ಅಧ್ಯಕ್ಷ ವಿದ್ಯಾಸಾಗರ ಮಾಣಗಾಂವೆ, ಉಪಾಧ್ಯಕ್ಷ ಪುರಂದರ ಕನವಾಡೆ, ಡಾ. ಎಂ.ಎನ್‌. ಭೋಮಾಜ, ಸೇರಿದಂತೆ ಎಲ್ಲ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. 


ಪ್ರಧಾನ ಶಾಖೆಯ ಅಧ್ಯಕ್ಷ ವ್ಹಿ.ಡಿ. ಮಾಣಗಾಂವೆ, ಉಪಾಧ್ಯಕ್ಷ ಪುರಂದರ ಕನವಾಡೆ, ನಿರ್ದೇಶಕರಾದ ಡಾ. ಎಂ.ಎನ್‌. ಭೋಮಾಜ, ಸಾಗರ ದುಗ್ಗೆ, ಮಹಾವೀರ ಮಾದನ್ನವರ, ಅಶ್ವತ ಪಾಟೀಲ, ಧನಪಾಲ ಬೋರಗಾಂವೆ, ಸುನೀಲ ಕುರುಂದವಾಡೆ, ಬಾಬಾಸಾಬ ಕಾಗವಾಡೆ, ಆಧಿನಾಥ ಮುಗಳಖೋಡ, ದಾದಾ ಬನಜವಾಡೆ, ಸುನೀಲ ಪಾಟೀಲ, ಭಗವಂತ ಡಿಗ್ರಜೆ, ಶ್ರೀಕಾಂತ ಬೋರಗಾಂವೆ, ಕಲ್ಲಪ್ಪಾ ಐತವಾಡೆ, ವಿದ್ಯಾಸಾಗರ ಚೌಗುಲೆ, ಪ್ರವೀಣ ಹುಕ್ಕೇರಿ, ಪ್ರಧಾನ ಶಾಖೆಯ ಕಾರ್ಯದರ್ಶಿ ಅನಂತಕುಮಾರ ಐನಾಪೂರೆ ಸ್ವಾಗತಿಸಿದರು. ಶಿಕ್ಷಕ ರಾಹುಲ ಕಟ್ಟಿ ಪರಿಚಯಿಸಿದರು. ಶಿಕ್ಷಕ ಎಸ್‌.ಎಸ್‌. ಜಮಖಂಡಿ ನಿರೂಪಿಸಿ, ವಂದಿಸಿದರು.